ಗುರುವಾರ , ಮೇ 26, 2022
31 °C

ಬಿಸಿಯೂಟ ಸೇವನೆ ತಮಿಳುನಾಡಿನಲ್ಲಿ ನೂರಾರು ಮಕ್ಕಳು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇವೇಲಿ (ಪಿಟಿಐ): ಬಿಹಾರದಲ್ಲಿ ಬಿಸಿಯೂಟ ಸೇವಿಸಿ ಮೃತಪಟ್ಟ ಮಕ್ಕಳ ಸಂಖ್ಯೆ 23ಕ್ಕೆ ಏರಿದ ಬೆನ್ನಲ್ಲೆ ಗುರುವಾರ ತಮಿಳುನಾಡಿನಲ್ಲಿ ಬಿಸಿಯೂಟ ಸೇವಿಸಿದ ನೂರಾರು ಹೆಣ್ಣುಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಇಲ್ಲಿನ ನೇವೆಲಿ ಲಿಗ್‌ನೈಟ್ ಕಾರ್ಪೋರೇಷನ್ ಬಾಲಕಿಯರ ಶಾಲೆಯ 7 ಹಾಗೂ 8 ನೇ ತರಗತಿಯ ಸುಮಾರು 105 ವಿದ್ಯಾರ್ಥಿನಿಯರು ಗುರುವಾರ ಮಧ್ಯಾಹ್ನದ ಬಿಸಿಯೂಟದಲ್ಲಿದ್ದ ಮೊಟ್ಟೆಯನ್ನು ಸೇವಿಸಿದ ಬಳಿಕ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಕೆಲವರು ಪ್ರಜ್ಞಾಶೂನ್ಯರಾದರು.ತಕ್ಷಣ ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.