ಗುರುವಾರ , ಫೆಬ್ರವರಿ 2, 2023
27 °C

ಬೀದಿ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದಿ ನಾಟಕ

 ಬೆಂಗಳೂರಿನ ಗಡಿಬಿಡಿ ಜೀವನದ ಮಧ್ಯೆ ಮನಸ್ಸನ್ನು ತಿಳಿಗೊಳಿಸುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಬಹಳ ಕಡಿಮೆ.ಆದರೆ ಬದುಕಿನ ನೈಜವಾದ ಆಶೋತ್ತರಗಳು, ಬಯಕೆಗಳು ಪ್ರತಿಬಿಂಬಿತವಾಗುವ ಸದಭಿರುಚಿಯ ಕಾರ್ಯಕ್ರಮಗಳು ಜನರನ್ನು ಸದಾ ಸೆಳೆಯುತ್ತವೆ. ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಹಾಗೂ ಎಐಡಿವೈಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್) ಜೊತೆಯಾಗಿ ಸಂಘಟಿಸುತ್ತಿರುವ ’ಬೀದಿ ನಾಟಕೋತ್ಸವ’ಇದಕ್ಕೊಂದು ನಿದರ್ಶನ.ಜನಸಾಮಾನ್ಯರ ಜೀವನವನ್ನು ಬಾಧಿಸುವ ಸಮಕಾಲೀನ ಮತ್ತು ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಬೀದಿ ನಾಟಕೋತ್ಸವ ಈಗ 15ನೇ ಸಂವತ್ಸರಕ್ಕೆ ಕಾಲಿಟ್ಟಿದೆ. ಇದರ ಖ್ಯಾತಿ ಬೆಂಗಳೂರಿನ ಬಡಾವಣೆಗಳ ಗಡಿ ಮಾತ್ರವಲ್ಲದೆ ರಾಜ್ಯದ ಗಡಿಯನ್ನು ದಾಟಿದೆ. ಇಲ್ಲಿ ಪ್ರದರ್ಶಿತಗೊಂಡ ನಾಟಕಗಳು ವಿವಿಧ ಸ್ಥಳಗಳಲ್ಲಿ ಮತ್ತೆ ಮತ್ತೆ ಪ್ರದರ್ಶಿತಗೊಂಡಿವೆ. ಅಷ್ಟೇ ಅಲ್ಲದೆ ದೆಹಲಿ, ಒಡಿಶಾ, ಪಶ್ಚಿಮ ಬಂಗಾಳಗಳಲ್ಲೂ ಪ್ರದರ್ಶಿತವಾಗಿ ಅಪಾರ ಮೆಚ್ಚುಗೆ ಗಳಿಸಿವೆ. ಇದು ಕೇವಲ ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಕಳಕಳಿಯೊಂದಿಗೆ ಸಂದೇಶ ಹೊತ್ತ ಒಂದು ಸಾಂಸ್ಕೃತಿಕ ಚಳವಳಿಯಾಗಿ ಬೆಳೆಯುತ್ತಿದೆ.ಈ ಬಾರಿ ಸ್ಥಳೀಯ ರಂಗ ತಂಡಗಳಷ್ಟೇ ಅಲ್ಲದೆ, ಪಶ್ಚಿಮ ಬಂಗಾಳ, ಒಡಿಶಾ, ಕೇರಳ ಹಾಗೂ ತಮಿಳುನಾಡಿನಿಂದಲೂ ತಂಡಗಳೂ ಬಂದು ರಂಗ ಪ್ರದರ್ಶನ ನೀಡುತ್ತಿವೆ. ಕವಿ ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರ 150 ಜಯಂತಿ ನಿಮಿತ್ತ ಈ ಸಲದ ಬೀದಿ ನಾಟಕೋತ್ಸವವನ್ನು ಟ್ಯಾಗೋರ್ ಅವರಿಗೆ ಸಮರ್ಪಿಸಲಾಗಿದೆ.ಧರ್ಮಸ್ತಂಭ, ಕುದುರೆ...

ನಾಟಕ ಬೆಂಗ್ಳೂರು:
ರಂಗಭೂಮಿ ಸಂಭ್ರಮದಲ್ಲಿ ಗುರುವಾರ ಅಂತರಂಗ ತಂಡದಿಂದ ‘ಧರ್ಮಸ್ತಂಭ’ (ಮೂಲ ಕಥೆ: ಡಾ. ಕೆ.ಎನ್. ಗಣೇಶಯ್ಯ, ರಂಗರೂಪ: ಎನ್.ಸಿ. ಮಹೇಶ್, ನಿ: ಅರ್ಚನಾ ಶ್ಯಾಂ) ನಾಟಕ ಪ್ರದರ್ಶನ. ಪಾತ್ರವರ್ಗ: ಎಚ್.ವಿ. ನಟರಾಜ್, ಸೌಮ್ಯ, ರಾಮ್ ಮಂಜುನಾಥ್, ವೈಷ್ಣವಿ, ವಿಜಯ್ ಶ್ರೀಧರ್, ಸುಮನಾ, ಮುರಳೀಧರ್, ಸಿರಾಜ್, ತೇಜಸ್, ಆರ್. ಹರ್ಷ, ಶಶಾಂಕ್ ಗಿರಿ.ಚರಿತ್ರೆಯಲ್ಲಿ ಸತ್ಯಕ್ಕೆ ದೂರವಾದ ಘಟನೆಗಳನ್ನು, ವ್ಯಕ್ತಿತ್ವಗಳನ್ನು ಒರೆಗಿಟ್ಟು ನೋಡುವ ಪ್ರಯತ್ನವೇ ಧರ್ಮಸ್ತಂಭ. ಧರ್ಮದ ಉದ್ದೇಶಗಳನ್ನು ಸರಿಯಾಗಿ ಗ್ರಹಿಸದೇ ಪ್ರಕೃತಿ ಸಹಜ ಭಾವನೆಗಳನ್ನು ಕಡೆಗಣಿಸಿ ಧರ್ಮದ ಹೆಸರಿನಲ್ಲಿ ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗುವ ಬಗೆಯಲ್ಲಿ ವರ್ತಿಸುವ ರಾಜತ್ವದ ಚಿತ್ರಣ ಈ ನಾಟಕದಲ್ಲಿದೆ. ಟಿಕೆಟ್‌ಗೆ: ಅಂಕಲ್ ಶ್ಯಾಮ್ (98809 14509).ಶುಕ್ರವಾರ ಸ್ನೇಹ ರಂಗ ತಂಡದಿಂದ ‘ಕುದುರೆ ಬಂತು ಕುದುರೆ’ ನಾಟಕ (ರಚನೆ: ರಾಮಚಂದ್ರ ದೇವ್, ನಿರ್ದೇಶನ: ಎನ್.ಮಂಗಳಾ). ಮಾಹಿತಿಗೆ: 98801 53046. ಸ್ಥಳ; ರಂಗಶಂಕರ ಜೆ.ಪಿ. ನಗರ 2ನೇ ಹಂತ. ಸಂಜೆ 7.30. ನಾಟಕೋತ್ಸವದಲ್ಲಿ...

ಆವಿಷ್ಕಾರ ನಾಟಕೋತ್ಸವ:
ಗುರುವಾರ ಸಂಜೆ 5ಕ್ಕೆ ರಂಗತಂಡಗಳ ಮೆರವಣಿಗೆ. 6ಕ್ಕೆ ಜಾನಪದ ನೃತ್ಯ. ನಂತರ ಉದ್ಘಾಟನೆ.ಭಾಗವಹಿಸುವವರು: ಚಿದಂಬರರಾವ್ ಜಂಬೆ, ಡಾ.ಎಸ್.ಕುಮಾರ್, ಎಸ್.ಎನ್.ಸ್ವಾಮಿ, ಎಂ.ಉಮಾದೇವಿ.7ಕ್ಕೆ ಮುದ್ದುಮೋಹನ್ ಅವರಿಂದ ಪ್ರಗತಿಪರ ಗೀತೆಗಳು. ನಂತರ ಸೃಜನ ತಂಡದಿಂದ ‘ಮಾಯಾ ಮಾಯಾಜಾಲ್’ (ರಚನೆ: ಸ್ವಾಮಿ. ನಿ: ಡಾ. ಸುನೀತ್‌ಕುಮಾರ್ ಶೆಟ್ಟಿ) ನಾಟಕ. ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಜನರಿಗೆ ಅನುಕೂಲವೆನ್ನುವ ವಾದದೊಂದಿಗೆ ಬೃಹತ್ ಮಳಿಗೆಗಳ ಮಾಲ್‌ಗಳು ಬರುತ್ತಿವೆ. ಅದರ ಹಿಂದಿರುವ ಭೂ ಕಬಳಿಕೆ, ಮೈದಾನಗಳ ಸ್ವಾಹ, ಜನರ ಜೀವನಕ್ಕೆ ಕೊಡಲಿ ಪೆಟ್ಟು ಬೀಳುವಂತಹ ವಿಷಯವನ್ನು ಇದು ಒಳಗೊಂಡಿದೆ.ಚಿತ್ರಾ ತಂಡದಿಂದ ರಾಜಕೀಯ ವಿಂಡಬನೆಯ ‘ಎಲ್ಲಾರು ಮಾಡುವುದು ಕುರ್ಚಿಗಾಗಿ’ (ರಚನೆ: ರಘುನಂದನ್.  ನಿರ್ದೇಶನ: ಗೌರಿ ದತ್ತು) ನಾಟಕ.  ಕೇರಳದ ಬ್ಯಾನರ್ ಸಾಂಸಾರಿಕ ಸಮಿತಿಯಿಂದ ‘ಗೋಪಿನಾಥ್ ಸಹಾಯುಡೆ ಆತ್ಮತ್ಯಾಗಂ’ (ಗೋಪಿನಾಥ್ ಸಹಾರವರ ಆತ್ಮತ್ಯಾಗ) ಮಲಯಾಳಂ ನಾಟಕ.ಶುಕ್ರವಾರ ಸಂಜೆ 6.30ಕ್ಕೆ ನಾರಾಯಣರಾವ್ ಮಾನೆ ಅವರಿಂದ ಪ್ರಗತಿಪರ ಗೀತೆಗಳು. ನಂತರ ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ ತಂಡದಿಂದ ‘ಭಾನಾಮತಿ’ (ನಿ: ಸುನೀತ್‌ಕುಮಾರ್ ಶೆಟ್ಟಿ). ಯುವಜನ ಸಾಂಸ್ಕೃತಿಕ ವೇದಿಕೆಯಿಂದ ಭೂ ಕಬಳಿಕೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಿಂದ ಕಲುಷಿತಗೊಂಡ ರಾಜಕೀಯ, ಜೀವನದಲ್ಲಿ ಆದರ್ಶಗಳಿಗೆ ಸ್ಥಾನವಿಲ್ಲ ಎನ್ನುವ ಜನರ ಹತಾಶೆಯನ್ನು ಪ್ರತಿಬಿಂಬಿಸುವ ‘ಪೂರ್ತಿ ಸತ್ಯ’ (ರಚನೆ: ಬಿ.ಆರ್.ಮಂಜುನಾಥ್. ನಿ: ಪ್ರಕಾಶ್ ಅರಸ್).ತಮಿಳುನಾಡಿನ ಬೀದಿ ನಾಟಕ ತಂಡದಿಂದ ‘ಶಲ್‌ವಿ ಅಲೋ ಇಟ್ ಅಗೇನ’ (ನಿ: ವಸಂತನ್) ಇಂಗ್ಲೀಷ್ ನಾಟಕ.ಸ್ಥಳ: ಮಲ್ಲೇಶ್ವರಂ ಆಟದ ಮೈದಾನ.

                                                      

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.