ಬುದ್ಧಗಯಾ: ಎನ್ಐಎಗೆ ಸಿಗದ ಮಹತ್ವದ ಸುಳಿವು
ಪಟ್ನಾ(ಐಎಎನ್ಎಸ್): ಬಿಹಾರದ ಬುದ್ಧಗಯಾದ ಮಹಾ ಭೋದಿ ಮಂದಿರ ಆವರಣದಲ್ಲಿ ಸರಣಿ ಬಾಂಬ್ ಸ್ಫೊಟ ಸಂಭವಿಸಿ ಐದು ದಿನ ಕಳೆದರೂ ದುಷ್ಕರ್ಮಿಗಳ ಜಾಡು ಹಿಡಿಯುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಈವರೆಗೆ ಯಾವುದೇ ಮಹತ್ವದ ಬೆಳವಣಿಗೆ ಸಾಧಿಸಿಲ್ಲ.
ತನಿಖೆಯಲ್ಲಿ ನಿರತವಾಗಿರುವ ಎನ್ಐಎ, ಸ್ಫೋಟಕ್ಕೆ ಸಂಬಂಧಿಸಿದ 18 ಮಾದರಿಗಳನ್ನು ಡಿಎನ್ಎ ಪರೀಕ್ಷೆಗಾಗಿ ಹೈದರಾಬಾದ್ಗೆ ಶುಕ್ರವಾರ ಕಳುಹಿಸಿಕೊಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುದ್ಧಗಯಾ ಮಂದಿರದ ಆಂತರಿಕ ಭದ್ರತೆ ಜವಾಬ್ದಾರಿಯನ್ನು ಹೊತ್ತಿದ್ದ ಮಂದಿರದ ಆಡಳಿತ ಮಂಡಳಿಯ ಖಾಸಗಿ ಭದ್ರತಾ ಸಿಬ್ಬಂದಿಯ ವಿಚಾರಣೆಯಲ್ಲಿ ಎನ್ಎಐ ನಿರತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.