ಗುರುವಾರ , ಮೇ 19, 2022
23 °C

ಬೌದ್ಧ ಬಿಕ್ಕುಗಳಿಗೆ ಧರ್ಮ ದೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಬೌದ್ಧ ತತ್ವಶಾಸ್ತ್ರದಲ್ಲಿ ಅಧ್ಯಯನ ನಡೆಸಿ ಪರಿಣಿತಿ ಹೊಂದಿದ ಬೌದ್ಧ ಬಿಕ್ಕುಗಳಿಗೆ ಟಿಬೆಟನ್ ಧರ್ಮಗುರು ದಲೈ ಲಾಮಾ  ದೀಕ್ಷೆ ನೀಡುವ ಕಾರ್ಯಕ್ರಮ ಗುರುವಾರ ಆರಂಭವಾಯಿತು.ಇಲ್ಲಿನ ಕ್ಯಾಂಪ್ ನಂ.6ರ ಗೋಮಾಂಗ್ ತಾಶಿ ಬೌದ್ಧ ವಿದ್ಯಾಲಯದಲ್ಲಿ ಸುಮಾರು 80ರಷ್ಟು ಬೌದ್ಧ ಬಿಕ್ಕುಗಳು ಬೌದ್ಧ ಗುರುವಿನಿಂದ ದೀಕ್ಷೆ ಪಡೆದರು. ತಲಾ ನಾಲ್ಕೈದು ಜನರ ಒಂದೊಂದು ಗುಂಪು  ದೀಕ್ಷೆ ಪಡೆದರು.ಧರ್ಮಾಧಿಕಾರ ದೀಕ್ಷೆ ಪಡೆಯಲು ಸಾಲಾಗಿ ತೆರಳಿದ ಪ್ರತಿಯೊಬ್ಬ ಬೌದ್ಧ ಬಿಕ್ಕುವನ್ನು ದಲೈ ಲಾಮಾ ಅವರ ಖಾಸಗಿ ಭದ್ರತಾ ಪಡೆಗಳು ಹಾಗೂ ಪೊಲೀಸರು ಸೂಕ್ತ ತಪಾಸಣೆ ನಡೆಸುತ್ತಿರುವುದು ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.