ಭಾನುವಾರ, ಜನವರಿ 19, 2020
20 °C

ಬೃಹನ್ಮಠ ಶ್ರೀಗಳ ಅಡ್ಡಪಲ್ಲಕ್ಕಿ ನಾಳೆಯಿಂದ

ಪ್ರಜಾವಾಣಿ ವಾರ್ತೆ / –ಮಂಜುನಾಥ ಆರಪಲ್ಲಿ. Updated:

ಅಕ್ಷರ ಗಾತ್ರ : | |

ಶಿರಹಟ್ಟಿ: ಪಾಠ ಪ್ರವಚನ ಮೂಲಕ ಜನತಗೆ ಧಾರ್ಮಿಕ ಸಂದೇಶಗಳನ್ನು ನೀಡಿ ಜಾಗೃತಿ ಮೂಡಿಸುತ್ತಿರುವ ತಾಲ್ಲೂಕಿನ ಬನ್ನಿಕೊಪ್ಪ ಬ್ರಹನ್ಮಠದ ರಜತ ಮಹೋತ್ಸವ ನಿಮಿತ್ತ ಧರ್ಮ­ಚಿಂತನ ಸಭೆ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಇದೇ ೧೨ರಿಂದ ೧೪ ರವರೆಗೆ ಜರುಗಲಿವೆ.

೯೦ ವರ್ಷಗಳ ಹಿಂದೆ ಡಾ. ಎಸ್‌.­ಎಫ್‌. ಹಿರೇಮಠ ಅವರು ಹುಟ್ಟು ಹಾಕಿದ ಬ್ರಹನ್ಮಠ ಹಲವಾರು ರಚ­ನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಇದೀಗ ಜನಮಾನಸದಲ್ಲಿ ಉಳಿದುಕೊಂಡಿದೆ.ಬ್ರಹನ್ಮಠದ ಅಡಿಯಲ್ಲಿ ೧೯೭೬ರಲ್ಲಿ  ಅಡ್ಡಪಲ್ಲಕ್ಕಿ ಉತ್ಸವ ನಡೆದಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡು­ತ್ತಾ ರಾಜ್ಯದ ಗಮನ ಸೆಳೆ­ದಿತ್ತು. ಅಂತಹ  ಕಾರ್ಯಗಳನ್ನು ಮತ್ತೆ ಭಕ್ತ ಸಮೂಹ ಮಾಡುತ್ತಿ­ರುವುದು ಸ್ಮರಣೀಯ­ವಾದದು ಎಂದು ಮಠದ ಸುಜ್ಞಾನದೇವ ಶಿವಾಚಾರ್ಯ ಶ್ರೀಗಳು ಹಳೆಯ ಘಟನೆಗಳನ್ನು ಮೆಲಕು ಹಾಕುತ್ತಾರೆ.‘ಶ್ರೀಗಳು ಮಠದ ಪಟ್ಟವನ್ನು ಅಲಂಕರಿಸಿ ೨೫ ವರ್ಷಗಳು ಸಂದ ಹಿನ್ನೆಲೆ­ಯಲ್ಲಿ ಭಕ್ತರ ಆಶಯದ ಮೇರೆಗೆ ಹಲವಾರು ಧಾರ್ಮಿಕ ಚಿಂತನ, ಮಂಥನ  ನಡೆಸಲು ನಿರ್ಧ­ರಿಸಲಾಗಿದೆ ಎಂದು ಡಾ. ಸುಜ್ಞಾನ­ದೇವ ಶಿವಾಚಾರ್ಯ ಶ್ರೀಗಳು ತಿಳಿಸಿ­ದರು. ಮಠಕ್ಕೆ ಯಾವುದೇ ಮೂಲ­­ಗಳಿಲ್ಲ. ಆದರೂ ಭಕ್ತ ಸಮೂಹ ತನು, ಮನ, ಧನದಿಂದ ಮಠದ ಎಲ್ಲ ಕಾರ್ಯಕ್ರಮಗಳಿಗೆ ಸಹ­ಕಾರ ನೀಡುತ್ತಾರೆ.

ಧಾರ್ಮಿಕ ಜಾಗೃತಿ­ಯನ್ನು ತನ್ನ ಗುರಿಯಾ­ಗಿರಿಸಿಕೊಂಡು ಸುತ್ತ­­­ಮುತ್ತಲಿನ ಗ್ರಾಮ­ಗಳಲ್ಲಿ ರಚ­ನಾತ್ಮ ಕಾರ್ಯಗಳನ್ನು ಮಾಡುತ್ತಿ­ರುವುದು ಸ್ತುತ್ಯಾರ್ಹ­ವಾದದು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಹೇಳಿದರು. ೧೧ರಂದು ಧರ್ಮ ಚಿಂತನಗೋಷ್ಠಿ ನಡೆಯಲಿದ್ದು, ಹೊಳೆ ಇಟಗಿ  ವಿರಕ್ತ ಮಠದ ಮಡಿವಾಳ ಶ್ರೀಗಳು ಸಭೆ ಸಾನಿಧ್ಯ ವಹಿಸಲಿದ್ದಾರೆ. ೧೨ರಂದು ಗುರುವಾರ ಸಮಾಜ ಚಿಂತನಗೋಷ್ಠಿ ನಡೆಯಲಿದ್ದು, ಜ.ಫಕೀರಸಿದ್ಧರಾಮ ಶ್ರೀಗಳು ಹಾಗೂ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ಸಾನಿಧ್ಯ ವಹಿಸಿದರು.

ಇದೇ ೧೩ರಂದು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ  ಮತ್ತು ಸಿದ್ಧಲಿಂಗ­ರಾಜದೇಶಿಕೇಂದ್ರ ಶಿವಾ­ಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಜರು­ಗಲಿದೆ. ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವು ಪೂರ್ಣಕುಂಭ, ಕಲಶದೊಂದಿಗೆ ಬಸವಣ್ಣ ದೇವರ ಆವರಣಕ್ಕೆ­(ಡಾ.ಎಸ್‌.ಎಫ್‌ ಹಿರೇಮಠ ಸಭಾ­ಮಂಟಪ)  ಶ್ರೀಗಳು ಆಗಮಿ­ಸಲಿದೆ.

ಸಂಜೆ ಧರ್ಮೋತ್ತೇಜಕ ಸಭೆ ನಡೆಯ­ಲಿದೆ.೧೪ರಂದು ಬ್ರಾಹ್ಮಿ ಸಮಯ­ದಲ್ಲಿ ಡಾ. ಸುಜ್ಞಾನದೇವ ಶಿವಾಚಾರ್ಯ ಶ್ರೀಗಳಿಗೆ ರಜತ ಮಹೋತ್ಸವ ನಿಮಿತ್ತ ಮಂಗಲ ಸ್ನಾನಾಧಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಬೆಳಿಗ್ಗೆ ೭ ಗಂಟೆಗೆ ವೀರಮಹೇಶ್ವರ ವಟುಗಳಿಗೆ ದೀಕ್ಷಾ ಅಯ್ಯಾಚಾರ ಕಾರ್ಯ ನಡೆಯಲಿವೆ.

–ಮಂಜುನಾಥ ಆರಪಲ್ಲಿ.

ಪ್ರತಿಕ್ರಿಯಿಸಿ (+)