ಗುರುವಾರ , ಏಪ್ರಿಲ್ 15, 2021
24 °C

ಬೀಜೋತ್ಪಾದಕರ ಸಂಘ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಬೀಜೋತ್ಪದನೆ ಮಾಡುವ ರೈತರು ಮತ್ತು ಕಂಪೆನಿಗಳ ನಡುವೆ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು, ಯಾರಿಗೂ ಅನ್ಯಾಯ ವಾಗದ ರೀತಿಯಲ್ಲಿ ಬೀಜದ ಗುಣ ಮಟ್ಟದ ಬಗ್ಗೆ ಅರಿವು ಮೂಡಿಸಬೇಕು ರೈತರ ಆರ್ಥಿಕ ಮಟ್ಟ ಸುಧಾರಿಸಲು ರಾಜ್ಯವ್ಯಾಪಿ  ಕರ್ನಾಟಕ ರಾಜ್ಯ ಬೀಜೋತ್ಪಾದಕರ ಸಂಘ ಅಸ್ತತ್ವಕ್ಕೆ ಬಂದಿದೆ ಎಂದು ಅಧ್ಯಕ್ಷ ಎಂ.ಜಿ. ಪಾಟೀಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೀಜ ಬೆಳೆಗಾರರು ಮತ್ತು ಕಂಪೆನಿ ಗಳಿಗೆ ಇಬ್ಬರಿಗೂ ನ್ಯಾಯ ಒದಗಿಸುವುದು, ಕೃಷಿಗೋಷ್ಠಿ, ಕ್ಷೇತ್ರೋತ್ಸವ ಮಾಡಲಾಗುವುದು ಎಂದರು.

ರಾಜ್ಯ ಬೀಜೋತ್ಪಾದಕರ ಸಂಘದ ನೂತನ ಕಾರ್ಯದರ್ಶಿ ಎಲ್.ಎಸ್. ಹುಲಗೂರ ಮಾತನಾಡಿ, ಬೀಜ ಬೆಳೆಗಾರರ ಮತ್ತು ರೈತರ ನಡುವೆ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿದ್ದು, ಬೀಜೋತ್ಪಾದಕರ ಸಂಘದಿಂದ ಅದನ್ನು ಸರಿಪಡಿಸ ಲಾಗುವುದು. ಜಿಲ್ಲೆಯಲ್ಲಿ ಬೀಜೋತ್ಪಾದನೆಯಿಂದ ರೈತರು ಆರ್ಥಿಕವಾಗಿ ಸದೃಢವಾಗಿದ್ದು, ಧಾರ್ಮಿಕ, ಶೈಕ್ಷಣಿಕ, ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯನ್ನು ಹೊಂದಿದ್ದಾರೆ ಎಂದರು.

ಪದಾಧಿಕಾರಿಗಳು: ಕರ್ನಾಟಕ ರಾಜ್ಯ ಬೀಜೋತ್ಪಾದಕರ ಸಂಘ ಎಂ.ಜಿ. ಪಾಟೀಲ ಅಧ್ಯಕ್ಷರಾಗಿ ಮತ್ತು ಎಲ್.ಎಸ್. ಹುಲಗೂರ ಕಾರ್ಯ ದರ್ಶಿಯಾಗಿ ಆಯ್ಕೆಯಾಗಿ ದ್ದಾರೆ. ಟಿ. ವೀರಣ್ಣ (ಉಪಾಧ್ಯಕ್ಷ), ಟಿ.ಎಂ. ವೆಂಕಟೇಶಗೌಡ (ಖಚಾಂಚಿ), ವಿ.ಎನ್.ಹಿರೇಮಠ, ಆರ್.ಜಿ. ಮಿರ್ಜಾಪುರ, ಆರ್.ಜಗನ್ನಾಥ, ಜಯಪ್ರಕಾಶ ಟಿ.ಆರ್. ಬಸವನಗೌಡ ಐ. ಪಾಟೀಲ, ಮಾಲತೇಶ ಎಂ. ಜಾಧವ, ಪ್ರಕಾಶ ಮುದಿಗೌಡ್ರ, ರಾಮಚಂದ್ರ ಪತ್ತಾರ, ಭಗವಂತರಾವ್ ಜಿ. ಕಟಗಿ, ಎಚ್. ಎನ್. ದೇವಕುಮಾರ, ರವೀಂದ್ರ ಜಿ. ಕರೇಚಿಕ್ಕಪ್ಪನವರ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.