ಶುಕ್ರವಾರ, ಜೂನ್ 18, 2021
28 °C

ಬೇಡಿಕೆ ಈಡೇರಿಸದಿದ್ದಲ್ಲಿ ಶಾಲಾ–ಕಾಲೇಜು ಬಂದ್: ಶಾಸಕರಿಂದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕಾಲ್ಪನಿಕ ವೇತನ ಸೌಲಭ್ಯ ಮುಂದುವರಿಸುವುದು, ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವುದು ಸೇರಿ ದಂತೆ 18 ಬೇಡಿಕೆಗಳನ್ನು ಈಡೇರಿಸ ದಿದ್ದರೆ ಬರುವ ಆಗಸ್ಟ್‌ ತಿಂಗಳಲ್ಲಿ ಶಾಲಾ–ಕಾಲೇಜುಗಳನ್ನು ಬಂದ್‌ ಮಾಡಲಾಗುವುದು ಎಂದು ಶಾಸಕ ರಾದ ಪುಟ್ಟಣ್ಣ, ಮರಿತಿಬ್ಬೇಗೌಡ ಎಚ್ಚರಿಸಿದರು.ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸು ವಂತೆ ಕೋರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ 5 ಬಾರಿ ಪತ್ರ ಬರೆದರೂ ಕ್ರಮಕೈಗೊಂಡಿಲ್ಲ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ‘ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದರೆ ಮುಷ್ಕರ ಅನಿ ವಾರ್ಯ’ ಎಂದರು.‘ಅನುದಾನರಹಿತ ಸೇವೆಯ ಅವಧಿ ಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಿ ₨ 280 ಕೋಟಿ ಬಿಡುಗಡೆ ಮಾಡಲಾಗು ವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ವಿಧಾನ ಪರಿ ಷತ್‌ನಲ್ಲಿ ತಿಳಿಸಿದ್ದರು. ಆದರೆ, ಈ ತಿಂಗಳ 4ರಂದು ಹೊರಡಿಸಿರುವ ಆದೇಶದಲ್ಲಿ ಅನುದಾನರಹಿತ ಸೇವೆಯ ಅವಧಿಯನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ. ಇದನ್ನು ಕೂಡಲೇ ತಡೆಹಿಡಿಯಬೇಕು. ಚುನಾವಣೆ ನಂತರ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದರು.ಸರ್ಕಾರಿ, ಅನುದಾನಿತ ಪದವಿ ಕಾಲೇಜು ಹಾಗೂ ಎಂಜಿನಿಯರಿಂಗ್‌ ಕಾಲೇಜು ಸಿಬ್ಬಂದಿಗೆ 2006ರಿಂದ ಪರಿ ಷ್ಕೃತ ವೇತನ ಜಾರಿಯಾಗಿದೆ. ಆದರೆ, ಹಿಂಬಾಕಿ ₨165 ಕೋಟಿಯನ್ನು ಇದು ವರೆಗೂ ಸಿಬ್ಬಂದಿಗೆ ನೀಡಿಲ್ಲ. ಕೂಡಲೇ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಶಾಲಾ ಕೊಠಡಿ ನಿರ್ಮಾಣದ ಮೇಲ್ವಿಚಾರಣೆ, ಬಿಸಿಯೂಟ, ಹಾಲು ವಿತರಣೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ನೀಡುವುದು ಇತ್ಯಾದಿಗಳನ್ನು ಶಿಕ್ಷಕರು ಗಮನಿಸ ಬೇಕಾಗಿರುವುದರಿಂದ ಬೋಧನೆಗೆ ಸಮಯ ಇಲ್ಲದಂತಾಗಿದೆ. ಆದ್ದರಿಂದ ಬೇರೆ ಜವಾಬ್ದಾರಿಗಳಿಂದ ಶಿಕ್ಷಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಸಮಿತಿ ರಚನೆ ವಿರುದ್ಧ ಖಂಡನೆ: ‘ಖಾಸಗಿ ಅನುದಾನರಹಿತ ಶಾಲೆಗಳಿಗೆ ಶುಲ್ಕ ನಿಗದಿ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯು ಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡ ಲಾಗಿದೆ. ಅವರ ಕಾರ್ಯ ಉದ್ದಟತ ನದಿಂದ ಕೂಡಿದೆ’ ಎಂದು ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಲ್‌.ಆರ್‌. ಶಿವರಾಮೇಗೌಡ ಕಿಡಿಕಾರಿದರು. ನಗರದಲ್ಲಿ ಶುಕ್ರವಾರ ನಡೆದ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿ ಕಾರಿಗಳ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ‘ಅನುದಾನರಹಿತ ಶಾಲೆಗಳಲ್ಲಿ ಶುಲ್ಕ ನಿಗದಿ ವಿರುದ್ಧ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ನ್ಯಾಯಾಲಯದ ಮೊರೆ ಹೋಗಿದೆ. ಪ್ರಕರಣ ನ್ಯಾಯಾ ಲಯದಲ್ಲಿ ಇರುವ ಸಂದರ್ಭದಲ್ಲಿ ಶುಲ್ಕ ನಿಗದಿ ಮಾಡುವ ಅಧಿಕಾರ ಆಯುಕ್ತರಿಗೆ ಇಲ್ಲ. ಖಾಸಗಿ ಶಾಲೆಗಳ ಪ್ರಮುಖರಿಗೆ ಮಾಹಿತಿ ನೀಡದೆ ಸಮಿತಿ ರಚನೆ ಮಾಡಿದ್ದಾರೆ.ಆಯುಕ್ತರ ಕ್ರಮದ ವಿರುದ್ಧ ಮುಖ್ಯಮಂತ್ರಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಸೋಮವಾರ ಮನವಿ ಮಾಡಲಾಗುವುದು. ಒಂದು ವೇಳೆ ಈ ಪ್ರಸ್ತಾಪ ಕೈಬಿಡದಿದ್ದರೆ ರಾಜ್ಯದಾದ್ಯಂತ ಶಾಲಾ ಬಂದ್‌ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.