ಗುರುವಾರ , ಮೇ 26, 2022
28 °C

ಬೇಡಿ ಪ್ರಕರಣ: ಅನಿಲ್ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  ಕಿರಣ್ ಬೇಡಿ ಅವರ ಸರ್ಕಾರೇತರ ಸಂಸ್ಥೆ ಇಂಡಿಯಾ ವಿಷನ್ ಫೌಂಡೇಷನ್ (ಐವಿಎಫ್)ನ ಟ್ರಾವೆಲ್ ಏಜೆಂಟ್ ಅನಿಲ್ ಬಲ್ ರಾಜೀನಾಮೆ ನೀಡಿದ್ದಾರೆ.ಕಿರಣ್ ಬೇಡಿ ಅವರು ಹೆಚ್ಚುವರಿ ಪ್ರಯಾಣ ದರ ಪಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ತಮಗೆ ಅವಮಾನವಾಗಿದೆ ಎಂದು ಅನಿಲ್ ಬಲ್ ಹೇಳಿದ್ದಾರೆ. ಬಲ್, ಪ್ಲೇವೆಲ್ ಟ್ರಾವೆಲ್‌ನ ಮಾಲಿಕರು ಹಾಗೂ ಐವಿಎಫ್‌ನ ಟ್ರಸ್ಟಿಯೂ ಆಗಿದ್ದರು.ವಿಮಾನ ಪ್ರಯಾಣ ದರದಲ್ಲಿ ತಾವು ಉಳಿಸಿದ ಹಣದಿಂದ ಒಂದು ನಯಾಪೈಸೆಯನ್ನೂ ತಾವು ಬಳಸಿಕೊಂಡಿಲ್ಲ ಎಂದು ಈಗಾಗಲೇ ಬೇಡಿ ಸ್ಪಷ್ಟೀಕರಣ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.