ಶನಿವಾರ, ಜನವರಿ 18, 2020
21 °C
ರಾಜ್ಯಮಟ್ಟದ ಶಾಲಾ ವಾಲಿಬಾಲ್‌

ಬೆಳಗಾವಿ ವಿಭಾಗಕ್ಕೆ ಪ್ರಶಸ್ತಿ ‘ಡಬಲ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬೆಳಗಾವಿ ಬಾಲಕಿಯರ ತಂಡದವರು, ಇಲ್ಲಿ ಮುಕ್ತಾಯವಾದ ರಾಜ್ಯಮಟ್ಟದ ಶಾಲಾ ವಾಲಿಬಾಲ್‌ ಪಂದ್ಯಾವಳಿಯ ಎರಡೂ ವಿಭಾಗ (17 ಮತ್ತು 14 ವರ್ಷ)ದಲ್ಲಿ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಭಾನುವಾರ ನಡೆದ 17 ವರ್ಷದೊಳಗಿನವರ ವಿಭಾಗದ ಲೀಗ್‌ನ ಅಂತಿಮ ಪಂದ್ಯದಲ್ಲಿ ಬೆಳಗಾವಿ ತಂಡದ ವರು 25–14, 25–19ರಲ್ಲಿ ಬೆಂಗ ಳೂರು ವಿರುದ್ಧ ಗೆಲುವು ಸಾಧಿಸಿದರು. ಬೆಂಗಳೂರು ಹಾಗೂ ವಿದ್ಯಾನಗರ ಕ್ರೀಡಾಶಾಲೆ ತಂಡದವರು ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದರು.14 ವರ್ಷದೊಳಗಿನವರ ಬಾಲಕಿ ಯರ ವಿಭಾಗದಲ್ಲಿ ಬೆಳಗಾವಿ, ಮೈಸೂ ರು ಹಾಗೂ ಗುಲ್ಬರ್ಗ ತಂಡದವರು ಮೊದಲ ಮೂರು ಸ್ಥಾನ ಗಳಿಸಿದರು.17 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ, ಬೆಂಗಳೂರು ತಂಡ ದ್ವಿತೀಯ ಹಾಗೂ ಬೆಳಗಾವಿ ತಂಡದವರು ತೃತೀಯ ಸ್ಥಾನ ಪಡೆದರು.14 ವರ್ಷದೊಳಗಿನವರ ವಿಭಾಗದಲ್ಲಿ ಬೆಳಗಾವಿ, ಗುಲ್ಬರ್ಗ ಹಾಗೂ ಬೆಂಗಳೂರು ತಂಡದವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.ಲೀಗ್‌ ಮಾದರಿಯ ಈ ಪಂದ್ಯಾವಳಿಯಲ್ಲಿ, ಮೂರು ತಂಡಗಳ ವಿರುದ್ಧ ಗೆಲುವು ಸಾಧಿಸಿದ ತಂಡಕ್ಕೆ ಪ್ರಥಮ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ಗಳಿಸಿದ ತಂಡದವರಿಗೆ ಚಿನ್ನದ ಪದಕ, ದ್ವಿತೀಯ ಸ್ಥಾನ ಪಡೆದವರಿಗೆ ಬೆಳ್ಳಿ ಪದಕ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ಕಂಚಿನ ಪದಕಗಳನ್ನು ವಿತರಿಸಲಾಯಿತು.ವಿಜೇತ ತಂಡಗಳ ಆಟಗಾರರನ್ನು ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆ ಮಾಡಲಾಗುವುದು. 17 ವರ್ಷದೊ ಳಗಿನವರ ರಾಷ್ಟ್ರಮಟ್ಟದ ಪಂದ್ಯ ವಿಜಾ ಪುರದಲ್ಲಿ ಮುಂದಿನ ವರ್ಷ ಹಾಗೂ 14 ವರ್ಷದೊಳಗಿನವರ ರಾಷ್ಟ್ರಮ ಟ್ಟದ ಪಂದ್ಯಾವಳಿ ಇದೇ 15ರಿಂದ ಜಮ್ಮು ಕಾಶ್ಮೀರದಲ್ಲಿ ನಡೆಯಲಿದೆ ಎಂ ದು ಸಂಘಟಕರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)