ಚಿಕ್ಕಬಳ್ಳಾಪುರ: ನಗರದಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ವ್ಯಾಪಾರ-ವಹಿವಾಟು ತೀವ್ರಗತಿಯಲ್ಲಿ ನಡೆಯುತ್ತಿದ್ದು, ವಾಹನಗಳ ಬಳಕೆಯು ಹೆಚ್ಚಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ನಂತರವಂತೂ ಹಲವು ಬದಲಾವಣೆಗಳು ಆಗುತ್ತಿದ್ದು, ಅವುಗಳ ಭಾಗವಾಗಿ ವಾಹನಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದ್ದು, ಯುವಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸಂಗಾತಿಯಾಗಿದ್ದ ಸೈಕಲ್ಗಳ ಸಂಖ್ಯೆ ಕುಸಿದಿದ್ದು, ಬೈಕ್ಗಳ ಸಂಖ್ಯೆ ಏರುತ್ತಿದೆ.

ಯುವಜನರು ಅದರಲ್ಲೂ ಉದ್ಯೋಗಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಬೈಕ್ಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಪೋಷಕರ ಮನವೊಲಿಸಿ ಅವುಗಳನ್ನು ಖರೀದಿಸುತ್ತಿದ್ದಾರೆ. ಕಿರಿದಾದ ರಸ್ತೆಗಳಲ್ಲಿ ಜಾಗರೂಕತೆಯಿಂದ ಚಾಲನೆ ಮಾಡುವ ಬೈಕ್ ಸವಾರರು ವಿಶಾಲವಾದ ರಸ್ತೆಗಳಲ್ಲಿ ಮತ್ತು ಹೆದ್ದರಿಗಳಲ್ಲಿ ವೇಗವಾಗಿ ಚಾಲನೆ ಮಾಡುತ್ತಾರೆ. ಸಿನಿಮಾ ಶೈಲಿಯಲ್ಲಿ ಕಸರತ್ತು ಮಾಡಲೆತ್ನಿಸಿ ಕೆಲವರು ಅಪಘಾಕ್ಕೀಡಾಗುವ ಪ್ರಕರಣಗಳು ಸಂಭವಿಸುತ್ತವೆ. ರಸ್ತೆ ತಿರುವುಗಳಲ್ಲಿ ಮತ್ತು ವೃತ್ತಗಳಲ್ಲಿ ಸಂಚಾರದ ಸಿಗ್ನಲ್ಗಳತ್ತ ಗಮನಹರಿಸದೇ ವೇಗವಾಗಿ ಚಾಲನೆ ಮಾಡಿ ಬೈಕ್ಗಳ ಮೇಲೆ ನಿಯಂತ್ರಣ ಕಳೆದುಕೊಂಡು ಕೆಳಗಡೆ ಬಿದ್ದು ಗಾಯಗೊಳ್ಳುತ್ತಾರೆ. ಇಲ್ಲದಿದ್ದರೆ ಸಂಚಾರ ನಿಯಮ ಉಲ್ಲಂಘಿ ಸಿದ್ದಕ್ಕೆ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದ ದಂಡ ಪಾವತಿಸಬೇಕಾಗುತ್ತದೆ.

ವಾಹನಗಳ ಚಾಲನೆ ಅದರಲ್ಲೂ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವಾಗ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸದಾ ಹೇಳುತ್ತಾರೆ. ಹೆಲ್ಮಟ್ ಧರಿಸುವುದರ ಜೊತೆಗೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಪದೇ ಪದೇ ಸೂಚನೆ ನೀಡುತ್ತಾರೆ. ಬೆಂಗಳೂರು ಸೇರಿದಂತೆ ಕೆಲ ನಗರಗಳಲ್ಲಿ ಹೆಲ್ಮೆಟ್ ಧರಿಸುವಿಕೆಯನ್ನು ಕಡ್ಡಾಯ ಮಾಡಲಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಕಡ್ಡಾಯಗೊಳಿಸಲಾಗಿಲ್ಲ. ಬಹುತೇಕ ಮಂದಿ ಹೆಲ್ಮಟ್ಗಳನ್ನು ಧರಿಸದೇ ಸವಾರಿ ಮಾಡುತ್ತಾರೆ. ಇನ್ನೂ ಕೆಲವರಂತೂ ವಾಹನದ ದಾಖಲೆಪತ್ರಗಳನ್ನು ಸಹ ಹೊಂದಿರುವುದಿಲ್ಲ ಎಂಬ ಆರೋಪವು ಇದೆ.

‘ದ್ವಿಚಕ್ರ ವಾಹನಗಳು ಸೇರಿದಂತೆ ಇತರ ವಾಹನಗಳ ಸಂಖ್ಯೆಯು ಹೆಚ್ಚಿದ್ದು, ಕೆಲವೊಮ್ಮೆ ವಾಹನ ದಟ್ಟಣೆಗೂ ಕಾರಣವಾಗುತ್ತದೆ. ಶಿಡ್ಲಘಟ್ಟ ವೃತ್ತ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ವೃತ್ತದ ಬಳಿ ಸಹಜವಾಗಿಯೇ ವಾಹನಗಳ ದಟ್ಟಣೆಯಾಗುತ್ತದೆ. ಇದಕ್ಕೆಂದೇ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ದ್ವಿಚಕ್ರ ವಾಹನ ಸವಾರರ ಮೇಲೆ ನಿಗಾ ಇಡುವ ಪೊಲೀಸ್ ಸಿಬ್ಬಂದಿ ಆಯಾ ವಾಹನಕ್ಕೆ ಸಂಬಂಧಿಸಿದಂತೆ ದಾಖಲೆಪತ್ರಗಳನ್ನು ಪರಿಶೀಲಿಸುತ್ತಾರೆ. ಬೈಕ್ ಸವಾರ ಚಾಲನಾ ಪರವಾನಗಿ ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದು ಪರೀಕ್ಷಿಸುತ್ತಾರೆ. ಯಾವುದಾದರೂ ಲೋಪದೋಷ ಕಂಡು ಬಂದಲ್ಲಿ, ತಪ್ಪಿತಸ್ಥರಿಂದ ದಂಡ ವಸೂಲಿ ಮಾಡಲಾಗುತ್ತದೆ’ ಎಂದು ಸಂಚಾರ ಠಾಣೆಯ ಸಬ್ಇನ್ಸ್ಪೆಕ್ಟರ್ ನಾಯಜ್ ಬೇಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೂ ಆಸಕ್ತಿಮಯ ಸಂಗತಿಯೆಂದರೆ, ಜಿಲ್ಲೆಯಲ್ಲಿ ಅತಿ ಹೆಚ್ಚಿನ ದ್ವಿಚಕ್ರ ವಾಹನಗಳು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿವೆ. ಪ್ರಾದೇಶಿಕ ಸಾರಿಗೆ ಇಲಾಖೆಯ 2010ರ ಅಂಕಿ ಅಂಶಗಳ ಪ್ರಕಾರ, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಒಟ್ಟು 13,118 ದ್ವಿಚಕ್ರ ವಾಹನಗಳಿವೆ. ಗೌರಿಬಿದನೂರು ತಾಲ್ಲೂಕಿನಲ್ಲಿ 11,414 ಮತ್ತು ಚಿಂತಾಮಣಿ ತಾಲ್ಲೂಕಿನಲ್ಲಿ 10,793 ದ್ವಿಚಕ್ರವಾಹನಗಳಿವೆ. ಇತ್ತೀಚಿನ ಮೂರು ತಿಂಗಳಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯು ಇದೆ.

‘ಅತಿ ಕಡಿಮೆ ಅವಧಿಯಲ್ಲಿ ಬಯಸಿದ ಸ್ಥಳಕ್ಕೆ ತಲುಪಬಹುದು. ಪಾರ್ಕಿಂಗ್ ಸಮಸ್ಯೆ ಮತ್ತು ವಾಹನ ದಟ್ಟಣೆಯ ತೊಂದರೆಯು ಇರುವುದಿಲ್ಲ. ಈ ಕಾರಣದಿಂದ ಬೈಕ್ಗಳಿಗೆ ಭಾರಿ ಬೇಡಿಕೆಯಿದೆ. ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡವರು ಮತ್ತು ಕಾಲೇಜು ವಿದ್ಯಾರ್ಥಿಗಳು ಬೈಕ್ಗಳನ್ನು ಕೊಳ್ಳಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ’ ಎಂದು ದ್ವಿಚಕ್ರ ವಾಹನಗಳ ಮಾರಾಟ ಮಳಿಗೆಯ ಉದ್ಯಮಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.