ಗುರುವಾರ , ಜನವರಿ 30, 2020
20 °C

ಬ್ಯಾಟ್ಸ್‌ಮನ್‌ಗಳ ವಿರುದ್ಧ ದೋನಿ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ (ಪಿಟಿಐ): ಕೇವಲ ಎರಡುವರೆ ದಿನಗಳಲ್ಲಿ ಅಂತ್ಯ ಕಂಡ ಆಸ್ಟ್ರೇಲಿಯಾ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲೂ ಸೋಲು ಅನುಭವಿಸಿದ್ದಕ್ಕೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಬ್ಯಾಟ್ಸ್‌ಮನ್‌ಗಳ ವಿರುದ್ಧ `ಗರಂ~ ಆಗಿದ್ದಾರೆ.`ಆಸೀಸ್ ಎದುರು 0-3ರಲ್ಲಿ ಸೋಲು ಕಾಣಲು ಸತತ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಹಾಗೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ವಿಫಲರಾಗುತ್ತಿರುವುದು ಪ್ರಮುಖ ಕಾರಣ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂದು ಬೇಗನೇ ಬಂದರೂ, ಸಕಾರಾತ್ಮಕ ಫಲಿತಾಂಶ ನೀಡಲು ಸಾಧ್ಯವಾಗುತ್ತಿಲ್ಲ~ ಎನ್ನುವುದು ದೋನಿ ವಿಶ್ಲೇಷಣೆ.`ಈ ಸರಣಿಯ ಯಾವ ಪಂದ್ಯದಲ್ಲೂ ನಾವು ಉತ್ತಮ ಪ್ರದರ್ಶನ ನೀಡಲಿಲ್ಲ. ಇದೊಂದು ಕಠಿಣ ಸರಣಿ ಎನ್ನುವುದು ಗೊತ್ತಿದ್ದರೂ, ಅದೇ ತಪ್ಪುಗಳನ್ನು ಮಾಡಿದೆವು. ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ, ಬ್ಯಾಟಿಂಗ್ ನೆಲಕಚ್ಚಿತು ಎಂದು ನಿರಾಸೆ ವ್ಯಕ್ತಪಡಿಸಿದ ಮಹಿ, ನಾಲ್ಕನೇ ಟೆಸ್ಟ್‌ನಲ್ಲಿ ಈ ಪ್ರಮಾದ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ~ ಎಂದು ಪಂದ್ಯದ ನಂತರ ಹೇಳಿದರು.`ಹಿಂದಿನ ಎರಡು ಸರಣಿಗಳನ್ನು ಸೂಕ್ಷ್ಮವಾಗಿ ನೋಡುತ್ತಾ ಬಂದಿದ್ದೇನೆ. ತಂಡದ ಸ್ಥಿತಿಗೆ ಬೇಗನೆ ಹೊಂದಿಕೊಳ್ಳುವಲ್ಲಿ ತಂಡ ವಿಫಲವಾಗಿದೆ. ವಿದೇಶದಲ್ಲಿನ ಪಿಚ್‌ಗೆ ಹಾಗೂ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳಬೇಕು. ಇಲ್ಲವಾದರೆ, ಈ ತರಹದ ಸರಣಿ ಸೋಲು ಎದುರಿಸಬೇಕಾಗುತ್ತದೆ. ಆದ್ದರಿಂದ ವಿದೇಶಕ್ಕೆ ಬಂದ ಆರಂಭದ ದಿನಗಳಲ್ಲಿ ಈ ಕೆಲಸವನ್ನು ಮಾಡಬೇಕು~ ಎಂದು ಹೇಳಿದರು.`ವಿದೇಶದ ಪಿಚ್‌ಗಳು ವೇಗದ ಬೌಲರ್‌ಗಳಿಗೆ ನೆರವು ನೀಡುತ್ತದೆ ಎನ್ನುವ ಕಾರಣದಿಂದ ಆ ವಿಭಾಗಕ್ಕೆ ಒತ್ತು ನೀಡಿದೆವು. ನಮ್ಮ ಈ ತೀರ್ಮಾನ ಸರಿಯಾಗಿತ್ತು. ಹಿರಿಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅವರ ಕಳಪೆ ಪ್ರದರ್ಶನದಿಂದ ಬ್ಯಾಟಿಂಗ್ ಕೊರತೆ ಎದುರಿಸಬೇಕಾಯಿತು~ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅನುಭವಿ ಈ ಹಿರಿಯ ಬ್ಯಾಟ್ಸ್‌ಮನ್‌ಗಳು ಹಿಂದಿನ ಪಂದ್ಯದಲ್ಲೂ ಅಷ್ಟೇನೂ ಗಮನಾರ್ಹವಲ್ಲದ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲೂ ಅದನ್ನೇ ಪುನರಾವರ್ತಿಸಿದರು. ಆದ್ದರಿಂದ ಮೇಲಿಂದ ಮೇಲೆ `ಪೆಟ್ಟು~ ಬೀಳುತ್ತಿದೆ. ಮುಂದಿನ ಪಂದ್ಯದಲ್ಲಿ ತಕ್ಕ ತಿರುಗೇಟು ನೀಡುತ್ತೇವೆ ಎನ್ನುವುದು `ಮಹಿ~ ವಿಶ್ವಾಸ.`ಈ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ (75) ಸಾಕಷ್ಟು ಒತ್ತಡದ ನಡುವೆಯೂ, ಉತ್ತಮ ಬ್ಯಾಟಿಂಗ್ ಮಾಡಿದರು. ನಾನು ಈ ತರಹದ ಆಟವನ್ನು ನಿರೀಕ್ಷೆ ಮಾಡುತ್ತೇನೆ. ಒತ್ತಡದಲ್ಲೂ ಚೆನ್ನಾಗಿ ಆಡಬೇಕು. ಇದೊಂದು ಸಕಾರಾತ್ಮಕ ಬೆಳವಣಿಗೆ~ ಎಂದು ದೋನಿ ನುಡಿದರು.

ಮುಖ್ಯಾಂಶಗಳು:

-ವಿದೇಶಿ ನೆಲದಲ್ಲಿ ಭಾರತ ಕಂಡ ಸತತ ಏಳನೇ ಸೋಲು.

- ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಪಡೆದದ್ದು ಇದು ಮೊದಲ ಸಲ.-ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ (75) ವಿರಾಟ್ ಕೊಹ್ಲಿ.-ಕ್ರೀಡಾಂಗಣದಲ್ಲಿ ಮೊದಲ ಸಲ `ಪಂದ್ಯ ಶ್ರೇಷ್ಠ~ ಗೌರವ ಪಡೆದ ಡೇವಿಡ್ ವಾರ್ನರ್

-54 ಸಲ ಬೌಲ್ಡ್ ಆಗುವ ಮೂಲಕ ರಾಹುಲ್ ದ್ರಾವಿಡ್ `ವಿಶ್ವ ದಾಖಲೆ~. ಈ ಮೊದಲು ಆ್ಯಲನ್ ಬಾರ್ಡರ್ (53) ಈ ದಾಖಲೆ ಹೊಂದಿದ್ದರು.-ದೋನಿ ನಾಯಕತ್ವದಲ್ಲಿ 10ನೇ ಸೋಲು ಕಂಡ ಭಾರತ. ಇದರಿಂದ 10 ಹಾಗೂ ಅದಕ್ಕಿಂತಲೂ ಹೆಚ್ಚು ಟೆಸ್ಟ್‌ಗಳಲ್ಲಿ ಸೋಲು ಕಂಡ ನಾಯಕರ ಗುಂಪಿಗೆ `ಮಹಿ~ ಸೇರ್ಪಡೆಯಾದರು. ಮನ್ಸೂರ್ ಅಲಿಖಾನ್ ಪಟೌಡಿ (19), ಮೊಹಮ್ಮದ್ ಅಜರುದ್ದೀನ್ (14), ಸೌರವ್ ಗಂಗೂಲಿ (13) ಹಾಗೂ ಬಿಷನ್ ಸಿಂಗ್ ಬೇಡಿ (11) ಈ ಗುಂಪಿನಲ್ಲಿದ್ದಾರೆ.-ದೋನಿ ನಾಯಕತ್ವದಲ್ಲಿ ಭಾರತ ಗರಿಷ್ಠ (6 ಸಲ) ಇನಿಂಗ್ಸ್ ಸೋಲು ಅನುಭವಿಸಿತು. ಈ ಮೊದಲು ಲಾಲಾ ಅಮರನಾಥ್ ನಾಯಕತ್ವದಲ್ಲಿ 5 ಸಲ ಇನಿಂಗ್ಸ್ ಸೋಲು ಕಂಡಿತ್ತು.-ಪರ್ತ್‌ನ ಕ್ರೀಡಾಂಗಣದಲ್ಲಿ ಎರಡೂ    ಇನಿಂಗ್ಸ್‌ಗಳಲ್ಲಿ ಭಾರತ 200 ಕ್ಕಿಂತ     ಕಡಿಮೆ ಮೊತ್ತಕ್ಕೆ ಅಲೌಟ್ ಆದದ್ದು ಇದೇ ಮೊದಲು.-ಜಹೀರ್ ಖಾನ್ ರನ್ ಖಾತೆ ತೆರೆಯದೇ ಗರಿಷ್ಠ (24 ಸಲ) `ಸೊನ್ನೆ~ ಸುತ್ತಿದ ಭಾರತದ ಮೊದಲ ಬ್ಯಾಟ್ಸ್‌ಮನ್. ಈ ಮೊದಲು ಬಿ. ಚಂದ್ರಶೇಖರ್ (23) ದಾಖಲೆ ಹೊಂದಿದ್ದರು.

ಪ್ರತಿಕ್ರಿಯಿಸಿ (+)