ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಕಿ ನಂದಿಸಲು ಬಂದಿದೆ ಬೈಕ್

Published : 14 ಫೆಬ್ರುವರಿ 2015, 8:57 IST
ಫಾಲೋ ಮಾಡಿ
Comments

ತಿಪಟೂರು: ಬೆಂಕಿ ಅವಘಡ ಸಂಭವಿಸಿದ ಇಕ್ಕಟ್ಟಾದ ಪ್ರದೇಶದಲ್ಲಿ ಸಲೀಸಾಗಿ ನುಗ್ಗಲು ಮತ್ತು ತುರ್ತಾಗಿ ಧಾವಿಸಿ ಆರಂಭದಲ್ಲೇ ಬೆಂಕಿ ನಿಯಂತ್ರಿಸಲು ಸುಸಜ್ಜಿತ ಬೈಕ್ ನಗರದ ಅಗ್ನಿಶಾಮಕ ಠಾಣೆಗೆ ಬಂದಿದೆ.

ಇದೇ ಪ್ರಥಮ ಬಾರಿಗೆ ಇಲ್ಲಿನ ಠಾಣೆಗೆ ಕೊಟ್ಟಿ­ರುವ ಈ ಬೈಕ್‌ನಲ್ಲಿ ಬೆಂಕಿ ನಂದಿಸಲು ಬೇಕಾದ ಉಪ­ಕರಣಗಳನ್ನು ಜೋಡಿಸಲಾಗಿದೆ.ಮಿಸ್ಟ್ ಎಂಬ ನೂತನ ತಾಂತ್ರಿಕತೆ ಇರುವುದು ಬೈಕ್‌ನ ವಿಶೇಷ. ಅಂದಾಜು ₨ 4.5 ಲಕ್ಷ ಬೆಲೆಯ ಬೈಕ್ ಸೈರನ್, ನೀರಿನ ಟ್ಯಾಂಕರ್, ಅಗ್ನಿ ಶಾಮಕ ಸಿಲಿಂಡರ್ ಒಳಗೊಂಡಿದೆ.ಹತ್ತು ಲೀಟರ್ ನೀರು ಸಂಗ್ರಹದ ಎರಡು ಟ್ಯಾಕರ್ ಹಾಗೂ 5 ಕೆ.ಜಿ. ಸಿಲಿಂಡರ್ ಇವೆ.

ಸಣ್ಣ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಹಾಗೂ ಅಗ್ನಿಶಾಮಕ ದಳದ ದೊಡ್ಡ ವಾಹನಗಳು ತೆರಳಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಇದನ್ನು ಬಳಸಲು ವಿನ್ಯಾಸ ಮಾಡಲಾಗಿದೆ ಎಂದು ಅಗ್ನಿ ಶಾಮಕ ಠಾಣಾಧಿಕಾರಿ ಜಿ.ಬಿ.ಸೋಮ­ಶೇಖರಯ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT