ಬೆಂಗಳೂರು: `ಈಶಾನ್ಯ ರಾಜ್ಯಗಳ ಜನರು ಬೆಂಗಳೂರು ತೊರೆದು ತವರಿಗೆ ಮರಳುವುದನ್ನು ತಕ್ಷಣವೇ ನಿಲ್ಲಿಸಬೇಕು. ಈಶಾನ್ಯ ರಾಜ್ಯಗಳ ಜನರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕರ್ನಾಟಕ ಸರ್ಕಾರ ಕೈಗೊಂಡಿದ್ದು, ಭಯಪಡಬೇಕಿಲ್ಲ~ ಎಂದು ಅಸ್ಸಾಂನ ಸಾರಿಗೆ ಸಚಿವ ಚಂದನ್ ಬ್ರಹ್ಮ ಮತ್ತು ಕೃಷಿ ಸಚಿವ ನಿಲೊಮಣಿ ಸೇನ್ ದೇಕಾ ಹೇಳಿದರು.

ಇಲ್ಲಿನ ನಗರ ರೈಲ್ವೆ ನಿಲ್ದಾಣದಲ್ಲಿ ಈಶಾನ್ಯ ರಾಜ್ಯಗಳತ್ತ ಮರಳುತ್ತಿರುವವರನ್ನು ಶುಕ್ರವಾರ ಭೇಟಿಮಾಡಿದ ಬಳಿಕ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ಆರ್.ಅಶೋಕ ಮತ್ತು ಕಾನೂನು ಸಚಿವ ಎಸ್.ಸುರೇಶ್ಕುಮಾರ್ ಅವರೊಂದಿಗೆ ಅಸ್ಸಾಂ ಸಚಿವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರು ತೊರೆಯದಿರಿ ಎಂದು ಈಶಾನ್ಯ ರಾಜ್ಯಗಳ ಜನತೆಗೆ ಮನವಿ ಮಾಡಿದರು.

ಇದೇ 20ರ ಬಳಿಕ ಏನೋ ಸಂಭವಿಸಬಹುದು ಎಂಬ ಅವ್ಯಕ್ತ ಭಯ ಈಶಾನ್ಯ ರಾಜ್ಯಗಳ ಜನರನ್ನು ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಅವರು ಗುಂಪು ಗುಂಪಾಗಿ ತವರು ರಾಜ್ಯಗಳತ್ತ ಮರಳುತ್ತಿದ್ದಾರೆ ಎಂದು ಚಂದನ್ ಬ್ರಹ್ಮ ಹೇಳಿದರು

ಆದರೆ, ಇಲ್ಲಿನ ರಾಜ್ಯ ಸರ್ಕಾರ, ಈಶಾನ್ಯ ರಾಜ್ಯಗಳ ಜನರ ರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಇಲ್ಲಿನ ಜನರು ಕೂಡ ಅವರನ್ನು ಅತ್ಯಂತ ಸಹಾನುಭೂತಿಯಿಂದ ನಡೆಸಿಕೊಂಡಿದ್ದಾರೆ. ಇದಕ್ಕಾಗಿ ಕರ್ನಾಟಕ ಸರ್ಕಾರ, ಇಲ್ಲಿನ ಜನರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ~ ಎಂದು ಚಂದನ್ ಬ್ರಹ್ಮ ಹೇಳಿದರು.

`ಬೆಂಗಳೂರಿನಿಂದ ವಾಪಸು ಬಾರದಂತೆ ಈಶಾನ್ಯ ಭಾರತದ ಜನರನ್ನು ಮನವೊಲಿಸುವಂತೆ ನಮ್ಮ (ಅಸ್ಸಾಂ) ಮುಖ್ಯಮಂತ್ರಿ ತರುಣ್ ಗೊಗೊಯ್ ಸೂಚನೆ ನೀಡಿದ್ದರು. ಅದರಂತೆ ನಾವು ಬೆಂಗಳೂರಿಗೆ ಬಂದು ಈಶಾನ್ಯ ರಾಜ್ಯಗಳ ಜನರೊಂದಿಗೆ ಮಾತುಕತೆ ನಡೆಸಿದ್ದೇವೆ. ಇಲ್ಲಿನ ಸರ್ಕಾರ ಸಂಪೂರ್ಣ ರಕ್ಷಣೆ ಒದಗಿಸುತ್ತದೆ ಎಂಬ ವಿಶ್ವಾಸದಿಂದ ಇರುವಂತೆ ಮನವಿ ಮಾಡಿದ್ದೇವೆ~ ಎಂದರು.

`ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಶುಕ್ರವಾರ ಈಶಾನ್ಯ ರಾಜ್ಯಗಳತ್ತ ವಾಪಸು ಹೊರಟವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿದೆ. ಇಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಭರವಸೆ ಈ ಜನರಲ್ಲಿ ಮೂಡಿದೆ. ಅಸ್ಸಾಂನಲ್ಲಿ ಕೂಡ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಬೆಂಗಳೂರಿನಲ್ಲಿರುವ ಸಂಬಂಧಿಗಳನ್ನು ವಾಪಸು ಕರೆಯಬೇಡಿ ಎಂದು ನಮ್ಮ ರಾಜ್ಯದ ಜನರಿಗೂ ಮನವಿ ಮಾಡುತ್ತೇವೆ~ ಎಂದರು.

ಕಾರಣ ಇನ್ನೂ ಅಸ್ಪಷ್ಟ: `ಈಶಾನ್ಯ ರಾಜ್ಯಗಳ ಜನರು ಬೆಂಗಳೂರು ತೊರೆಯುತ್ತಿರುವುದಕ್ಕೆ ಖಚಿತವಾದ ಕಾರಣ ಏನು ಎಂಬುದು ಈಗಲೂ ನಮಗೆ ತಿಳಿದಿಲ್ಲ. ಎಸ್ಎಂಎಸ್ಗಳ ಮೂಲಕ ಬಂದ ಬೆದರಿಕೆ, ಕೆಲವೆಡೆ ನೇರವಾಗಿ ಬೆದರಿಕೆ ಹಾಕಲಾಗಿದೆ ಎಂಬುದನ್ನು ಈ ಜನರು ಹೇಳುತ್ತಿದ್ದಾರೆ. ಆದರೆ, ಬೆದರಿಕೆ ಯಾವ ಮೂಲದಿಂದ ಬರುತ್ತಿದೆ ಎಂಬುದನ್ನು ಖಚಿತವಾಗಿ ಹೇಳುತ್ತಿಲ್ಲ~ ಎಂದು ಚಂದನ್ ತಿಳಿಸಿದರು.

`ಸುಮಾರು 15,000ದಷ್ಟು ಜನರು ಬೆಂಗಳೂರಿನಿಂದ ಈಶಾನ್ಯ ರಾಜ್ಯಗಳಿಗೆ ಮರಳಿರಬಹುದು. ಕರ್ನಾಟಕ ಅತ್ಯಂತ ಸುರಕ್ಷಿತ ರಾಜ್ಯ ಎಂಬುದನ್ನು ಅವರೆಲ್ಲರಿಗೂ ಮನವರಿಕೆ ಮಾಡುತ್ತೇವೆ. ಶೀಘ್ರದಲ್ಲೇ ಬೆಂಗಳೂರಿಗೆ ಮರಳಿ ತಮ್ಮ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಮನವೊಲಿಸುತ್ತೇವೆ~ ಎಂದು ನಿಲೊಮಣಿ ಹೇಳಿದರು.

`ಇಲ್ಲಿ ಹೇಳಲಾಗದು~
ಅಸ್ಸಾಂನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಲ್ಲಿನ ಧುಬ್ರಿ ಕ್ಷೇತ್ರದ ಸಂಸದ ಬದ್ರುದ್ದೀನ್ ಅಜ್ಮಲ್ ಕಾರಣ ಎಂದು ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ ಮಾಡಿರುವ ಆರೋಪದಲ್ಲಿ ಸತ್ಯಾಂಶ ಇದೆಯೇ ಎಂಬ ಪ್ರಶ್ನೆ ಅಸ್ಸಾಂನ ಸಚಿವದ್ವಯರಿಗೆ ಎದುರಾಯಿತು.

ಆದರೆ, ಈ ಪ್ರಶ್ನೆಗೆ ಯಾವುದೇ ಉತ್ತರವನ್ನೂ ಅವರು ನೀಡಲಿಲ್ಲ. `ಈ ವಿಷಯವನ್ನು ಇಲ್ಲಿ ಹೇಳಲಾಗದು~ ಎಂದು ನಿಲೊಮಣಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.