ಮಂಗಳವಾರ, ಜೂನ್ 15, 2021
21 °C

ಬೇಸ್ ಬೇಸಿಗೆ ಕಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಬೆಂಗಳೂರು ಮೂಲದ ತರಬೇತಿ ಸಂಸ್ಥೆ ಬೇಸ್, ಈ ಬೇಸಿಗೆಯಲ್ಲಿ 5 ರಿಂದ 8ನೇ ತರಗತಿ ಮಕ್ಕಳಿಗಾಗಿ `ಡಿಸ್ಕವರ್, ಎನ್ ಸ್ಕಿಲ್ ಹಾಗೂ ಔಟ್2  ಲರ್ನ್~ ಎಂಬ 3 ವಿನೂತನ ಕಲಿಕಾ ಕಾರ್ಯಕ್ರಮ ಆಯೋಜಿಸಿದೆ.ಇವನ್ನು ಮಕ್ಕಳ ಮನಶಾಸ್ತ್ರಜ್ಞರು, ಹಿರಿಯ ಶಿಕ್ಷಕರನ್ನು ಒಳಗೊಂಡ ವೃತ್ತಿಪರರ ತಂಡ ಸಿದ್ಧಗೊಳಿಸಿದೆ. ಇವು ಶಾಲಾ ಪಠ್ಯಕ್ಕೆ ನೆರವಾಗುವ ರೀತಿಯಲ್ಲಿದ್ದು, ತರಗತಿಗಳು ಏಪ್ರಿಲ್ ತಿಂಗಳ ಮೊದಲ ವಾರದಿಂದ ಆರಂಭವಾಗಲಿವೆ.

 

ಪ್ರಯೋಗಾತ್ಮಕ ಕಲಿಕೆಗೆ ತೊಡಗಿಸಿಕೊಂಡು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಿ ಬೇಸಿಗೆ ಕಾಲವನ್ನು ಉತ್ಸಾಹದಿಂದ ಕಳೆಯುವಂತೆ ಮಾಡುವುದೇ ಇವುಗಳ ಉದ್ದೇಶ.ಅನ್ವೇಷಣೆ ಮತ್ತು ಪ್ರಯೋಗಾತ್ಮಕ ಕಲಿಕೆಯಲ್ಲಿ ವಿನೋದ, ವಿಜ್ಞಾನ ಹಾಗೂ ಗಣಿತಗಳನ್ನು ಕಲಿಯಲು ನೆರವಾಗುವುದು, ಜೀವನ ಕಲೆಯನ್ನು ಪೋಷಿಸಿ ಕಲಿತದ್ದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವುದು, ಆತ್ಮ ವಿಶ್ವಾಸವನ್ನು ಬೆಳೆಸುವುದು ಇದರಲ್ಲಿವೆ. ರ‌್ಯಾಪೆಲ್ಲಿಂಗ್, ಜಂಗಲ್ ಜಿಮ್,  ರ‌್ಯಾಫ್ಟ್ ಬಿಲ್ಡಿಂಗ್, ಚಾರಣ ಇತ್ಯಾದಿ ಚಟುವಟಿಕೆಗಳನ್ನು ಒಳಗೊಂಡಿದೆ ಎಂದು ಬೇಸ್ ನಿರ್ದೇಶಕ ವಲ್ಲೀಶ್ ಹೆರೂರ್ ಹೇಳುತ್ತಾರೆ.ಮಾಹಿತಿಗೆ: info@base-edu.i ಈಮೇಲ್ ಅಥವಾ 080 - 4260 4600.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.