ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿನಿಂದ ಭಾರಿ ಪ್ರಮಾಣದಲ್ಲಿ ಅಕ್ರಮ ಅದಿರನ್ನು ರಫ್ತು ಮಾಡಲಾಗಿದ್ದು, ಈ ಹಗರಣ ಕುರಿತು ಸಿಬಿಐನಂಥ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ನೇತೃತ್ವದ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ) ಮಹತ್ವದ ಶಿಫಾರಸು ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಹಗರಣ ಭಾರಿ ಮಹತ್ವ ಪಡೆದುಕೊಂಡಿದೆ.

`ಬೇಲೆಕೇರಿ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಅದಿರನ್ನು ಕಳುವು ಮಾಡಿ ರಫ್ತು ಮಾಡಿದ ಹಗರಣ ಕುರಿತು ಈಗಾಗಲೇ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಸಿಬಿಐನಂಥ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವ ಅಗತ್ಯವಿಲ್ಲ~ ಎಂದು ಪ್ರತಿಪಾದಿಸಿದ್ದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಿಇಸಿ ಶಿಫಾರಸಿನಿಂದ ಭಾರಿ ಹಿನ್ನಡೆಯಾಗಿದೆ. ಸಿಇಸಿ ಶಿಫಾರಸಿಗೆ ಸುಪ್ರೀಂ ಕೋರ್ಟ್ `ಹಸಿರು ನಿಶಾನೆ~ ತೋರಿದರೆ 2009ರಿಂದ ಬೇಲಿಕೇರಿ ಬಂದರಿನಿಂದ ಅಕ್ರಮ ಅದಿರು ಎಷ್ಟು ಪ್ರಮಾಣದಲ್ಲಿ ರಫ್ತಾಗಿದೆ. ಈ ವ್ಯವಹಾರದಲ್ಲಿ ಕಾರ್ಪೊರೇಟ್ ಕಂಪೆನಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಪಾತ್ರವೇನು ಎಂಬ ಸತ್ಯ ಬೆಳಕಿಗೆಬರಲಿದೆ.

ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾರ್ಪೋರೇಟ್ ಕಂಪೆನಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಡುವಿನ `ಅಪವಿತ್ರ ಮೈತ್ರಿ~ ಕುರಿತು ತನಿಖೆ ನಡೆಸುವಂತೆ ಧಾರವಾಡದ `ಸಮಾಜ ಪರಿವರ್ತನಾ ಸಮುದಾಯ~(ಎಸ್ಪಿಎಸ್) ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಸಿಇಸಿ ಈ ಮಹತ್ವದ ಶಿಫಾರಸು ಮಾಡಿದೆ.

ಕಳೆದ ಎರಡು ವರ್ಷದಲ್ಲಿ ಬೇಲಿಕೇರಿ ಬಂದರಿಗೆ ಬಂದಿರುವ ಅದಿರಿನ ಪ್ರಮಾಣ ಹಾಗೂ ರಫ್ತು ಮಾಡಿದ ಅದಿರಿನ ಪ್ರಮಾಣ ಕುರಿತು ಸಮಗ್ರ ತನಿಖೆ ನಡೆಯಬೇಕು. 2009-10ರಲ್ಲಿ 65,018 ಲಕ್ಷ ಟನ್ ಮತ್ತು 2010-11ರಲ್ಲಿ 15,845ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ. ಆದರೆ, ಆ ಎರಡು ವರ್ಷಗಳಲ್ಲಿ ಕ್ರಮವಾಗಿ 28,510 ಲಕ್ಷ ಟನ್ ಮತ್ತು 4,250 ಲಕ್ಷ ಟನ್ ಅದಿರು ರಫ್ತಿಗೆ ಮಾತ್ರ ಅನುಮತಿ ನೀಡಲಾಗಿತ್ತು ಎಂದು ಸಿಇಸಿ ವರದಿ ವಿವರಿಸಿದೆ.

2009-10ರಲ್ಲಿ 36,508 ಲಕ್ಷ ಟನ್ ಹಾಗೂ 2010- 11ರಲ್ಲಿ 11,594 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ. ಪ್ರತಿ ಲಕ್ಷ ಟನ್ಗೆ 3 ಸಾವಿರ ರೂಪಾಯಿ ಲೆಕ್ಕ ಹಾಕಿದರೂ ರಫ್ತು ಮಾಡಲಾದ ಅದಿರಿನ ಬೆಲೆ 1443 ಕೋಟಿ ರೂಪಾಯಿ ಆಗಲಿದೆ ಎಂದು ಸಿಇಸಿ ವರದಿ ಸ್ಪಷ್ಟಪಡಿಸಿದೆ. ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸಿರುವ ಲೋಕಾಯುಕ್ತ ನವೆಂಬರ್ 2009ರಿಂದ ಮಾರ್ಚ್ 2011ರವರೆಗೆ 83ಲಕ್ಷ ಟನ್ ಅಕ್ರಮ ಅದಿರು ಸಾಗಣೆ ಆಗಿದೆ. ಇದರ ಒಟ್ಟು ಬೆಲೆ 2,503 ಕೋಟಿ ಎಂದು ಅಂದಾಜು ಮಾಡಿದೆ ಎಂದೂ ಸಿಇಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಕ್ರಮ ಅದಿರು ರಫ್ತು ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ನಡೆಸಿರುವ ತನಿಖೆ ಪ್ರಗತಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಿಇಸಿ, ಅಕ್ರಮವಾಗಿ ಅದಿರು ರಫ್ತು ಮಾಡಿರುವ ಪ್ರಕರಣದಲ್ಲಿ ಸಂಬಂಧಪಟ್ಟ ಎಲ್ಲರ ಮೇಲೂ ಹೊಣೆಗಾರಿಕೆ ನಿಗದಿ ಮಾಡಬೇಕೆಂದು ಸಲಹೆ ಮಾಡಿದೆ. ಕಸ್ಟಮ್ಸ ಇಲಾಖೆ ಅಂದಾಜು ಮಾಡಿರುವ ಮೌಲ್ಯ ಆಧರಿಸಿ ಸಂಬಂಧಪಟ್ಟವರಿಂದ ಹಣ ವಸೂಲು ಮಾಡಬೇಕು ಎಂದು ವರದಿಯಲ್ಲಿ ತಿಳಿಸಿದೆ.

ಅಕ್ರಮ ಅದಿರು ರಫ್ತು ಹಗರಣದ ತನಿಖೆಗೆ ಕಾಲಮಿತಿ ನಿಗದಿ ಮಾಡಬೇಕು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ನಿಯೋಜಿತ ನ್ಯಾಯಾಲಯದಲ್ಲಿ ದಿನನಿತ್ಯದ ಆಧಾರದಲ್ಲಿ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ. ಬೇಲಿಕೇರಿ ಬಂದರಿನಲ್ಲಿ 2010ರ ಮಾರ್ಚ್ 20ರಂದು ವಶಪಡಿಸಿಕೊಳ್ಳಲಾದ 9,06ಲಕ್ಷ ಟನ್ ಅಕ್ರಮ ಅದಿರಿನಲ್ಲಿ `ಅದಾನಿ ಎಂಟರ್ಪ್ರೈಸಸ್~,~ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ~ `ಸಲಗಾಂವಕರ್ ಮೈನಿಂಗ್ ಇಂಡಸ್ಟ್ರೀಸ್ ಪ್ರೈ. ಲಿ~ ಮತ್ತು `ರಾಜಮಹಲ್ ಸಿಲ್ಕ್ಸ್ 7.57ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಪ್ತು ಮಾಡಿವೆ ಎಂದು ಆರೋಪ ಮಾಡಿದೆ.

ರಾಜ್ಯ ಸರ್ಕಾರ ಅದಿರು ರಫ್ತು ನಿಷೇಧಿಸಿದ ಬಳಿಕ 39 ಕಂಪೆನಿಗಳು ಆಂಧ್ರದ ಕೃಷ್ಣಪಟ್ಟಣಂನಿಂದ 15.15ಲಕ್ಷ ಟನ್ ಹಾಗೂ ಏಳು ಕಂಪೆನಿಗಳು ಚೆನ್ನೈ ಬಂದರಿನಿಂದ 3.45 ಲಕ್ಷ ಟನ್ ಅದಿರು ರಫ್ತು ಮಾಡಿದೆ ಎಂದು ಸಿಇಸಿ ಹೇಳಿದೆ. ಸುಪ್ರೀಂ ಕೋರ್ಟ್ ಈ ವರದಿಯನ್ನು ಅಂಗೀಕಾರ ಮಾಡಿದರೆ ಕಾರ್ಪೊರೇಟ್ ಕಂಪೆನಿಗಳು, ಅಧಿಕಾರಿಗಳು ಒಳಗೊಂಡಂತೆ ಎಲ್ಲರೂ ತನಿಖೆ ಎದುರಿಸಬೇಕಾಗಲಿದೆ.

ಸುಪ್ರೀಂ ಕೋರ್ಟ್ ಏ.30ರಂದು ಸೋಮವಾರ ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರು ಗಣಿ ಕಂಪೆನಿಗಳಿಂದ ಪಡೆದಿದ್ದಾರೆನ್ನಲಾದ `ದೇಣಿಗೆ~ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಸಿಇಸಿ ಏ.20ರಂದು ಶಿಫಾರಸು ಮಾಡಿದ್ದು, ಮುಖ್ಯ ನ್ಯಾಯಮೂರ್ತಿ ಎಸ್. ಎಚ್.ಕಪಾಡಿಯಾ ನೇತೃತ್ವದ ಅರಣ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.