ಭಾನುವಾರ, ಮೇ 9, 2021
27 °C

ಬ್ಯಾಡಗಿ ಮೆಣಸಿನಕಾಯಿ: ಸೆಸ್ ಸಂಗ್ರಹ ಕಡಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ತನ್ನ ವಿಶಿಷ್ಟ ಬಣ್ಣ ಮತ್ತು ರುಚಿಯಿಂದ ಮನೆಮಾತಾಗಿರುವ ಬ್ಯಾಡಗಿ ಮೆಣಸಿನಕಾಯಿ ಈಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.ದೇಶದಲ್ಲಿ ಹೆಚ್ಚು ಒಣ ಮೆಣಸಿನಕಾಯಿ ವಹಿವಾಟು ನಡೆಸುವ ಹೆಗ್ಗಳಿಕೆಗೆ  `ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ~ ಪಾತ್ರವಾಗಿರುವುದು.ಕಳೆದ ಹಣಕಾಸು ವರ್ಷದಲ್ಲಿ ಸುಮಾರು ರೂ 350ಕೋಟಿ ವಹಿವಾಟು ನಡೆಸುವ ಮೂಲಕ ರೂ 5.15 ಕೋಟಿ ಮಾರ್ಕೆಟ್ ಫೀ (ಸೆಸ್) ಮಾರುಕಟ್ಟೆ ಸಂಗ್ರಹಿಸಿದೆ. ಇದರಲ್ಲಿ ಶೇ. 1ರಷ್ಟನ್ನು ಮಾರುಕಟ್ಟೆ ಅಭಿವೃದ್ದಿಗೆ ಬಳಸಲಾಗುತ್ತಿದ್ದು, ಇನ್ನುಳಿದ ಶೇ.0.5ನ್ನು ಆವರ್ತನಿಧಿಗೆ ಸಂಗ್ರಹಿಸಲಾಗುತ್ತಿದೆ.ಈ ವರ್ಷ ಒಂದು ಲಕ್ಷಕ್ಕಿಂತ ಹೆಚ್ಚು ಮೆಣಸಿನಕಾಯಿ ಮಾರಾಟವಾಗಿದೆ ಇದರರೊಂದಿಗೆ  ಇಲಾಖೆ ನಿಗದಿಪಡಿಸಿದ ರೂ 6.00 ಕೋಟಿ ಸಂಗ್ರಹಿಸುವ ಗುರಿ ತಲುಪಲು ಸಾಧ್ಯವಾಗಿಲ್ಲ. ಈ ವರ್ಷ 4.17ಲಕ್ಷ ಕ್ವಿಂಟಲ್ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ, 0.67ಲಕ್ಷ ಕ್ವಿಂಟಲ್ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಹಾಗೂ 1.52ಲಕ್ಷ ಕ್ವಿಂಟಲ್ ಗುಂಟೂರ ಮೆಣಸಿನಕಾಯಿ ಮಾರಾಟವಾಗಿದೆ. ಗುಣಮಟ್ಟದ ಕೊರತೆ: ಐರೋಪ್ಯದ ಪ್ಯಾಪ್ರಿಕಾ ತಳಿಯ ನಂತರ ಏಷ್ಯಾದಲ್ಲಿಯೇ `ಬ್ಯಾಡಗಿ ತಳಿ ಮೆಣಸಿನಕಾಯಿ~ ಕಡುಗೆಂಪು ಬಣ್ಣ, ರುಚಿ ಹಾಗೂ ಸುವಾಸನೆಯನ್ನು ಹೊಂದಿದೆ. ಆದರೆ ಪ್ರಸಕ್ತ ಮಾರ್ಚ್‌ನಲ್ಲಿ ಇಲ್ಲಿಯ ಮಾರುಕಟ್ಟೆಗೆ ಬಂದಂತಹ ಮೆಣಸಿನಕಾಯಿ ಕುಲಾಂತರಿ ತಳಿ ಮೆಣಸಿನಕಾಯಿ ಯಾಗಿದ್ದು,  ಬ್ಯಾಡಗಿ ತಳಿ ಮೆಣಸಿನಕಾಯಿಯನ್ನೇ ಹೋಲುತ್ತಿದ್ದರೂ ಗುಣ ಮಟ್ಟದಲ್ಲಿ ಹಿಂದೆ ಬಿದ್ದಿದೆ. ಬಣ್ಣ, ರುಚಿ ಹಾಗೂ ಸುಹಾಸನೆ ಕಡಿಮೆಯಾಗಿದೆ. ಇಂತಹ ಕುಲಾಂತರಿ ತಳಿ ಮೆಣಸಿನಕಾಯಿಯನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಇದನ್ನು ಕೇವಲ ಆಂತರಿಕ ಬಳಕೆಗೆ ಮಾತ್ರ ಬಳಸಬಹುದಾಗಿದ್ದು, ಮೆಣಸಿನಕಾಯಿ ಸಂಸ್ಕರಿಸಿ ಓಲಿಯೋರೆಸಿನ್ ದ್ರಾವಣವನ್ನು ಉತ್ಪಾದಿಸಲು ಸಾಧ್ಯವಿಲ್ಲ ಹೀಗಾಗಿ ಇಂತಹ ಮೆಣಸಿನಕಾಯಿ ಬೆಲೆಯಲ್ಲಿ ತೀವ್ರ ಕುಸಿತವುಂಟಾಗಿದೆ ಎಂದು ಉದ್ಯಮಿಗಳು ಕಾರಣ ನೀಡುತ್ತಾರೆ. ಇಲ್ಲಿಯ ಮಾರುಕಟ್ಟೆಗೆ ಬಂದಂತಹ ಶೇ.80 ರಷ್ಟು ಮೆಣಸಿನಕಾಯಿ ಓಲಿಯೋರೆಸಿನ್ ದ್ರಾವಣ ತಯಾರಿಕೆಗೆ ಬಳಸುವುದರಿಂದ “ಬ್ಯಾಡಗಿ ತಳಿ ಮೆಣಸಿನಕಾಯಿಗೆ” ಹೆಚ್ಚು ಬೇಡಿಕೆಯಿದೆ. ಕಳೆದ ವರ್ಷ ಬ್ಯಾಡಗಿ ತಳಿ ಮೆಣಸಿನಕಾಯಿ (ದೇಶೀಯ ಮೂಲ ತಳಿ) ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಅನಾವೃಷ್ಟಿಯುಂಟಾಗಿದ್ದರಿಂದ ಬಿತ್ತನೆ ಕ್ಷೇತ್ರ ಸಾಕಷ್ಟು ಕಡಿಮೆಯಾಗಿತ್ತು. ಹೀಗಾಗಿ ಇಲ್ಲಿಯ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಮೆಣಸಿನ ಕಾಯಿ ಬರಬಹು ದೆಂದು ನಿರೀಕ್ಷೆಯಲ್ಲಿದ್ದರು. ಆಂಧ್ರಪ್ರದೇಶದ ಗುಂಟೂರ, ಕನ್ನಂ ಹಾಗೂ ವಾರಂಗಲ್, ರಾಜ್ಯದ ಬಳ್ಳಾರಿ ಹಾಗೂ ರಾಯಚೂರ ಜಿಲ್ಲೆಯ ರೈತರು ಹೆಚ್ಚು ಇಳುವರಿ ನೀಡುವ ಕುಲಾಂತರಿ ತಳಿ ಮೆಣಸಿ ನಕಾಯಿ ಬೆಳೆದು ವ್ಯಾಪಾರಸ್ಥರ ಲೆಕ್ಕಾ ಚಾರವನ್ನು ಬುಡ ಮೇಲು ಮಾಡಿದೆ. ಈ ಹಿಂದೆ ಹೆಚ್ಚು ಖಾರ ವಿರುವ ಗುಂಟೂರ ತಳಿ ಮೆಣಸಿನಕಾಯಿ ಮಾತ್ರ ಮಾರು ಕಟ್ಟೆಗೆ ತರಲಾಗುತ್ತಿತ್ತು. ಆದರೆ ಈ ವರ್ಷ ಕುಲಾಂತರಿ ತಳಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಹಿನ್ನೆಲೆ  ನಾಲ್ಕೈದು ಬಾರಿ ಲಕ್ಷಕ್ಕಿಂತ ಹೆಚ್ಚುಮೆಣಸಿನ ಕಾಯಿ ಚೀಲಗಳು ಒಂದೇ ದಿನದಲ್ಲಿ ವ್ಯಾಪಾರ ವಾಯಿತು.ಜಗತ್ತಿನ ಶೇ.24 ರಷ್ಟು ಮೆಣಸಿನಕಾಯಿ ದೇಶದಲ್ಲಿ ಬೆಳೆಯುತ್ತಿದ್ದರೆ, ಚೀನಾದಲ್ಲಿ ಇದರ ಪ್ರಮಾಣ ಶೇ. 22ರಷ್ಟಾಗಿದೆ. ದೇಶದಲ್ಲಿ ಬೆಳೆದ ಶೇ.92ರಷ್ಟು ಮೆಣಸಿನಕಾಯಿ ಆಂತರಿಕವಾಗಿ ಬಳಕೆಯಾಗುತ್ತಿದ್ದರೆ, ಇನ್ನುಳಿದ ಶೇ.8ರಷ್ಟು ಮೆಣಸಿನಕಾಯಿಯನ್ನು ಸಂಸ್ಕರಿಸಿ ಓಲಿಯೋರೆಜಿನ್ ದ್ರಾವಣ ರೂಪದಲ್ಲಿ ವಿದೇಶಗಳಿಗೆ ರಪ್ತು ಮಾಡಲಾಗುತ್ತಿದೆ. ಬ್ಯಾಡಗಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆಯಿರುವುದರಿಂದ  ಕೇಂದ್ರ ಸರ್ಕಾರ “ಮೆಣಸಿನಕಾಯಿ ಮಂಡಳಿ” ಸ್ಥಾಪಿಸುವ ಮೂಲಕ ಬೆಳೆಗಾರರನ್ನು ಪ್ರೋತ್ಸಾಹಿ ಸಬೇಕಾಗಿದೆ. ಉಳಿದ ಬೆಳೆಗಳಿಗೆ ನೀಡುವ ಸಬ್ಸಿಡಿಯನ್ನು ಮೆಣಸಿನಕಾಯಿ ಬೆಳೆಗೂ ವಿಸ್ತರಿಸಿ ದೇಶೀಯ ತಳಿಯಾದ `ಬ್ಯಾಡಗಿ ಮೆಣಸಿನಕಾಯಿ~ ಯನ್ನು ಅಭಿವೃದ್ದಿಪಡಿಸಬೇಕಾಗಿದೆ ಎನ್ನುವುದು ಇಲ್ಲಿಯ ರೈತರ, ಉದ್ಯಮಿಗಳ ಹಾಗೂ ವ್ಯಾಪಾರಸ್ಥರ ಒತ್ತಾಸೆಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.