ಬುಧವಾರ, ಜೂನ್ 23, 2021
22 °C

ಬುಡಾ ಸಮಿತಿ ರದ್ದುಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಳೆದ 17 ವರ್ಷಗಳಿಂದ ಬೆಳಗಾವಿ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಸಿಡಿಪಿಯನ್ನು ಸಿದ್ಧಗೊಳಿಸಿದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಬುಡಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಪತ್ರಿಭಟಿಸಿದರು.ಜಿಲ್ಲಾಧಿಕಾರಿ ಅನ್ಬುಕುಮಾರ್ ಮೂಲಕ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ ಪಡೆಯ ಅಧ್ಯಕ್ಷ ರಾಜೀವ ಟೋಪಣ್ಣವರ, ರಾಜ್ಯದ ಮಹಾನಗರಗಳಾದ ಗುಲ್ಬರ್ಗ ಹಾಗೂ ಮೈಸೂರು ನಗರ ಅಭಿವದ್ಧಿ ಪ್ರಾಧಿಕಾರಗಳು ಕಳೆದ 10 ವರ್ಷಗಳ ಹಿಂದೆ ನಗರದ ಬೆಳವಣಿಗೆ ಹಾಗೂ ಭವಿಷ್ಯವನ್ನು ಆಧರಿಸಿ ಹೊಸ ಸಿಡಿಪಿಯನ್ನು (ಸಿಟಿ ಡೆವಲಪ್‌ಮೆಂಟ್ ಪ್ಲ್ಯಾನ್) ಸಿದ್ಧಪಡಿಸಿಕೊಂಡಿದ್ದಾರೆ.ಆದರೆ ಬೆಳಗಾವಿ ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮುಗ್ಧ ರೈತರ ಜಮೀನುಗಳನ್ನು ಲಪಟಾಯಿಸುವ ಉದ್ದೇಶದಿಂದ ಇದುವರೆಗೂ ಹೊಸ ಸಿಡಿಪಿಯನ್ನು ಸಿದ್ಧಗೊಳಿಸಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾಗೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ಬುಡಾ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಬೆಳಗಾವಿ ಸಿಡಿಪಿಯನ್ನು ಸಿದ್ಧಗೊಳಿಸಲು ವಿಳಂಬ ನೀತಿ ಅನುಸರಿಸಿದ ಬುಡಾ ವಿರುದ್ಧ ಕ್ರಮ ಕೈಗೊಳ್ಳದೆ ಗ್ರಾಮೀಣ ಹಾಗೂ ನಗರಾಭಿವದ್ಧಿ ಯೋಜನೆ ಅಧಿಕಾರಿಗಳಿಗೆ ನಗರಾಭಿವದ್ಧಿ ಇಲಾಖೆಯು ಬೆಳಗಾವಿಗೆ ಸಂಬಂಧಿಸಿದ ಹೊಸ ಸಿಡಿಪಿಯನ್ನು ರಚಿಸಲು ಸೂಚನೆ ನೀಡಿದೆ.

 

ಆದರೆ ಈ ವಿಷಯದಲ್ಲಿ 17 ವರ್ಷಗಳ ಕಾಲಹರಣ ಮಾಡಿದ ಬುಡಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ನಗರಾಭಿವದ್ಧಿ ಇಲಾಖೆ ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಹೊಸ ನಾಟಕವನ್ನು ಪ್ರಾರಂಭಿಸಿದೆ ಎಂದು ಟೋಪಣ್ಣವರ ಆರೋಪಿಸಿದರು.ಬೆಳಗಾವಿಯ ಸುವರ್ಣ ವಿಧಾನಸೌಧ ಕಟ್ಟಡದ ಸುತ್ತಮುತ್ತಲಿನ ಒಂದು ಕಿಲೋ ಮೀಟರ್ ವ್ಯಾಪ್ತಿಯನ್ನು ಹಸಿರು ವಲಯವೆಂದು ಘೋಷಿಸುವಂತೆ ಬುಡಾ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೆ ಸರ್ಕಾರ ಇದುವರೆಗೂ `ಹಸಿರು ವಲಯ~ ಎಂದು ಘೋಷಣೆ ಮಾಡದಿದ್ದರೂ ಕೆಲವು ಜನಪ್ರತಿನಿಧಿಗಳು ಮುಗ್ಧ ರೈತರಿಗೆ ಹಸಿರು ವಲಯದ ಹೆಸರಿನಲ್ಲಿ ಬೆದರಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜಮೀನು ಖರೀದಿ ಮಾಡುತ್ತಿದ್ದಾರೆ.ಈ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಬಯಸಿ ಬುಡಾ ಅಧಿಕಾರಿಗಳ ಬಳಿ ಹೋದವರಿಗೆ ಇದು ಹಸಿರು ವಲಯದಲ್ಲಿ ಬರುತ್ತದೆ ಎಂದು ಬೆದರಿಕೆ ಹಾಕುವ ತಂತ್ರಗಾರಿಕೆ ನಡೆಯುತ್ತಿದೆ. ಈ ಭೂಮಾಫಿಯಾವನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.