ಬೆಂಗಳೂರು: `ನಾವು ಪ್ರಾಣಿಗಳ (ಬೀದಿನಾಯಿ) ವಿರೋಧಿಗಳಲ್ಲ. ಆದರೆ ಮನುಷ್ಯನ ಮೇಲೆ ದಾಳಿ ನಡೆಸುವ ಪ್ರಾಣಿಯನ್ನು ನಾಶ ಮಾಡಲೇಬೇಕು~ ಎಂದು ಹೈಕೋರ್ಟ್ ಗುರುವಾರ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

ನಗರದಲ್ಲಿ ಹೆಚ್ಚಿರುವ ಬೀದಿನಾಯಿ ಹಾವಳಿ ತಪ್ಪಿಸಲು ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ ನಾಯಿ ದಾಳಿಗೆ ತುತ್ತಾಗಿರುವ ಯಲಹಂಕದ ಐದು ವರ್ಷದ ಬಾಲಕ ಜಿಷ್ಣು ಹಾಗೂ ಆತನ ಪೋಷಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.
2010ರ ಜುಲೈ 6ರಂದು ಸುಮಾರು 5-6 ನಾಯಿಗಳ ದಾಳಿಗೆ ಜಿಷ್ಣು ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದ. ಪಾಲಿಕೆಯ ತಪ್ಪಿನಿಂದಾಗಿ ಈ ರೀತಿ ಆಗಿದ್ದು, ಐದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎನ್ನುವುದು ಆತನ ಕೋರಿಕೆ.

ಈ ಅರ್ಜಿಗೆ ಆಕ್ಷೇಪಣಾ ಹೇಳಿಕೆ ಸಲ್ಲಿಸಲು ಕಳೆದ ಬಾರಿ ಕೋರ್ಟ್, ಪಾಲಿಕೆಗೆ ನಿರ್ದೇಶಿಸಿತ್ತು. ಅದರಂತೆ ಆಕ್ಷೇಪಣೆ ಸಲ್ಲಿಸಿದ್ದ ಪಾಲಿಕೆ `ಕಲ್ಲು ಹೊಡೆಯುವುದು, ಅಟ್ಟಿಸಿಕೊಂಡು ಹೋಗುವುದು ಹೀಗೆ ಮಕ್ಕಳು ಮಾಡುವ ತುಂಟತನದಿಂದಾಗಿ ಅವರ ಮೇಲೆಯೇ ನಾಯಿಗಳು ದಾಳಿ ನಡೆಸುತ್ತಿವೆ. ಇದರಲ್ಲಿ ನಾಯಿಗಳದ್ದು ತಪ್ಪು ಇಲ್ಲ~ ಎಂದು ಶ್ವಾನಗಳನ್ನು ಸಮರ್ಥಿಸಿಕೊಂಡಿತ್ತು. ನಾಯಿಗಳ ಬದಲು ಮಕ್ಕಳಿಗೆ ಬುದ್ಧಿಹೇಳಬೇಕು ಎಂಬ ಧಾಟಿಯಲ್ಲಿ ಪ್ರಮಾಣಪತ್ರ ಇತ್ತು. ಇದನ್ನು ನೋಡಿದ ನ್ಯಾಯಮೂರ್ತಿಗಳು ತೀವ್ರ ಕೋಪಗೊಂಡರು.

`24 ಗಂಟೆ ಕಾಲ ಬೀದಿಯಲ್ಲಿಯೇ ಅಲೆದಾಡುತ್ತಿರುವ ಅದೆಷ್ಟು ಮಂದಿ ಬೆಂಗಳೂರು ಒಂದರಲ್ಲಿಯೇ ಇಲ್ಲ ಹೇಳಿ. ಅವರ ಪೋಷಕರು ತುತ್ತು ಊಟಕ್ಕಾಗಿ ಅಲೆದಾಡುತ್ತಿರುತ್ತಾರೆ. ಆ ಮಕ್ಕಳಿಗೆಲ್ಲ ಬುದ್ಧಿ ಹೇಳುತ್ತಾ ಕುಳಿತುಕೊಳ್ಳಬೇಕೆ, ಇದೆಂತಹ ಪ್ರಮಾಣ ಪತ್ರ ಸಲ್ಲಿಸಿದ್ದೀರಿ ನೀವು. ಇಂತಹ ಪ್ರಮಾಣಪತ್ರದಿಂದ ನೀವು ತೊಂದರೆಗೆ ಒಳಗಾಗುತ್ತೀರಿ. ಇದನ್ನು ಹಿಂದಕ್ಕೆ ಪಡೆದು ನಾಯಿಯ ಹಾವಳಿ ತಡೆಗೆ ಏನು ಕ್ರಮ ತೆಗೆದುಕೊಳ್ಳಲಿದ್ದೀರಿ ಎಂಬ ಬಗ್ಗೆ ಉಲ್ಲೇಖಿಸಿ~ ಎಂದು ಪಾಲಿಕೆ ಪರ ವಕೀಲರಿಗೆ ನ್ಯಾಯಮೂರ್ತಿಗಳು ತಿಳಿಸಿದರು.

ಸಸ್ಯಾಹಾರ ತಿನ್ನುವುದಿಲ್ಲವೆ?:  `ಎಲ್ಲೆಂದರಲ್ಲಿ ಮಾಂಸದ ತುಣುಕುಗಳನ್ನು ಚೆಲ್ಲಾಡುವ ಕಾರಣದಿಂದ ನಾಯಿ ಹಾವಳಿ ಹೆಚ್ಚಾಗಿದೆ. ಅದನ್ನು ತಿನ್ನಲು ಬಂದಾಗ ಮಕ್ಕಳು ಮಾಡುವ ಚೇಷ್ಟೆಯಿಂದ ಅವರ ಮೇಲೆ ನಾಯಿ ಎರಗುತ್ತದೆ~ ಎಂದು ಪಾಲಿಕೆ ಪರ ವಕೀಲರು ಹೇಳಿದರು.

ಅದಕ್ಕೆ ನ್ಯಾ.ಸೇನ್, `ನಾಯಿಗಳು ಸಸ್ಯಾಹಾರ ತಿನ್ನುವುದೇ ಇಲ್ಲವೇ, ಬರಿ ಮಾಂಸಾಹಾರ ಎನ್ನುತ್ತಿದ್ದೀರಲ್ಲ. ಇವೆಲ್ಲ ಕಾರಣ ನಮಗೆ ಬೇಕಿಲ್ಲ. ದಾಳಿ ನಡೆಸುವ ನಾಯಿಗಳಿದ್ದರೆ ಅವುಗಳ ನಾಶ ಮಾಡುವ ಸಂಬಂಧ ಹಾಗೂ ಹಾನಿಗೆ ಒಳಗಾದವರಿಗೆ ಯಾವ ರೀತಿ ಪರಿಹಾರ ನೀಡಲಾಗುವುದು ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆಗೆ ಮಾಹಿತಿ ನೀಡಿ~ ಎಂದರು.

ಈ ಅರ್ಜಿಯಲ್ಲಿ ಹಲವು ಪ್ರಾಣಿ ಪರ ಸಂಘಟನೆಗಳನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಆ ಪೈಕಿ, `ಕರುಣಾ ಪ್ರಾಣಿಗಳ ಕ್ಷೇಮಾಭಿವೃದ್ಧಿ ಸಂಘ~ ಹಾಗೂ `ಕೃಪಾ ಲವಿಂಗ್ ಎನಿಮಲ್ಸ್~ ಸಂಘಗಳಿಂದ ಯಾರೊಬ್ಬರೂ ನ್ಯಾಯಾಲಯವನ್ನು ಪ್ರತಿನಿಧಿಸಲಿಲ್ಲ. ಇದರಿಂದ ಅಸಮಾಧಾನಗೊಂಡ ಪೀಠವು, ಈ ಸಂಘಗಳಿಗೆ ಸರ್ಕಾರದಿಂದ ಬಿಡುಗಡೆಗೊಳಿಸುವ ಹಣವನ್ನು ನಿಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಷರತ್ತಿನ ಜಾಮೀನು ಮಂಜೂರು
ಬಿಬಿಎಂಪಿ ಬಹುಕೋಟಿ ಹಗರಣದಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತ ಕಾರ್ಯನಿರ್ವಾಹಕ ಎಂಜಿನಿಯರುಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಪಾಲಿಕೆಯ ಮಲ್ಲೇಶ್ವರ, ರಾಜರಾಜೇಶ್ವರಿನಗರ ಹಾಗೂ ಗಾಂಧಿನಗರ ಶಾಖೆಗಳಲ್ಲಿ ಅವ್ಯವಹಾರ ನಡೆಸಿರುವ ಆರೋಪ ಹೊತ್ತ ಪ್ರಕರಣ ಇದಾಗಿದೆ. ಎಲ್.ಕೆ.ಶಿವಾನಂದ, ಬಿ.ಪಿ.ಪರಮೇಶ ಹಾಗೂ ಎನ್.ಸಿ.ನಾಗರಾಜ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುಭಾಷ ಬಿ. ಅಡಿ ನಡೆಸಿದರು. ಒಂದು ಲಕ್ಷ ರೂಪಾಯಿಗಳ ಬಾಂಡ್ ನೀಡುವಂತೆ, ವಿಚಾರಣೆಗೆ ಹಾಜರು ಆಗುವಂತೆ, ಕೋರ್ಟ್ ಅನುಮತಿ ಇಲ್ಲದೇ ಊರು ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿದೆ.

ನಿವೇಶನ ಅವ್ಯವಹಾರ: ನೋಟಿಸ್
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ತೊರೆನಾಗಸಂದ್ರ ಗ್ರಾಮದಲ್ಲಿ ವಸತಿಹೀನರಿಗೆ ನಿವೇಶನ ನೀಡುವ ವಿಷಯದಲ್ಲಿ ಅವ್ಯವಹಾರ ಆಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಸರ್ಕಾರಕ್ಕೆ ಗುರುವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ಎಂ.ಜಯದೇವ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ. ವಾರ್ಷಿಕ 11,800 ರೂಪಾಯಿಗಳಿಂತ ಕಡಿಮೆ ವರಮಾನ ಇರುವವರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಅಡಿ ಮನೆ ಕಟ್ಟಿಸಿಕೊಡುವ ಸಂಬಂಧ ಸರ್ಕಾರ ಅರ್ಜಿ ಕರೆದಿತ್ತು. ಆದರೆ ನಿಜವಾದ ಫಲಾನುಭವಿಗಳಾದ ತಮ್ಮನ್ನು ಕಡೆಗಣಿಸಿ, ಸಿರಿವಂತರಿಗೂ ನಿವೇಶನ ನೀಡಲಾಗಿದೆ ಎನ್ನುವುದು ಅರ್ಜಿದಾರರ ಆರೋಪ. ವಿಚಾರಣೆಯನ್ನು ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.