ಬೆಂಗಳೂರು: ಆರ್ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ನ್ಯಾಯಾಲಯ ಅಭಿಪ್ರಾಯಪಟ್ಟಿದ್ದ ಹೇಳಿಕೆಯನ್ನು ತೆಗೆದುಹಾಕಬೇಕು ಎಂದು ಬಿಬಿಎಂಪಿ ಸದಸ್ಯೆ ಗೌರಮ್ಮ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಬುಧವಾರ ತಳ್ಳಿ ಹಾಕಿದೆ.

ಮುಖ್ಯನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮನವಿಯನ್ನು ತಳ್ಳಿ ಹಾಕಿದೆ. ಆರ್ಟಿಐ ಕಾರ್ಯಕರ್ತ ಲಿಂಗರಾಜು ಅವರ ಹತ್ಯೆಗೆ ಸುಫಾರಿ ನೀಡಲು ಪಾಲಿಕೆ ಸದಸ್ಯೆ ಗೌರಮ್ಮ ಚಿನ್ನಾಭರಣಗಳನ್ನು ಅಡವು ಇಟ್ಟಿದ್ದರು ಎನ್ನುವ ಮಾಹಿತಿ ಗೊತ್ತಿದ್ದರೂ ಪೊಲೀಸರು ಅವರನ್ನು ಬಂಧಿಸಿರಲಿಲ್ಲ ಮತ್ತು ಈ ಅಪರಾಧದಲ್ಲಿ ಗೌರಮ್ಮ ಭಾಗಿಯಾಗಿರುವ ಬಗ್ಗೆಯೂ ಸಂಶಯಪಟ್ಟಿರಲಿಲ್ಲ ಎಂದು 2012ರ ಡಿಸೆಂಬರ್ 10ರಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.