ಕುಶಾಲನಗರ: ಶತಮಾನದಿಂದ ಬ್ಯಾಟಗೋಡು ಗ್ರಾಮದಲ್ಲೇ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನರಿಗೆ ಮಾತ್ರ ಇನ್ನೂ ಗೋಳು ತೀರಿಲ್ಲ. 45 ಕುಟುಂಬಗಳಿದ್ದರೂ ಕನಿಷ್ಠ ಮೂಲಸೌಕರ್ಯಗಳಿಲ್ಲ.

ಕಾವೇರಿ ಹರಿಯುವ ನಾಡು, ಅದಕ್ಕಿಂತ ಹೆಚ್ಚಿನದಾಗಿ ಪಕ್ಕದಲ್ಲೇ ಹಾರಂಗಿ ಹರಿಯುತ್ತಾಳೆ. ಆದರೂ, ಇಲ್ಲಿ ಕುಡಿಯುವ ನೀರಿಗೆ ಬರ.
`45 ಕುಟುಂಬಗಳಿಗೆ ಒಂದೇ ಒಂದು ನೀರಿನ ಟ್ಯಾಂಕ್ ಇದೆ. 2-3 ದಿನಗಳಿಗೊಮ್ಮೆ ನೀರು ಬಿಡಲಾಗುತ್ತದೆ. ಇದರಿಂದ ಕುಡಿಯುವ ನೀರಿಗೂ ಪರಿಪಾಟಲು ಪಡಬೇಕಾಗಿದೆ' ಎಂಬುದು ಇಳಿವಯಸ್ಸಿನಲ್ಲೂ ಕೈಪಂಪ್ನಲ್ಲಿ ನೀರು ಹೊತ್ತುತಿದ್ದ ಕಾಳಮ್ಮ ಅವರ ಮಾತು.

ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ತಲೆ ನೋವು ಬಂದರೂ, ಶೀತವಾದರೂ ಕೂಡಿಗೆ ಅಥವಾ ಕುಶಾಲನಗರಕ್ಕೆ ಹೋಗಬೇಕು. ಇದಕ್ಕಿಂತ ಮುಖ್ಯವಾಗಿ ಗ್ರಾಮಕ್ಕೆ ಸಾರಿಗೆ ಸಂಪರ್ಕವಿಲ್ಲ. ಗ್ರಾಮದ ಒಂದೆರಡು ಮನೆಗಳಲ್ಲಿ ಮಾತ್ರ ಸ್ಕೂಟರ್ ಇದೆ. ಉಳಿದಂತೆ ಎಲ್ಲರೂ ಆಟೊವನ್ನೇ ಹಿಡಿದು ಸಾಗಬೇಕು ಅಥವಾ ಅರ್ಧ ಮೈಲು ದೂರದಲ್ಲಿರುವ ಸೋಮವಾರಪೇಟೆಗೆ ತಲುಪುವ ಮುಖ್ಯರಸ್ತೆಗೆ ಬರಬೇಕು.

ಗ್ರಾಮದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಪಂಚಾಯಿತಿಯ ಯಾವುದೋ ಅನುದಾನದಲ್ಲಿ 300 ಮೀಟರ್ ಚರಂಡಿಯನ್ನು ಮಾತ್ರ ನಿರ್ಮಿಸಲಾಗಿದೆ. ಅಲ್ಲಿಂದ ಮುಂದೆ ನೀರು ಹರಿಯಲು ಗುಂಡಿ ತೆಗೆದಿಲ್ಲ. ಹೀಗಾಗಿ, ಮುನ್ನೂರು ಮೀಟರ್ ಹರಿದು ಬಂದ ನೀರೆಲ್ಲ ಒಂದೆಡೆ ನಿಂತು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ.

ಬೆಳ್ಯಪ್ಪ ಅವರು ಮೀನುಗಾರಿಕೆ ಸಚಿವರಾಗಿದ್ದ ಸಂದರ್ಭದಲ್ಲಿ ಮಾಡಿದ್ದ ರಸ್ತೆಗಳು ಇಂದು ಸಂಪೂರ್ಣ ಹಾಳಾಗಿವೆ. ಇಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಮಂಗಳೂರು ಹಂಚಿನ ಮನೆ ಹೊಂದಿರುವವರೇ ಇಲ್ಲಿ ಶ್ರೀಮಂತರು. ಇರುವ 45 ಮನೆಗಳಲ್ಲಿ 15ಕ್ಕೂ ಹೆಚ್ಚು ಮನೆಗಳು ಈಗಲೂ ಸೋಗೆ ಗುಡಿಸಲುಗಳೇ ಆಗಿವೆ. ಗ್ರಾಮದ ಅಭಿವೃದ್ಧಿಗೆ ಕೂಡಿಗೆ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಆಕ್ರೋಶದ ನುಡಿ.

ಕುಡಿಯುವ ನೀರಿಗೂ ಹಾಹಾಕಾರ
ಒಂದು ಜಾತಿಯ 45 ಮನೆಗಳಿಗೆ ಒಂದೇ ನೀರಿನ ಟ್ಯಾಂಕ್ ಮಾಡಿದ್ದಾರೆ. ಮತ್ತೊಂದೆಡೆ ಮತ್ತೊಂದು ಜಾತಿಯ 4 ಮನೆಗಳಿಗೆ ಒಂದು ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಹಳೆಯ ಮೋಟಾರು ಹಾಕಿರುವುದರಿಂದ ವಾರಕ್ಕೊಮ್ಮೆ ಕೆಟ್ಟು ಹೋಗುತ್ತಿರುತ್ತದೆ. ಇದರಿಂದ ಕುಡಿಯುವ ನೀರಿಗೂ ಹಾಹಾಕಾರ ಬಂದಿದೆ.
- ಕಾಳಮ್ಮ, ನಿವಾಸಿ

ಜನಪ್ರತಿನಿಧಿಗಳು ತಿರುಗಿ ನೋಡಲ್ಲ
ಚುನಾವಣೆ ಸಂದರ್ಭಗಳಲ್ಲಿ ಕೈಮುಗಿದು ಬರುವ ಜನಪ್ರತಿನಿಧಿಗಳು ನಂತರ ತಿರುಗಿ ನೋಡುವುದು ಪುನಃ ಐದು ವರ್ಷಗಳ ನಂತರವೇ. ಗ್ರಾಮ ಪಂಚಾಯಿತಿಯಿಂದ ಇದುವರೆಗೆ ಒಂದೇ ಒಂದು ಆಶ್ರಯ ಮನೆಯನ್ನೂ ಕೊಟ್ಟಿಲ್ಲ. ಹೀಗಾಗಿ ಒಂದೇ ಮನೆಯಲ್ಲಿ ನಾಲ್ಕೈದು ಕುಟುಂಬಗಳು ಬದುಕುತ್ತಿವೆ.
-ಶ್ರೀಕಾಂತ್, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.