ಕೋಲಾರ: ಜಿಲ್ಲೆಯ ಮಾವು ಬೆಳೆಗಾರರು ಆತಂಕದಲ್ಲಿದ್ದಾರೆ. ಶುಕ್ರವಾರ ರಾತ್ರಿ ಬೀಸಿದ ಅಕಾಲಿಕ ಬಿರುಗಾಳಿ ಮತ್ತು ಆಲಿಕಲ್ಲು ಮಳೆ ಮಾವಿನ ಫಸಲನ್ನು ನೆಲಕ್ಕೆ ಕೆಡವಿದೆ.

ನೆಲಕ್ಕೆ ಬಿದ್ದ ಕೆ.ಜಿ.ಗಟ್ಟಲೆ ಪೀಚು ಮಾವಿನ ಕಾಯಿಗೆ ಬೆಲೆಯೇ ಇಲ್ಲದಂತಾಗಿದೆ. ರೈತರ ಅತಂತ್ರ ಸ್ಥಿತಿಯನ್ನು ಅರಿತ ವ್ಯಾಪಾರಿಗಳು ಇಷ್ಟಬಂದಂತೆ ಬೆಲೆ ನಿರ್ಧರಿಸುತ್ತಿದ್ದಾರೆ. ನೆಲಕ್ಕೆ ಉದುರಿದ ಮಾವಿನ 50 ಕೆ.ಜಿ. ಮೂಟೆ ಸ್ಥಳೀಯ ಮಾರುಕಟ್ಟೆಯಲ್ಲಿ ಕೇವಲ ಇಪ್ಪತ್ತು ರೂಪಾಯಿಗೆ (ಅಂದರೆ ಒಂದು ಕೆ.ಜಿ ಮಾವಿಗೆ ಕೇವಲ 40 ಪೈಸೆಯಂತೆ) ಮಾರಾಟವಾಗಿದೆ. ದೂರದ ಚೆನ್ನೈನಲ್ಲಿ ಬೆಲೆ ಬರಬಹುದು ಎಂದು ಹೋದವರಿಗೆ ಮೂವತ್ತು ರೂಪಾಯಿ ಹೆಚ್ಚಿಗೆ ಸಿಕ್ಕಿದೆ!

ಕಳೆದ ಶುಕ್ರವಾರ ಶ್ರೀನಿವಾಸಪುರ ತಾಲ್ಲೂಕಿನ ಸುತ್ತಮುತ್ತ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಬೀಸಿದ ಬಿರುಗಾಳಿ, ಮಳೆ ಮಾವು ಬೆಳೆಗಾರರ ಅದೃಷ್ಟದ ರೇಖೆಯನ್ನೆ ಬದಲಾಯಿಸುವ ಮಟ್ಟಿಗೆ ಮಾರಕ ಪರಿಣಾಮ ಬೀರಿದೆ.

15 ದಿನದ ಹಿಂದೆ ಜಿಲ್ಲೆಯಾದ್ಯಂತ ಸುರಿದಿದ್ದ ಮಳೆ ಮಾವಿನ ಇಳುವರಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿತ್ತು. ಅದುವರೆಗೂ ಇದ್ದ ಉಷ್ಣಾಂಶ ಕಡಿಮೆಯಾಗಿ, ತೇವಾಂಶ ಮೂಡಿದ್ದರಿಂದ ಮಾವಿನಕಾಯಿ ಉದುರುವ ಪ್ರಮಾಣ ಈ ಬಾರಿ ಕಡಿಮೆಯಾಗಲಿದೆ ಎಂದು ಬಹುತೇಕ ರೈತರು ಭಾವಿಸಿದ್ದರು. ಆದರೆ ಕಾಯಿ ಬಲಿಯುವ ಮುನ್ನವೇ ಗಾಳಿ-ಮಳೆ ಹಾರಿಸಿಕೊಂಡು ಹೋಗಿದೆ. ರಾಜ್ಯದಲ್ಲೆ ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರ ತಾಲ್ಲೂಕು ಸುಮಾರು 50 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ತಾಲ್ಲೂಕು ಕೇಂದ್ರದ 10 ಕಿಮೀ ಸುತ್ತಲೂ ಗಾಳಿ-ಮಳೆ ಮಾವಿಗೆ ಹಾನಿ ಮಾಡಿದೆ.

ಉದುರಿದ ಮಾವು ತಳಿಗಳಲ್ಲಿ ತೋತಾಪುರಿ ಪ್ರಮಾಣ ಹೆಚ್ಚು. ನೀಲಂ, ರಾಜಗೀರ, ಬೇನಿಷಾ, ಬಾದಾಮಿ ಸೇರಿದಂತೆ ಬಹುತೇಕ ಕಾಯಿಗಳು ನೆಲಕಚ್ಚಿವೆ. ನೆಲಕ್ಕೆ ಉದುರಿದ ಮಾವಿನ 50 ಕೆಜಿ ಮೂಟೆ ಸ್ಥಳೀಯ ಮಾರುಕಟ್ಟೆಯಲ್ಲಿ ಕೇವಲ ಇಪ್ಪತ್ತು ರೂಪಾಯಿಗೆ ಮಾರಾಟವಾಗಿದೆ. ದೂರದ ಮಡ್ರಾಸಿನಲ್ಲಿ ಬೆಲೆ ಬರಬಹುದು ಎಂದು ಹೋದವರಿಗೆ ಮೂವತ್ತು ರೂಪಾಯಿ ಹೆಚ್ಚಿಗೆ ಸಿಕ್ಕಿದೆ ಎಂಬುದು ಶ್ರೀನಿವಾಸಪುರದ ರೈತ ರಾಮಪ್ಪನವರ ವಿಷಾದದ ನುಡಿ.

’100 ಟನ್ಗಿಂತಲೂ ಹೆಚ್ಚು ಮಾವಿನ ಪೀಚು ಕಾಯಿಗಳು ಗಾಳಿ- ಮಳೆಯಿಂದ ಉದುರಿರಬಹುದು. ಪೀಚು ಕಾಯಿಗಳು ಒಂದು ಮೂಟೆ ನಷ್ಟವಾದರೆ 15 ಮೂಟೆ ನಷ್ಟವಾದಂತೆ. ಏಕೆಂದರೆ ಅವು ಬಲಿತರೆ ಅಷ್ಟು ತೂಕವಾಗುತ್ತದೆ. ಭರ್ತಿ ಇಳುವರಿಯ ವರ್ಷವೆಂದು ನಂಬಿ ಕೂತರೆ ಹೀಗಾಗಿದೆ’ ಎನ್ನುತ್ತಾರೆ ರಾಮಪ್ಪ.

ಇಲಾಖೆ ಸಂಕಟ: ಮಾವಿನ ಬೆಳೆಗಾರರ ಈ ಸಂಕಟದ ಬಗ್ಗೆ ಕೇಳಿದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಮ್ಮ ಸಂಕಟವನ್ನು ತೋಡಿಕೊಳ್ಳುತ್ತಾರೆ. ಕಾಯಿಗಳು ಉದುರಿ ನಾಲ್ಕು ದಿನವಾದರೂ ಅಧಿಕಾರಿಗಳು ಮಾವು ತೋಟಗಳ ಕಡೆಗೆ ನಡೆದಿಲ್ಲ.

ಇಲಾಖೆಯ ಬಹುತೇಕ ಸಿಬ್ಬಂದಿಯನ್ನು ಜಿಲ್ಲೆಯ ಉದ್ಯೋಗಖಾತ್ರಿ ಯೋಜನೆಗಳ ಪರಿಶೀಲನೆಗೆ ನಿಯೋಜಿಸಲಾಗಿದೆ. ಹೀಗಾಗಿ ತೋಟಗಳಿಗೆ ತೆರಳಿ ಮಾವು ನಷ್ಟದ ಅಂದಾಜು ಮಾಡುವ ಕೆಲಸ ಇನ್ನೂ ನಡೆದಿಲ್ಲ.

‘ಬೆಳೆ ನಷ್ಟ ಅಂದಾಜು ಇನ್ನೂ ಮಾಡಬೇಕಾಗಿದೆ. ಶ್ರೀನಿವಾಸಪುರದಲ್ಲಿ ಮತ್ತು ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿ ಕಾಯಿಗಳು ಉದುರಿವೆ ಎಂದು ತಿಳಿದುಬಂದಿದೆ. ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ಪರಿಶೀಲನೆಗೆ ಸಿಬ್ಬಂದಿ ನಿಯೋಜನೆಯಾಗಿರುವುದರಿಂದ ನಷ್ಟ ಅಂದಾಜು ಮಾಡಲು ಸಿಬ್ಬಂದಿ ಇಲ್ಲ. ರೈತರಿಂದಲೂ ಮಾಹಿತಿ ಬರುತ್ತಿಲ್ಲ. ರೈತರೇ ಇಲಾಖೆಯನ್ನು ಸಂಪರ್ಕಿಸಿ ನಷ್ಟದ ಕುರಿತು ಮಾಹಿತಿ ನೀಡಿದರೆ ಒಳಿತು’ ಎಂದು ಅಧಿಕಾರಿಹೇಳಿದರು.

ರಾಜ್ಯದಲ್ಲಿ ಬೆಳೆಯಲಾಗುವ ಮಾವಿನ ಪ್ರಮಾಣದಲ್ಲಿ (1,17,381 ಹೆಕ್ಟೇರ್) ಶೇ 47ಕ್ಕೂ ಹೆಚ್ಚು ಪ್ರದೇಶ ಈ ಜಿಲ್ಲೆಯಲ್ಲಿಯೇ ಇದೆ. ಏಷ್ಯಾ ಖಂಡದಲ್ಲೆ ಒಂದೇ ತಾಕಿನಲ್ಲಿ (ಸಾವಿರಾರು ಎಕರೆಯ ವ್ಯಾಪ್ತಿಯಲ್ಲಿ ಒಂದೇ ಸಮನೆ) ಅಧಿಕ ಪ್ರಮಾಣದಲ್ಲಿ (22,325 ಹೆಕ್ಟೇರ್) ಮಾವು ಬೆಳೆಯುವ ಪ್ರದೇಶವೆಂಬ ಖ್ಯಾತಿ ಇದೇ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಪಡೆದಿದೆ.

ಉಳಿದಂತೆ ಮುಳಬಾಗಲಿನ 11,670 ಹೆ, ಬಂಗಾರಪೇಟೆಯ 3,461 ಹೆ, ಕೋಲಾರದ 4,294 ಹೆ, ಮತ್ತು ಮಾಲೂರಿನ 1,427 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪೂರ್ಣಾವಧಿ ಇಳುವರಿಯ ವರ್ಷವಾದ 2009ರಲ್ಲಿ 4,64,115 ಟನ್ ಮಾವನ್ನು ಬೆಳೆಯಲಾಗಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚು ಫಸಲು ಬರುವ ನಿರೀಕ್ಷೆಯನ್ನು ಗಾಳಿ-ಮಳೆ ಬುಡಮೇಲು ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.