ಬಾಲಿವುಡ್ನಲ್ಲಿ ನಟಿಯಾಗಿ ಮುಂಚೂಣಿಗೆ ಬರಲಾಗದೇ ನಿರ್ಮಾಪಕಿಯರಾಗುತ್ತಿರುವ ಚೆಲುವೆಯರ ಸಾಲಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾಳೆ. ಆಕೆಯೇ ದಿಯಾ ಮಿರ್ಜಾ. `ರೆಹೆನಾ ಹೇ ತೇರೆ ದಿಲ್ ಮೇ~ ಚಿತ್ರದ ಮೂಲಕ ಬಾಲಿವುಡ್ ಬಾಗಿಲು ಬಡಿದ ಈ ಚೆಲುವೆಗೆ ನಂತರ ಹೇಳಿಕೊಳ್ಳುವಂಥ ಅವಕಾಶಗಳು ಬರಲಿಲ್ಲ. ಇದೀಗ ದಿಯಾ ತನ್ನ ಗೆಳೆಯ ಝಾಹೀದ್ ಖಾನ್ ಜೊತೆ ಸೇರಿ `ಬಾರ್ನ್ಫ್ರೀ ಎಂಟರ್ಟೈನ್ಮೆಂಟ್~ ಹೆಸರಿನ ಪ್ರೊಡಕ್ಷನ್ ಹೌಸ್ ಕಟ್ಟಿದ್ದಾಳೆ. ಆ ಸಂಸ್ಥೆಯ ಮೊದಲ ಚಿತ್ರವಾಗಿ `ಲವ್ ಬ್ರೇಕ್ಅಪ್ಸ್~ ತಯಾರಾಗುತ್ತಿದೆ. ಅದರ ನಾಯಕಿ ದಿಯಾ, ನಾಯಕ ಝಾಹೀದ್.

ಇದೊಂದು ರೊಮ್ಯಾಂಟಿಕ್ ಮತ್ತು ಕಾಮಿಡಿ ತುಂಬಿರುವ ಚಿತ್ರ ಎಂದು ಹೇಳಿಕೊಂಡಿರುವ ದಿಯಾ, ಚಿತ್ರವನ್ನು ಮುಂಬೈನಲ್ಲಿಯೇ ಸಂಪೂರ್ಣವಾಗಿ ಚಿತ್ರೀಕರಿಸಲಾಗುತ್ತಿದೆ ಎಂದಿದ್ದಾಳೆ. ತಾರಾಗಣದಲ್ಲಿ ಸೈರಸ್ ಸಾಹುಕಾರ್, ಟಿಸ್ಕಾ ಚೋಪ್ರಾ, ಸತ್ಯದೀಪ್ ಮಿಶ್ರಾ, ಪಲ್ಲವಿ, ವೈಭವ್ ತಲ್ವಾರ್ ಇದ್ದಾರೆ.

ಅರುಣೋದಯ್ ಅದೃಷ್ಟ
ಮಧುರ್ ಭಂಡಾರ್ಕರ್ ಅವರ `ಹೀರೋಯಿನ್~ ಚಿತ್ರದಲ್ಲಿ ಐಶ್ವರ್ಯಾ ರೈಗೆ ಜೋಡಿಯಾಗುವವರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಅರುಣೋದಯ ಸಿಂಗ್ ಆ ಅದೃಷ್ಟವಂತ!

`ಹೇ ಸಾಲಿ ಜಿಂದಗೀ~, `ಆಯೇಷಾ~ ಮತ್ತು `ಸಿಕಂದರ್~ ಚಿತ್ರಗಳಲ್ಲಿ ನಟಿಸಿದ್ದ ಅರುಣೋದಯ್ಗೆ ಇದೀಗ ದೊಡ್ಡ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿಬಂದಿದೆ. `ತನ್ನ ಮೇಲೆ ದೇವರಿಗೆ ಇಷ್ಟು ಬೇಗ ಕರುಣೆ ಬರುತ್ತದೆ ಎಂದು ತಿಳಿದಿರಲಿಲ್ಲ.

ಐಶ್ವರ್ಯಾ ಅವರೊಂದಿಗೆ ನಟಿಸಲು ಮತ್ತು ಮಧುರ್ ಅವರಂಥ ನಿರ್ದೇಶಕರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ತನ್ನ ಅದೃಷ್ಟವಲ್ಲದೇ ಮತ್ತೇನು ಅಲ್ಲ~ ಎಂಬುದು ಅರುಣೋದಯ್ ಪ್ರತಿಕ್ರಿಯೆ.

ಚಿತ್ರದಲ್ಲಿ ಅವರದು ಕ್ರಿಕೆಟ್ ಆಟಗಾರನ ಪಾತ್ರ. ಕ್ರಿಕೆಟ್ ಆಟಗಾರ ಪ್ರಸಿದ್ಧ ನಟಿಯೊಂದಿಗೆ ಸುತ್ತುವ ಪಾತ್ರ. ಅಂದರೆ ಈಗಾಗಲೇ ಗಾಸಿಪ್ಗಳಲ್ಲಿ ಹೆಸರು ಮೂಡಿಸಿಕೊಂಡಿರುವ ಯಾವ ಕ್ರಿಕೆಟ್ ಆಟಗಾರ ಮತ್ತು ಯಾವ ನಟಿಯ ಸ್ಫೂರ್ತಿ ಈ ಕತೆಯಲ್ಲಿದೆಯೋ ಎಂಬ ಕುತೂಹಲ ಬಾಲಿವುಡ್ನಲ್ಲೆಗ ಹುಟ್ಟಿಕೊಂಡಿದೆ.

ಶಾರುಖ್ ಪ್ರಚಾರ ವೈಖರಿ
ಶಾರುಖ್ ಖಾನ್ ತನ್ನ ಕನಸಿನ `ರಾ ಒನ್~ ಚಿತ್ರವನ್ನು ಅಕ್ಟೋಬರ್ನಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾನೆ. ಅದಕ್ಕೆ ಐದು ತಿಂಗಳು ಮುಂಚೆಯೇ ಪ್ರಚಾರ ಕಾರ್ಯಕ್ರಮ ಆರಂಭಿಸಿದ್ದಾನೆ. ಈ ಕಾರ್ಯವೈಖರಿ ಲಿಮ್ಕಾ ದಾಖಲೆ ಸೇರುವ ಸಾಧ್ಯತೆ ಇದೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಡಿದೆ.

`ದಾಖಲೆ ಸೇರುವ ಹಪಾಹಪಿ ತನಗೇನು ಇಲ್ಲ. ತನ್ನ ಚಿತ್ರದ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿ ಅವರನ್ನು ಥಿಯೇಟರ್ಗೆ ಸೆಳೆಯುವಂತೆ ಮಾಡಬೇಕೆಂಬ ಉದ್ದೇಶವೊಂದೇ ಇದರ ಹಿಂದೆ ಇರುವುದು~ ಎಂದಿದ್ದಾನೆ ಶಾರುಖ್. ಅಂದಹಾಗೆ, ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ. ಮೊದಲ ಹಂತದಲ್ಲಿ, ಜೂನ್ನಲ್ಲಿ ದೆಹಲಿ, ಚಂಡೀಗಢ, ಇಂಧೋರ್, ಅಹಮದಾಬಾದ್ನಲ್ಲಿ ತನ್ನ ತಂಡದೊಂದಿಗೆ ಪ್ರಚಾರ ಮಾಡುವ ಶಾರುಖ್, ಅಕ್ಟೋಬರ್ವರೆಗೆ ಪ್ರತೀ ತಿಂಗಳೂ ಐದೈದು ಊರು ಸುತ್ತಲಿದ್ದಾನಂತೆ. ಹೀಗೆ ಇಪ್ಪತ್ತೈದು ನಗರಗಳನ್ನು ಸುತ್ತುವ ಯೋಜನೆ ಅವನ ತಲೆಯಲ್ಲಿದೆ. ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್, ಅರ್ಜುನ್ ರಾಂಪಾಲ್ ಅಲ್ಲಲ್ಲಿ ಅವನೊಂದಿಗೆ ಕಾಣಿಸಿಕೊಳ್ಳಲಿದ್ದಾರಂತೆ.

ಸಮೀರಾ ಸಾಹಸ
ವೇಗದ ಮಿತಿ ದಾಟಿದ ಬೈಕೊಂದು ರಸ್ತೆಯಲ್ಲಿ ಓಡುತ್ತಿದ್ದಾಗ ಅದನ್ನು ಅಡ್ಡಗಟ್ಟಿದ ಪೊಲೀಸರು ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಕೆಳಗಿಳಿಸಿದರು. ಆಗ ತಿಳಿಯಿತು ಆಕೆ ಸಮೀರಾ ರೆಡ್ಡಿ ಎಂದು. ಪ್ರಿಯದರ್ಶನ್ ಅವರ `ತೇಜ್~ ಚಿತ್ರಕ್ಕಾಗಿ ಬೈಕ್ ಕಲಿಯುವ ತಾಲೀಮು ನಡೆಸುತ್ತಿದ್ದ ಸಮೀರಾ ಈ ರೀತಿ ಪೊಲೀಸರ ಕೈಗೆ ಸಿಕ್ಕಿಬಿದ್ದಳು. ಕೊನೆಗೆ ಚಿತ್ರತಂಡ ಅವಳ ನೆರವಿಗೆ ಬಂದು ಪೊಲೀಸರ ಮನವೊಲಿಸಿತು.

ಸಮೀರಾ ಇದೇ ಮೊದಲ ಬಾರಿಗೆ ತನ್ನ ಮಾದಕ ಇಮೇಜ್ನಿಂದ ಹೊರಬಂದು ಆ್ಯಕ್ಷನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಚಿತ್ರದಲ್ಲಿ ಅನಿಲ್ ಕಪೂರ್, ಅಜಯ್ ದೇವಗನ್, ಜಾಹೀದ್ ಖಾನ್ ಅವರೊಂದಿಗೆ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಈ ಚಿತ್ರದಿಂದ ತಾನು ಬೈಕ್ ಓಡಿಸುವುದನ್ನು ಮತ್ತು ರಾಪ್ಟಿಂಗ್ ಕಲಿತೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಿರುವ ಅವಳಿಗೆ ಇಂಥದೇ ಮತ್ತಷ್ಟು ಚಿತ್ರಗಳಲ್ಲಿ ನಟಿಸುವಾಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.