ಮಂಗಳವಾರ, ಮಾರ್ಚ್ 2, 2021
23 °C

ಬೋಸ್‌ ಮೊಮ್ಮಗ ಬಿಜೆಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೋಸ್‌ ಮೊಮ್ಮಗ ಬಿಜೆಪಿಗೆ

ಹೌರಾ(ಪಶ್ಚಿಮ ಬಂಗಾಳ)(ಪಿಟಿಐ): ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಮರಿ ಮೊಮ್ಮಗ ಚಂದ್ರ ಕುಮಾರ್‌ ಬೋಸ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ನೇತೃತ್ವದಲ್ಲಿ ಸೋಮವಾರ ಪಕ್ಷಕ್ಕೆ ಸೇರ್ಪಡೆಯಾದರು.ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿಯೇ ಬೋಸ್‌ ಅವರು ಬಿಜೆಪಿ ಸೇರಿರುವುದು ಕುತೂಹಲ ಮೂಡಿಸಿದೆ. ‘ಮುಂಬರುವ ಚುನಾವಣೆಯಲ್ಲಿ ಬಿಜೆಪಿ ತಮ್ಮನ್ನು ಗೆಲುವಿನ ಅಭ್ಯರ್ಥಿ ಎಂಬ ಕಾರಣಕ್ಕೆ ಸೇರ್ಪಡೆ ಮಾಡಿ ಕೊಂಡಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಬೋಸ್‌, ‘ಇದು ಸೋಲು ಗೆಲುವಿನ ಪ್ರಶ್ನೆಯಲ್ಲ’ ಎಂದರು.‘ಭಾರತ ಎಲ್ಲವನ್ನು ಒಳಗೊಂಡಿರ ಬೇಕು. ಇಲ್ಲಿ ಎಲ್ಲ ಧರ್ಮಗಳಲ್ಲಿ ಏಕತೆ ಇರಬೇಕು. ಇಂತಹ ಸ್ಥಿತಿಯನ್ನು ವಾಪಸ್‌ ತರಬೇಕು ಎಂಬುದೇ ನೇತಾಜಿ ಅವರ ಅಭಿಲಾಷೆಯಾಗಿತ್ತು’ ಎಂದು ಚಂದ್ರ ಬೋಸ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.