ಶುಕ್ರವಾರ, ಮೇ 7, 2021
19 °C

`ಬಿಲ್ಡ್ ಟೆಕ್' ವಸ್ತು ಪ್ರದರ್ಶನ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಸದೃಢ, ಸುಂದರ ಮತ್ತು ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಮತ್ತು ಅತ್ಯಾಧುನಿಕ ಪರಿಕರಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಇದೇ 14ರಿಂದ 16ರ ವರೆಗೆ ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಬಾಗಲಕೋಟೆ ಅಸೋಸಿಯೇಷನ್ ಆಫ್ ಸಿವಿಲ್ ಎಂಜಿನಿಯರ್ಸ್‌ ಮತ್ತು ಬೆಂಗಳೂರಿನ ಯು.ಎಸ್.ಕಮ್ಯುನಿಕೇಶನ್ ವತಿಯಿಂದ `ಬಿಲ್ಡ್ ಟೆಕ್-2013' ಬೃಹತ್ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.`ವಸ್ತು ಪ್ರದರ್ಶನದಲ್ಲಿ ಕಟ್ಟಡ ನಿರ್ಮಾಣ, ಗೃಹಾಲಂಕಾರ ಸಾಮಾಗ್ರಿಗಳು, ಗೃಹಸಾಲ ಸೌಲಭ್ಯ, ಸಿಮೆಂಟ್, ಗ್ರಾನೈಟ್, ಎಲೆಕ್ಟ್ರಿಕಲ್, ಬಾತ್ ಫಿಟ್ಟಿಂಗ್ಸ್, ಕಿಟಕಿ, ಗ್ಲಾಸ್, ಸೋಲಾರ್ ಪೀಠೋಪಕರಣ, ಬಣ್ಣದ ಲೇಪನ, ಮನೆಯ ವಿನ್ಯಾಸ, ಆಕಾರ, ಅಳತೆ, ಮನೆ ನಿರ್ಮಾಣಕ್ಕೆ ಬಳಸಬೇಕಾದ ಮರಳು, ಇಟ್ಟಿಗೆ, ಕಲ್ಲು, ಮಾಡ್ಯುಲರ್ ಅಡಿಗೆ ಮನೆ, ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮತ್ತಿತರ ಕುರಿತು ಪ್ರದರ್ಶನ ಮತ್ತು ಸಾರ್ವಜನಿಕರಿಗೆ ಉಚಿತ ಮಾರ್ಗದರ್ಶನ ನೀಡಲಾಗುವುದು' ಎಂದು ಬಾಗಲಕೋಟೆ ಅಸೋಸಿಯೇಷನ್ ಆಫ್ ಸಿವಿಲ್ ಎಂಜಿನಿಯರ್ಸ್‌ ಅಧ್ಯಕ್ಷ ಆರ್.ಎಂ. ತಪಶೆಟ್ಟಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ವಸ್ತು ಪ್ರದರ್ಶನದಲ್ಲಿ 50ರಿಂದ 60 ವಿವಿಧ ಕಂಪೆನಿಗಳು ಭಾಗವಹಿಸಲಿವೆ. ಅಲ್ಲದೇ ಎಸ್‌ಬಿಐ, ಎಚ್‌ಡಿಎಫ್‌ಸಿ, ವಿಜಯಾ ಬ್ಯಾಂಕ್‌ನ ಸಿಬ್ಬಂದಿ ಭಾಗವಹಿಸಲಿದ್ದಾರೆ' ಎಂದರು. `ರಾಜ್ಯದಲ್ಲಿ ಈಗಾಗಲೇ ಶಿವಮೊಗ್ಗ, ವಿಜಾಪುರ, ಗುಲ್ಬರ್ಗಾ, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಉಡುಪಿ ಮತ್ತು ಹಾಸನಗಳಲ್ಲಿ ಬೃಹತ್ ವಸ್ತು ಪ್ರದರ್ಶನವನ್ನು ಯಶಸ್ವಿಯಾಗಿ ಏರ್ಪಡಿಸಲಾಗಿತ್ತು' ಎಂದು ಹೇಳಿದರು.ಉದ್ಘಾಟನೆ: `ಇದೇ 14ರಂದು ಬೆಳಿಗ್ಗೆ 10.30ಕ್ಕೆ ವಸ್ತು ಪ್ರದರ್ಶನವನ್ನು ಶಾಸಕ ಎಚ್.ವೈ. ಮೇಟಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಐಸಿಐ ಅಧ್ಯಕ್ಷ ಡಾ.ಅರವಿಂದ ಗಲಗಲಿ, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಎಂ.ಎ.ಪ್ರಭಣ್ಣನವರ,  ಆಲ್ಟ್ರಾಟೆಕ್‌ನ ಮಾರುಕಟ್ಟೆ ಮುಖ್ಯಸ್ಥ ಎಸ್.ವಿ.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ' ಎಂದರು.ಶ್ರೀನಿವಾಸ ಕಲಕರ್ಣಿ, ಉಮಾಪತಿ, ಮಲ್ಲಿಕಾರ್ಜುನ ಬಳ್ಳೊಳ್ಳಿ ಮತ್ತು ಗುರು ಮದಿನಕರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.