ಬುಧವಾರ, ಜುಲೈ 15, 2020
22 °C

ಬೆಂಕಿ: 6 ಲಕ್ಷಕ್ಕೂ ಅಧಿಕ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಕಿ: 6 ಲಕ್ಷಕ್ಕೂ ಅಧಿಕ ಹಾನಿ

ಗೋಕಾಕ: ನಗರದ ಎಪಿಎಮ್‌ಸಿ ಮಾರ್ಗ ಸಮೀಪದ ವೃತ್ತದಲ್ಲಿರುವ ಖಾಸಗಿ ಒಡೆತನಕ್ಕೆ ಸೇರಿದ ಸೀಮಾ ಎಂಟರ್‌ಪ್ರೈಜಸ್ ಕಾಟನ್ ಮತ್ತು ಜಿನ್ನಿಂಗ್ ಇಂಡಸ್ಟ್ರೀಜ್‌ನಲ್ಲಿ ಶುಕ್ರವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ಅರಳೆ, ಹತ್ತಿ ಮತ್ತು ಹತ್ತಿಕಾಳುಗಳು ಭಸ್ಮವಾಗಿ ಅಂದಾಜು ರೂ. 6 ಲಕ್ಷ ಹಾನಿ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ಘಟನೆಯಲ್ಲಿ ಮೆ. ರಾಜಕುಮಾರ ಮಾಲಗಾಂವ ಪಾಲುದಾರಿಕೆ ಸಂಸ್ಥೆಯೊಂದರ ಒಡೆತನದ ಸಂಸ್ಥೆಯ ವಿಶ್ರಾಂತಿ ಗೃಹದಲ್ಲಿ ಬಳಸಲ್ಪಡುವ ಗಾದಿಗಳು ಹಾಗೂ ಹತ್ತಿಕಾಳು ಬೆಂಕಿಗಾಹುತಿಯಾಗಿವೆ.ಬೆಂಕಿ ಹತ್ತಿದ ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದವು ಎಂದು ಸಂಸ್ಥೆಯ ಪಾಲುದಾರರು ಘಟನೆಯ ವಿವರ ನೀಡಿದರು. ರಾತ್ರಿ ಸಮಯದಲ್ಲಿ ಈ ಅವಘಡ ಸಂಭವಿಸಿದ್ದರಿಂದ ಬೆಳಕಿನ ಕೊರತೆಯಿಂದಾಗಿ ಅಪಾರ ಪ್ರಮಾಣದ ಹತ್ತಿಕಾಳು ಸುಟ್ಟು ಹೋಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.