ಬೆಂಗಳೂರು: ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ನೈರುತ್ಯ ರೈಲ್ವೆಯ ವತಿಯಿಂದ ಬೆಂಗಳೂರಿನಿಂದ ಪಟ್ನಾಕ್ಕೆ ವಿಶೇಷ ರೈಲುಗಳನ್ನು ಓಡಿಸಲಾಗುವುದು.ಬೆಂಗಳೂರು ನಗರ-ಪಟ್ನಾ ನಡುವಿನ ವಾರದ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06513 ) ಮಂಗಳವಾರ ಬೆಳಿಗ್ಗೆ 8.10 ಕ್ಕೆ ಹೊರಟು ಗುರುವಾರ ಬೆಳಿಗ್ಗೆ 9.50 ಕ್ಕೆ ತಲುಪಲಿದೆ.

ಪಟ್ನಾ- ಬೆಂಗಳೂರು ನಗರ ನಡುವಿನ ವಾರದ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 06514) ವಿಶೇಷವಾಗಿ ಪಟ್ನಾದಿಂದ ಗುರುವಾರ ಬೆಳಿಗ್ಗೆ 8.10 ಕ್ಕೆ ಹೊರಟು ಬೆಂಗಳೂರು ನಗರವನ್ನು ಶನಿವಾರ 9 ಕ್ಕೆ ತಲುಪಲಿದೆ.
ಈ ವಿಶೇಷ ರೈಲಿನ ವ್ಯವಸ್ಥೆಯು ಪಟ್ನಾದಿಂದ ಬೆಂಗಳೂರಿಗೆ ಜೂನ್ 12 ರಿಂದ ಜೂನ್ 26 ರವರೆಗೆ ಇರುತ್ತದೆ. ಬೆಂಗಳೂರಿನಿಂದ ಪಟ್ನಾದವರೆಗೆ ಈ ವ್ಯವಸ್ಥೆಯು ಜೂನ್ 14 ರಿಂದ ಜೂನ್ 28 ರವರೆಗೆ ಇರುತ್ತದೆ.

ಈ ರೈಲು ಬೆಂಗಳೂರು ದಂಡುಪ್ರದೇಶ, ಜೋಲಾರಪೇಟೆ, ಕಾಟ್ಪಾಡಿ, ಅರಕೋಣಂ, ಚೆನ್ನೈ ಕೇಂದ್ರ, ಗುಡೂರು, ವಿಜಯವಾಡ, ನಾಗ್ಪುರ, ಮಾಣಿಕ್ಪುರ, ಮುಘಲ್ ಸರಾಯಿ, ಬಕ್ಸೂರು, ಏರಾ ಮತ್ತು ದಾನಪುರ ಮಾರ್ಗವಾಗಿ ಪಟ್ನಾ ತಲುಪಲಿದೆ.

ನಿಲುಗಡೆ ರದ್ದು: ಮೈಸೂರು- ಚೆನ್ನೈ- ಮೈಸೂರು ನಡುವಿನ ಕಾವೇರಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ- 16221/16222) ರೈಲಿನ ನಿಲುಗಡೆಯನ್ನು ಜುಲೈ ಒಂದರಿಂದ ಅನ್ವಯವಾಗುವಂತೆ ಶ್ರೀರಂಗಪಟ್ಟಣದಲ್ಲಿ ನಿಲ್ಲುವುದನ್ನು ರದ್ದುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.