ಹೊಳೆನರಸೀಪುರ: ಹಲ್ಲಿ ಬಿದ್ದಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ತಾಲ್ಲೂಕಿನ ಮಲ್ಲಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.

ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಪಲಾವ್ ತಯಾರಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೆ ಆಹಾರ ಬಡಿಸಿದ ನಂತರ ಪ್ರಾರ್ಥನೆ ಮಾಡಿ ಆಹಾರ ಸೇವಿಸುವುದು ಇಲ್ಲಿನ ನಿಯಮ.

ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಬಡಿಸಿದ ಪಲಾವ್ ಜೊತೆಯಲ್ಲಿ ಬೆಂದಿದ್ದ ಹಲ್ಲಿ ಸಿಕ್ಕಿದೆ. ತಟ್ಟೆಯಲ್ಲಿ ಹಲ್ಲಿ ಕಂಡ ವಿದ್ಯಾರ್ಥಿ ಆತಂಕಗೊಂಡು ಹಲ್ಲಿ ಹಲ್ಲಿ ಎಂದು ಕೂಗಿದ್ದಾನೆ. ಆದರೆ ಪ್ರಾರ್ಥನೆಗೂ ಮೊದಲೇ ಕೆಲವು ವಿದ್ಯಾರ್ಥಿಗಳು ಪಲಾವ್ ತಿಂದಿದ್ದರು. ಆ ವಿದ್ಯಾರ್ಥಿಗಳು ಸ್ವಲ್ಪ ಹೊತ್ತಿನಲ್ಲೇ ವಾಂತಿ ಮಾಡಿಕೊಂಡರು.

ಕೆಲವೇ ನಿಮಿಷಗಳಲ್ಲಿ ಸುದ್ದಿ ಗ್ರಾಮದ ತುಂಬಾ ಹರಡಿತು. ಪಾಲಕರು, ಸಾರ್ವಜನಿಕರು ಶಾಲೆಗೆ ಧಾವಿಸಿದ್ದರಿಂದ ಸ್ವಲ್ಪಹೊತ್ತು ಗೊಂದಲ ಉಂಟಾಯಿತು ಎಂದು ಶಿಕ್ಷಕ ಶ್ರೀನಿವಾಸ್ ತಿಳಿಸಿದರು.

ಶಾಲೆಯ ಎ್ಲ್ಲಲ ಮಕ್ಕಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸಂಜೆ ಮನೆಗೆ ಮರಳಿದರು.

`ಶಾಲೆಯಲ್ಲಿ ನೀರಿನ ವ್ಯವಸ್ಥೆ ಸರಿ ಇಲ್ಲ. ಕೊಳವೆಬಾವಿಯ ಪೈಪ್ ಒಡೆದು ನೀರಿನೊಂದಿಗೆ ಗಲೀಜು ಬರುತ್ತದೆ~ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್.ದೇವೇಗೌಡ ಅವರಿಗೆ ಗ್ರಾಮಸ್ಥರು ದೂರು ನೀಡಿದರು. ಬಿಇಒ ಯೋಗೇಶ್, ತಾ.ಪಂ. ಸದಸ್ಯ ಲೋಕೇಶ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಮಕ್ಕಳ ಆರೋಗ್ಯ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.