ಸೋಮವಾರ, ಜೂನ್ 21, 2021
29 °C
ದುಬೈ ಓಪನ್‌ ಟೆನಿಸ್‌: ಫೈನಲ್‌ಗೆ ಫೆಡರರ್‌

ಬೋಪಣ್ಣ– ಖುರೇಷಿಗೆ ಡಬಲ್ಸ್‌ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಭಾರತದ ರೋಹನ್‌ ಬೋಪಣ್ಣ ಹಾಗೂ ಪಾಕಿಸ್ತಾನ ಐಸಾಮ್‌ ಉಲ್‌ ಹಕ್‌ ಖುರೇಷಿ ಜೋಡಿ ಇಲ್ಲಿ ನಡೆದ ದುಬೈ ಡ್ಯೂಟಿ ಫ್ರೀ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಇಂಡೋ–ಪಾಕ್‌ ಜೋಡಿ 6–4, 6–3ರಲ್ಲಿ ಕೆನಡಾದ ಡೇನಿಯಲ್‌ ನೆಸ್ಟರ್‌ ಹಾಗೂ ಸರ್ಬಿಯಾದ ನೆನಾಡ್‌ ಜಿಮೊಂಜಿಕ್‌  ಜೋಡಿಯನ್ನು ಮಣಿಸಿತು.ಪಂದ್ಯದ ಆರಂಭದಿಂದಲೂ ಹೊಂದಾಣಿಕೆಯ ಆಟವಾಡಿದ  ಇಂಡೋ–ಪಾಕ್‌ ಜೋಡಿ ಎದುರಾಳಿ ಆಟಗಾರರ ತೀವ್ರ ಪೈಪೋಟಿಯ ನಡುವೆಯೂ ಆರಂಭಿಕ ಸೆಟ್‌ ತಮ್ಮದಾಗಿಸಿಕೊಂಡಿತು.ಎರಡನೇ ಸೆಟ್‌ನಲ್ಲೂ  ಈ ಜೋಡಿಗೆ ಕಠಿಣ ಪೈಪೋಟಿ  ಎದುರಾಯಿತಾ ದರೂ ಪ್ರಭಾವಿ ಪ್ರದರ್ಶನದ ಮೂಲಕ ಜಯ ಪಡೆದು ಸಂಭ್ರಮಿಸಿತು.

ಫೈನಲ್‌ಗೆ ಫೆಡರರ್‌: ವಿಶ್ವದ 8ನೇ ರ್‍ಯಾಂಕ್‌ನ ಆಟಗಾರ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್ ಪೈಪೋಟಿಯಲ್ಲಿ ಫೆಡರರ್‌ 3–6, 6–3, 6–2ರಲ್ಲಿ ವಿಶ್ವದ ಎರಡನೇ ರ್‍ಯಾಂಕ್‌ನ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಅವರನ್ನು ಪರಾಭವಗೊಳಿಸಿದರು.ವಿಶ್ವದ ಬಲಿಷ್ಠ ಆಟಗಾರರ ಹಣಾಹಣಿಗೆ ಕಾರಣವಾಗಿದ್ದ ಈ ಪಂದ್ಯ ಭಾರಿ ಕುತೂಹಲ ಕೆರಳಿಸಿತ್ತು.  ಜೊಕೊವಿಕ್‌ ಮೊದಲ ಸೆಟ್‌ನಲ್ಲಿ   ಗೆಲುವು ಕಂಡರೆ,  ಆಕ್ರಮಣಕಾರಿ ಆಟದ ಮೂಲಕ ತಿರುಗಿಬಿದ್ದ ಫೆಡರರ್‌  ಎರಡನೇ ಸೆಟ್‌ ಜಯಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿದರು.

ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ನಿರ್ಣಾಯಕ ಸೆಟ್‌ನಲ್ಲಿ ಹಿಂದಿನ ಲಯದಲ್ಲೇ ಆಡಿದ ಫೆಡರರ್‌ ಬಲಿಷ್ಠ ಸರ್ವ್‌ಗಳ ಮೂಲಕ ಜೊಕೊವಿಕ್‌ಗೆ ಆಘಾತ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.