ಬೆಕ್ಕಿನ ನೆಪದಿಂದ ಜೈಲು ಸೇರದ ಕಳ್ಳ!
ಲಂಡನ್ (ಐಎಎನ್ಎಸ್): ಬೆಕ್ಕಿಗೆ ಉಣಬಡಿಸುವ ನೆಪದಲ್ಲಿ ಕಳ್ಳನೊಬ್ಬ ಜೈಲುಪಾಲಾಗುವುದನ್ನು ತಪ್ಪಿಸಿಕೊಂಡ ಕಥೆಯಿದು.ಸ್ಟೀವನ್ ಥಾಮ್ (55) ಎಂಬಾತ ಪದೆಪದೇ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ. ಮದ್ಯದಂಗಡಿಯಲ್ಲಿ ಮದ್ಯ ಕದಿಯುವಾಗ ಸಿಕ್ಕಿಬಿದ್ದ.
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ವಕೀಲರು ’ಥಾಮ್ ಸಾಕಿರುವ ಬೆಕ್ಕು ಮನೆಯಲ್ಲಿ ಉಪವಾಸವಿದೆ, ಥಾಮ್ನನ್ನು ಪೊಲೀಸರು ಬಂಧಿಸಿದ ನಂತರ ಬೆಕ್ಕಿಗೆ ಆಹಾರ ನೀಡುವವರು ಮನೆಯಲ್ಲಿ ಯಾರೂ ಇಲ್ಲ ಹಾಗೂ ಬೆಕ್ಕಿನ ಬೋನು ಇಲ್ಲದಿರುವುದರಿಂದ ಅಲ್ಲಿ ಆಹಾರವಿಡುವ ವ್ಯವಸ್ಥೆ ಇಲ್ಲ ಎಂದು ನ್ಯಾಯಾಧೀಶರಿಗೆ ತಿಳಿಸಿದರು.
ಕಳ್ಳ ಸಾಕಿದ ಬೆಕ್ಕು ಉಪವಾಸ ಬೀಳುತ್ತದೆ ಎಂಬ ಕಾರಣಕ್ಕೆ ಆತನನ್ನು ಜೈಲಿಗೆ ಕಳುಹಿಸಬಾರದೆ? ವಿಚಿತ್ರವಾಗಿದೆಯಲ್ಲ ನಿಮ್ಮ ವಾದ ಎಂದು ನ್ಯಾಯಾಧೀಶರು ಮೊದಲು ಹೇಳಿದರೂ ನಂತರ ಬೆಕ್ಕಿನ ಬಗ್ಗೆ ಕರುಣೆ ಉಕ್ಕಿ ಕಳ್ಳನನ್ನು ಜೈಲಿಗೆ ಕಳುಹಿಸದೆ 75 ಪೌಂಡ್ ದಂಡ ವಿಧಿಸಿ ಬಿಡುಗಡೆ ಮಾಡಿದರು.ಇನ್ನೊಮ್ಮೆ ಕಳ್ಳತನಕ್ಕೆ ಇಳಿಯುವ ಮೊದಲು ನಿನ್ನ ಬೆಕ್ಕಿನ ಬಗ್ಗೆ ಕಾಳಜಿ ವಹಿಸು ಎಂದು ಹೇಳಲು ನ್ಯಾಯಾಧೀಶರು ಮರೆಯಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.