ಭಾನುವಾರ, ಮೇ 22, 2022
22 °C

ಬ್ಯಾಂಕಾಕ್ ಪ್ರವಾಹ: ಸಂಕಷ್ಟದಲ್ಲಿ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್ ಪ್ರವಾಹ: ಸಂಕಷ್ಟದಲ್ಲಿ ಜನತೆ

ಬ್ಯಾಂಕಾಕ್ (ಎಪಿ): ಭಾರಿ ಪ್ರವಾಹದ ಕಾರಣ ಗುರುವಾರ ಸಾವಿರಾರು ಮಂದಿ ಬಸ್, ವಿಮಾನ, ರೈಲಿನ ಮೂಲಕ ರಾಜಧಾನಿಯಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದರು. ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರವು ಐದು ದಿನಗಳ ವಿಶೇಷ ತುರ್ತು ರಜೆಯನ್ನು ಘೋಷಿಸಿದ್ದು, ಪ್ರವಾಹ ಪೀಡಿತ ಸ್ಥಳದಿಂದ ಜನರನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.ಬ್ಯಾಂಕಾಕ್‌ನ 50 ಜಿಲ್ಲೆಗಳಲ್ಲಿ ಕೇವಲ ಎರಡು ಜಿಲ್ಲೆಗಳಿಗೆ ಮಾತ್ರವೇ ತೆರವುಕಾರ್ಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಇಡೀ ನಗರ ಜಲಾವೃತಗೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.ಜುಲೈನಿಂದ ಕಾಣಿಸಿಕೊಂಡಿರುವ ಪ್ರವಾಹಕ್ಕೆ ಈತನಕ ಸುಮಾರು 373 ಮಂದಿ ಸಾವನ್ನಪ್ಪಿದ್ದು, ಕೋಟಿಗಟ್ಟಲೆ ನಷ್ಟ ಉಂಟಾಗಿದೆ. ಕಳೆದು ಎರಡು ದಿನಗಳ ಹಿಂದೆ ನಗರದ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣಕ್ಕೂ ಪ್ರವಾಹದ ನೀರು ನುಗ್ಗಿದ್ದು, ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.