ಸೋಮವಾರ, ಜೂನ್ 21, 2021
28 °C

ಬ್ಯಾಂಕ್‌ಗಳಿಗೆ ನಿರ್ದೇಶನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುಂಬಾ ಕಡಿಮೆ ವೇತನವನ್ನು ಪಡೆಯುತ್ತಿರುವ ಬ್ಯಾಂಕ್ ಠೇವಣಿ ಸಂಗ್ರಹಕಾರರಿಗೆ ಸಮರ್ಪಕ ವೇತನ ನೀಡಲು ಸರ್ಕಾರವು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಅಖಿಲ ಭಾರತ ಬ್ಯಾಂಕ್ ಠೇವಣಿ ಸಂಗ್ರಹಕಾರರ ಸಂಘಟನೆಯು ಒತ್ತಾಯಿಸಿದೆ.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್, `ಬ್ಯಾಂಕ್ ಠೇವಣಿ ಸಂಗ್ರಹಕಾರರಿಗೆ ಇಂದಿಗೂ ಬ್ಯಾಂಕ್‌ಗಳು 750 ರಿಂದ 800 ರೂ.ಗಳ ವೇತನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಲಿದೆ~ ಎಂದರು.ಸುಪ್ರೀಂಕೋರ್ಟ್ ಈಗಾಗಲೇ ಠೇವಣಿ ಸಂಗ್ರಹಕಾರರಿಗೆ ನೌಕರರ ಸ್ಥಾನ ಘೋಷಣೆಗೆ ಸೂಚಿಸಿದೆ. ಪ್ರತಿ ತಿಂಗಳು ಕನಿಷ್ಠ ವೇತನ 9200 ರೂ.ಗಳನ್ನು ಸಂಘಟನೆಯು ಹಿಂದಿನಿಂದಲೂ ಒತ್ತಾಯ ಮಾಡುತ್ತಲೇ ಬಂದಿದೆ. ಆದರೆ ಬ್ಯಾಂಕ್‌ಗಳು ಯಾವ ಕ್ರಮಕ್ಕೂ ಮುಂದಾಗಿಲ್ಲ ಎಂದು ಅವರು ದೂರಿದರು.`ಠೇವಣಿ ಸಂಗ್ರಹಕಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದೇ 17 ರಂದು ಬಸವನಗುಡಿಯ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಒಂದು ದಿನಗಳ ಅಧಿವೇಶನವನ್ನು ಆಯೋಜಿಸಲಾಗಿದೆ~ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಮಜ್ದೂರ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ರಾಮಕೃಷ್ಣ ಪೂಂಜಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.