ನೆಲಮಂಗಲ: ತಾಲ್ಲೂಕಿನ ಶಿವಗಂಗೆಯ ಗಂಗಾಧರೇಶ್ವರ ದೇವಾಲಯದ ಮುಂಭಾಗದ ಸಂಪಿಗೆ ಮರಕ್ಕೆ ಬೆಟ್ಟದ ತುದಿಯಿಂದ ರಭಸವಾಗಿ ಬಂದ ಬೆಂಕಿ ಉಂಡೆಯೊಂದು ಬಿದ್ದು ಮರದ ಕೊಂಬೆ ಉರಿದು ನೆಲಕ್ಕುರುಳಿದ ವಿಚಿತ್ರ ಘಟನೆಯು ಭಾನುವಾರ ಸಂಜೆ 4 ಗಂಟೆ ವೇಳೆಗೆ ಸಂಭವಿಸಿದೆ.

ಸಮುದ್ರ ಮಟ್ಟದಿಂದ 4559 ಅಡಿ ಎತ್ತರವಿರುವ ಬೆಟ್ಟದ ತುದಿಯಿಂದ ಬೆಂಕಿ ಉಂಡೆಯೊಂದು ಸಂಪಿಗೆ ಮರದ ಮಧ್ಯ ಭಾಗದ ಕೊಂಬೆಯ ಮೇಲೆ ಬಿದ್ದು ಆಶ್ಚರ್ಯಕರ ರೀತಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ವಿಸ್ಮಯವನ್ನು ವೀಕ್ಷಿಸಿದ ದೇವಾಲಯದ ಬಳಿಯ ವ್ಯಾಪಾರಿ ಚೇತನ್ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಫಲಕಾರಿಯಾಗದೆ ಕೊಂಬೆಯು ದಹಿಸಿ ಬಿತ್ತು. ದೇವಾಲಯದ ಮುಂಭಾಗದಲ್ಲಿ ಕಿಚ್ಚು ಹಾಕಿದಂಥ ಸನ್ನಿವೇಶ ಸೃಷ್ಟಿಯಾಗಿತ್ತು.

ಸೂರ್ಯನ ಸುತ್ತ ಸುತ್ತುತ್ತಿರ್ದುವ ಆಕಾಶ ಕಾಯಗಳು ಅಥವಾ ಉಲ್ಕೆಗಳು ಭೂಮಿಗೆ ಹತ್ತಿರ ಬಂದಾಗ ಭೂಮಿಯ ಗುರುತ್ವಾಕರ್ಷಣೆಯ ಬಲದಿಂದ ಆಕರ್ಷಿಸಲ್ಪಟ್ಟು ವೇಗವಾಗಿ ಭೂಮಿಯತ್ತ ಬರುವ ಸಾಧ್ಯತೆಗಳಿರುತ್ತವೆ ಎಂದು ಪ್ರತ್ಯಕ್ಷದರ್ಶಿ ಡಾ.ಕೆ.ಬಸವರಾಜು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.