ಮಂಗಳವಾರ, ಜೂನ್ 22, 2021
22 °C

ಬೃಂದಾವನ: ಹೋಳಿ ಆಡಲಿರುವ ವಿಧವೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ(ಪಿಟಿಐ): ಸಾಮಾನ್ಯವಾಗಿ ವಿಧವೆಯರು ಹೋಳಿ­ಗಳಂತಹ ಸಂಭ್ರ­ಮದ ಆಚರಣೆ­ಗಳಲ್ಲಿ ಭಾಗವಹಿಸು­ವು­ದನ್ನು ಸಂಪ್ರ­ದಾಯ ವಿರೋಧಿ ಎಂದು ಪರಿಗಣಿಸಲಾ­ಗು­ತ್ತದೆ. ಆದರೆ ಮಾರ್ಚ್‌ 14ರಂದು ಬೃಂದಾ­ವನದಲ್ಲಿ  ಸಾವಿ­ರಾರು ವಿಧವೆ­ಯರು ಸಾಮಾಜಿಕ ಕಟ್ಟಳೆಗ­ಳನ್ನು ಮುರಿದು   ಹೋಳಿಹಬ್ಬದ ಬಣ್ಣದ ಆಟದಲ್ಲಿ ಪಾಲ್ಗೊಳ್ಳಲಿದ್ದಾರೆ.



ಕಳೆದ ವರ್ಷ ಅವರು ಪರಸ್ಪರ ಹೂದಳಗಳನ್ನು ಎರಚಿಕೊಳ್ಳುವುದರ ಮೂಲಕ ಹೋಳಿಹುಣ್ಣಿಮೆಯನ್ನು ಆಚರಿಸಿದ್ದರು.

ಬೃಂದಾವನದ ಮೀರಾ ಸಹಭಾಗಿನಿ ಸದನದಲ್ಲಿ ಮಾರ್ಚ್‌ 14ರಂದು ಸಾವಿ­ರಾರು ವಿಧವೆಯರು ರಂಗು ಎರಚುವ ಮೂಲಕ ಹೋಳಿ ಆಚರಿಸಲಿದ್ದಾರೆ.



ವಿಧವೆಯರ ಪರಿಸ್ಥಿತಿ ಸುಧಾರಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿ­ಸುತ್ತಿ­ರುವ ‘ಸುಲಭ್‌ ಇಂಟರ್‌­ನ್ಯಾಷನಲ್‌’ ಎಂಬ ಸಂಸ್ಥೆಯು ಇದನ್ನು ಆಯೋಜಿಸಿದೆ.



‘ಬೃಂದಾವನದಲ್ಲಿ ಆಚರಿಸಲಾಗುವ ಹೋಳಿ ಹಬ್ಬ, ಹಳೆಯ ಕಾಲದ ಸಂಪ್ರದಾಯದ ಸಂಕೋಲೆಯಿಂದ ವಿಧವೆಯರನ್ನು ಬಿಡುಗಡೆಗೊಳಿಸುವ ಪ್ರಯತ್ನವಾಗಿದೆ. ಅವರು ಕೇವಲ ಹೋಳಿ ಆಡುವುದಷ್ಟೇ ಅಲ್ಲ. ಅದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ­ಗಳಲ್ಲಿಯೂ ಭಾಗವಹಿಸಲಿದ್ದಾರೆ’ ಎಂದು ‘ಸುಲಭ್‌ ಇಂಟರ್‌­ನ್ಯಾಷನಲ್‌’ನ ಸಂಸ್ಥಾಪಕ ಬಿಂದೇಶ್ವರ್‌ ಪಾಠಕ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.