ಬುಧವಾರ, ಜೂನ್ 23, 2021
28 °C

ಬ್ಯಾಂಕ್‌ ವ್ಯವಹಾರದ ಮೇಲೆ ನಿಗಾವಹಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯ ಎಲ್ಲ ಬ್ಯಾಂಕುಗಳ ಖಾತೆಗಳಲ್ಲಿ ನಡೆಯುವ ಹಣದ ವ್ಯವಹಾರಗಳ ಮೇಲೆ ನಿಗಾ ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕಿ ಮಾಳವಿಕಾ ಮೋಹನ್ ಸೂಚಿಸಿದರು.ನವನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಎಲ್ಲ ಬ್ಯಾಂಕುಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಸಾರ್ವಜನಿಕರು ಹೆಚ್ಚಿನ ಪ್ರಮಾಣದ ಹಣವನ್ನು ನಗದಾಗಿ ತೆಗೆದುಕೊಂಡು ಹೋಗುವವರು ಪಾನ್ ಕಾರ್ಡ್‌ ಹಾಗೂ ಅದರ ಪ್ರತಿ, ವ್ಯಾಪಾರ ನೋಂದಣಿ ದೃಢೀಕರಣ ಪತ್ರ, ಬ್ಯಾಂಕ್ ಪಾಸ್‌ಬುಕ್ ಪ್ರತಿ ಹಾಗೂ ಡ್ರಾ ಮಾಡಿರುವ ಬ್ಯಾಂಕ್ ಸ್ಟೇಟ್‌ಮೆಂಟ್, ನಗದು ಪಡೆಯುವವರ ವಿವರಗಳನ್ನು ಹೊಂದಿರಬೇಕು ಎಂದರು.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಿ, ಕ್ಷೇತ್ರವಾರು ವೀಕ್ಷಣೆ ಮಾಡಿ ಪ್ರತಿದಿನದ ವೆಚ್ಚದ ವಿವರಗಳನ್ನು ನಿಖರವಾಗಿ ಸಲ್ಲಿಸಲು ತಿಳಿಸಲಾಯಿತು.ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಹಾಗೂ ಚುನಾ ವಣಾ ವೆಚ್ಚದ ವಿವರಗಳನ್ನು ಅಧಿಕೃತ ವಾಗಿ ಬ್ಯಾಂಕ್ ಖಾತೆ ಮೂಲಕ ನಿರ್ವ ಹಿಸಲು ಸೂಚನೆ ನೀಡಲಾಗಿದೆ ಎಂದರು.ಸಹಾಯಕ ಚುನಾವಣಾಧಿಕಾರಿ ಪಿ.ಟಿ.ರುದ್ರಗೌಡ ಮಾತನಾಡಿ, ಸಂಶ ಯಾತ್ಮಕ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ, ಸ್ತ್ರೀಶಕ್ತಿ, ಯುವಕ ಮಂಡ ಳಿಗಳ ಖಾತೆಗಳಲ್ಲಿ ಹಣ ಸಂದಾಯದ ಮೇಲೆ ನಿಗಾವಹಿಸುವಂತೆ ಹಾಗೂ ಪ್ರತಿದಿನ 4ಕ್ಕೆ ಡಿಸಿಸಿ ಬ್ಯಾಂಕ್ ಮೂಲಕ ವರದಿ ಕಳಿಸುವಂತೆ ತಿಳಿಸಿದರು.20 ಸಾವಿರಗಳ ಮೇಲಿನ ಎಲ್ಲ ಹಣದ ವಾಣಿಜ್ಯ ವ್ಯವಹಾರಗಳನ್ನು ಚೆಕ್ ಮೂಲಕವೇ ವ್ಯವಹರಿಸುವಂತೆ ತಿಳಿಸಿದರು.  ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಎನ್.ಮುರಳಿ ಸೇರಿದಂತೆ ಎಲ್ಲ ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.