ಕೋಲಾರ: ಮಾವಿನ ಮಡಿಲು ಎಂದೇ ಖ್ಯಾತವಾದ, ಇಡೀ ರಾಜ್ಯದಲ್ಲೆ ಹೆಚ್ಚು ಮಾವು ಬೆಳೆಯುವ ಜಿಲ್ಲೆಯ ಶ್ರೀನಿವಾಪುರ ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದೇ ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರವೂ ಇಲ್ಲದೆ ಇದುವರೆಗೆ ವಹಿವಾಟು ನಡೆಯುತ್ತಾ ಬಂದಿದೆ. ಬೆಳೆಗಾರರು ಅನಿವಾರ್ಯವಾಗಿ ಖಾಸಗಿ ತೂಕದ ಯಂತ್ರಗಳನ್ನು ಅವಲಂಬಿಸಿದ್ದಾರೆ.

ಮಾವಿನ ಕಾಲದಲ್ಲಿ ಈ ಮಾರುಕಟ್ಟೆಗೆ 5 ಲಕ್ಷಕ್ಕೂ ಹೆಚ್ಚು ಟನ್ ಮಾವು ಬರುತ್ತದೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಮಧ್ಯವರ್ತಿಗಳಿಂದ ಎಪಿಎಂಸಿಯು ವಹಿವಾಟಿನ ಶೇ.1.5 ಮಾರುಕಟ್ಟೆ ಶುಲ್ಕವನ್ನೂ ಸಂಗ್ರಹಿಸುತ್ತದೆ. ಆದರೆ ಇದುವರೆಗೂ ಅಲ್ಲಿ ತೂಕದ ಯಂತ್ರವನ್ನು ಅಳವಡಿಸುವ ಕೆಲಸವೇ ನಡೆದಿಲ್ಲ.

ತೂಕ ಹೇಗೆ: ಇಲ್ಲಿನ ಮಾರುಕಟ್ಟೆಗೆ ಬೆಳೆಗಾರರು ತರುವ ಮಾವನ್ನು ಎರಡು ಬಗೆಯಲ್ಲಿ ತೂಕ ಮಾಡಲಾಗುತ್ತದೆ. ಟನ್ಗಟ್ಟಲೆ ಭಾರವನ್ನು ತೂಗುವ ಖಾಸಗಿಯವರ ತೂಕದ ಯಂತ್ರ ಗಳಿಂದ ತೂಗುವುದು ಒಂದು ಬಗೆ. ಮಾರುಕಟ್ಟೆ ಆವ ರಣದಲ್ಲಿ ಮಳಿಗೆ ತೆರೆಯುವ ಮಧ್ಯವರ್ತಿಗಳ ಬಳಿಯಿರುವ ಸ್ಕೇಲ್ ತೂಕದ ಯಂತ್ರದಿಂದ ತೂಗುವುದು ಮತ್ತೊಂದು ಬಗೆ.

ಟನ್ಗಟ್ಟಲೆ ಮಾವು ಬೆಳೆಯುವ ದೊಡ್ಡ ರೈತರು ಖಾಸಗಿ ತೂಕದ ಯಂತ್ರಗಳನ್ನು ಅವಲಂಬಿಸುತ್ತಾರೆ. ಮಾರುಕಟ್ಟೆ ಯಲ್ಲಿರುವ ಮಧ್ಯವರ್ತಿಗಳ ಸಂಪರ್ಕದಲ್ಲಿರುವ ಖಾಸಗಿ ತೂಕದ ಅಂಗಡಿಗಳ ಮೂಲಕವೇ ಈ ತೂಕದ ವ್ಯವಹಾರ ನಡೆ ಯುತ್ತದೆ. ಸಣ್ಣ ಪ್ರಮಾಣದ ರೈತರು ತರುವ ಮಾವನ್ನು ಮಧ್ಯ ವರ್ತಿಗಳೇ ತಮ್ಮ ಬಳಿ ಇರುವ ಸ್ಕೇಲ್ ತೂಕದ ಯಂತ್ರದಲ್ಲಿ ತೂಗುತ್ತಾರೆ. 150 ಕೆಜಿಯಿಂದ 500 ಕೆಜಿವರೆಗೂ ತೂಗುವ ಸ್ಕೇಲ್ ಯಂತ್ರದಲ್ಲಿ ತೂಕ ಹಾಕುವ ಕೆಲಸ ನಿಧಾನ ಎಂಬುದು ಬೆಳೆಗಾರರ ಆಕ್ಷೇಪ.

ಕೆಲವು ಮಧ್ಯವರ್ತಿಗಳು ಒವ್ಮೆುಗೆ 30-40-50 ಕೆಜಿ ಯಂತೆ ತೂಗುವ ಅಭ್ಯಾಸವಿಟ್ಟುಕೊಂಡಿರತ್ತಾರೆ. ಅಂಥವರ ಬಳಿಗೆ ಮಾವನ್ನು ಕೊಂಡೊಯ್ದರೆ ತೂಕ ಹಾಕಿಸುವುದಕ್ಕೇ ದಿನವೆಲ್ಲವೂ ನಿಂತಿರಬೇಕು ಎಂಬುದು ಮತ್ತೊಂದು ದೂರು.

ದೂರದ ಹಳ್ಳಿಗಳಿಂದ ಬರುವ ಬೆಳೆಗಾರರಿಗೆ ಶೌಚಾಲಯ, ಕುಡಿಯುವ ನೀರು ಮೊದಲಾದ ಮೂಲಸೌಕರ್ಯಗಳೂ ಮಾರುಕಟ್ಟೆ ಪ್ರಾಂಗಣದಲ್ಲಿ ಇಲ್ಲದಿರುವುದರಿಂದ, ಅವರು ತಾವು ತಂದ ಮಾವನ್ನು ಸಂಪೂರ್ಣವಾಗಿ ತೂಕ ಹಾಕು ವವ ರೆಗೂ ಇರಲು ಸಾಧ್ಯವಾಗದೆ ಹಿಂದಿರುಗುತ್ತಾರೆ.

ಮಾರನೇ ದಿನ ಅವರು ಬರುವ ಹೊತ್ತಿಗೆ ಮಧ್ಯವರ್ತಿಗಳು ಮಾವನ್ನು ತೂಕಹಾಕಿ ಪ್ರಮಾಣವನ್ನು ಹೇಳುತ್ತಾರೆ. ಹೀಗೆ, ತೂಕ ಹಾಕುವ ಪ್ರಕ್ರಿಯೆಯಲ್ಲಿ ಬೆಳೆಗಾರರು ಪೂರ್ಣವಾಗಿ ಪಾಲ್ಗೊ ಳ್ಳಲು ಸಾಧ್ಯವಾಗುವುದೇ ಇಲ್ಲ. ಇದು ಹಲವು ವರ್ಷಗಳಿಂದ ನಡೆದು ಬರುತ್ತಿದೆ ಎನ್ನುತ್ತಾರೆ ಬೆಳೆಗಾರರೊಬ್ಬರು.

ಬೆಲೆ ಫಲಕವೂ ಇಲ್ಲ: ಮಾರುಕಟ್ಟೆಯಲ್ಲಿ ಧಾರಣೆ ಫಲಕವೂ ಇಲ್ಲ. ಹೀಗಾಗಿ ಮಧ್ಯವರ್ತಿಗಳು ಹೇಳಿದ್ದೇ ಬೆಲೆ. ಬೇರೆ ಜಿಲ್ಲೆ, ರಾಜ್ಯಗಳ ಮಾರುಕಟ್ಟೆಯಲ್ಲಿ ಪ್ರತಿದಿನವೂ ಬೆಲೆ ಏರುಪೇರಾ ಗುತ್ತಿರುತ್ತದೆ. ಅದನ್ನು ಅವಲಂಬಿಸಿಯೇ ಅಂದಂದಿನ ಧಾರಣೆ ಯನ್ನು ನಿರ್ಧರಿಸಬೇಕಾಗುತ್ತದೆ. ಆದರೆ ಆ ಬಗ್ಗೆ ಪ್ರಾಥಮಿಕ ಮಾಹಿತಿಯೂ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಹೀಗಾಗಿ ಮಧ್ಯವರ್ತಿಗಳು ಹೇಳುವ ಬೆಲೆಯನ್ನೆ ನೆಚ್ಚಿ ಕೊಳ್ಳಬೇಕಾಗುತ್ತದೆ.

ಈ ಸನ್ನಿವೇಶ ಬದಲಾಗಬೇಕು ಎನ್ನುತ್ತಾರೆ ಮಾವು ಬೆಳೆಗಾರ ಅಶೋಕ್ ಕೃಷ್ಣಪ್ಪ.ಮಧ್ಯವರ್ತಿಗಳು ಮಾವಿನ ನಿಜವಾದ ಬೆಲೆಯನ್ನು ಬಹುತೇಕ ಸಂದರ್ಭದಲ್ಲಿ ಹೇಳುವುದೇ ಇಲ್ಲ. `ಎಲ್ಲ ಕಡೆ ಮಾವಿಗೆ ರೇಟು ಕಡಿಮೆಯಾಗಿದೆ~ ಎಂಬುದು ಅವರು ಪದೇಪದೇ ಹೇಳುವ ಮಾತು.

ಅವರ ಮಾತಿನಿಂದ ಆತಂಕಿತರಾಗುವ ಬೆಳೆಗಾರರು ಎಷ್ಟು ಸಿಕ್ಕಿದರೆ ಅಷ್ಟೇ ಸಾಕು ಎಂದು ನಿರ್ಧರಿಸಿ ಕೈಗೆ ಸಿಕ್ಕಷ್ಟು ಹಣವನ್ನು ಪಡೆದು ಹೋಗಬೇಕಾದ ಸನ್ನಿವೇಶ ನಿರ್ಮಾಣ ವಾಗುತ್ತದೆ ಎನ್ನುತ್ತಾರೆ.

ತೂಕದ ಯಂತ್ರಕ್ಕೆ ಟೆಂಡರ್: ಅಧ್ಯಕ್ಷ

ಕೋಲಾರ: ಎಪಿಎಂಸಿ ಪ್ರಾಂಗಣದಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಶೀಘ್ರವೇ ಅಳವಡಿಸಲಾಗುವುದು. ಅದಕ್ಕಾಗಿ ಒಂದು ತಿಂಗಳ ಹಿಂದೆಯೇ ಟೆಂಡರ್ ಕರೆಯಲಾಗಿದೆ. ಮಾವಿನ ಕಾಲ ಶುರುವಾಗುವ ಹೊತ್ತಿಗೆ ತೂಕದ ಯಂತ್ರವನ್ನು ಅಳವಡಿಸಲಾಗಿರುತ್ತದೆ ಎಂದು ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಎಪಿಎಂಸಿ ಆವರಣದಲ್ಲಿ ವಹಿವಾಟು ನಡೆಸುವರು ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಅಳವಡಿಸುವುದನ್ನು ಕಡ್ಡಾಯ ಮಾಡಲಾಗುವುದು. ಅಳವಡಿಸದಿದ್ದರೆ ವಹಿವಾಟು ನಡೆಸಲು ಬಿಡುವುದಿಲ್ಲ. ಇದುವರೆಗೂ ಧಾರಣೆ ಫಲಕವಿಲ್ಲದೆ ವಹಿವಾಟು ನಡೆಸಲಾಗಿದೆ. ಈ ಬಾರಿ ಫಲಕ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಆವರಣದಲ್ಲಿ ಶೌಚಾಲಯ, ಸ್ನಾನದ ಕೊಠಡಿ ನಿರ್ಮಾಣ, ಬೀದಿದೀಪ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ಶುರುವಾಗಿದೆ. ನೀರಿನ ಸೌಕರ್ಯವನ್ನೂ ನೀಡಲಾಗುವುದು. ಕಳೆದ ಬಾರಿ ಎಪಿಎಂಸಿಗೆ 44 ಲಕ್ಷ ರೂಪಾಯಿ ಆದಾಯ ಬಂದಿತ್ತು. ಸರ್ಕಾರದಿಂದ ಯಾವ ನೆರವೂ ಬಂದಿಲ್ಲ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.