ಶನಿವಾರ, ಜೂನ್ 19, 2021
26 °C

ಬಿಹಾರಕ್ಕೆ ವಿಶೇಷ ಸ್ಥಾನಮಾನ: ನಿತೀಶ್‌ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಪಿಟಿಐ): ಬಿಹಾರದ ಕುರಿತು ಕೇಂದ್ರ ಸರ್ಕಾರದ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ಬಿಹಾರಕ್ಕೆ ವಿಶೇಷ ಸ್ಥಾನ­ಮಾನ ನೀಡಬೇಕೆಂದು ಒತ್ತಾಯಿಸಿ ಇಲ್ಲಿನ ಗಾಂಧಿ ಮೈದಾನದಲ್ಲಿ ಜೆಡಿ­(ಯು) ಕೈಗೊಂಡಿರುವ ಸತ್ಯಾಗ್ರಹ­ದಲ್ಲಿ ಮುಖ್ಯಮಂತ್ರಿ  ನಿತೀಶ್‌ ಕುಮಾರ್ ಭಾನುವಾರ ಪಾಲ್ಗೊಂಡರು.ಜೆಡಿ (ಯು)ನ ಹಿರಿಯ ನಾಯಕರು ಮತ್ತು ಸಚಿವರೊಂದಿಗೆ ತಮ್ಮ ಅಧಿಕೃತ ನಿವಾಸದಿಂದ ಗಾಂಧಿ ಮೈದಾನಕ್ಕೆ ಆಗಮಿಸಿದ ನಿತೀಶ್‌­ಕುಮಾರ್, ಮಹಾತ್ಮ ಗಾಂಧಿ ಪ್ರತಿ­ಮೆಯ ಮುಂದೆ ಧರಣಿ ಕುಳಿತರು.ಐದು ಗಂಟೆಗಳ ಕಾಲ ಸತ್ಯಾಗ್ರಹ­ದಲ್ಲಿ ಕುಳಿತಿದ್ದ ನಿತೀಶ್‌ಕುಮಾರ್, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ರಾಜ್ಯದ ಜನರೊಂದಿಗೆ ಕೈಗೊಂಡಿರುವ ಈ ಸತ್ಯಾಗ್ರಹ ಯಶಸ್ವಿಯಾಗಲಿದೆ. ಅಭಿವೃದ್ಧಿಗಾಗಿ ಬಿಹಾರವೂ ಕೂಡಾ ವಿಶೇಷ ಸ್ಥಾನಮಾನ ಪಡೆಯಲು ಅರ್ಹತೆ ಹೊಂದಿದೆ. ಈ ನಿಟ್ಟಿನಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.