ಮಂಗಳವಾರ, ಜನವರಿ 28, 2020
23 °C

ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಭಾರತದ ಸೈನಾ ನೆಹ್ವಾಲ್ ಸೋಲ್‌ನಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತೆ ಸೈನಾ 21-5, 21-6ರಲ್ಲಿ ಸ್ಕಾಟ್ ಸೂಸನ್ ಅವರನ್ನು ಮಣಿಸಿದರು. ಈ ಹೋರಾಟ ಕೇವಲ 24 ನಿಮಿಷಗಳಲ್ಲಿ ಅಂತ್ಯ ಕಂಡಿತು.ಡಬಲ್ಸ್ ವಿಭಾಗದಲ್ಲಿ ಭಾರತದ ಜ್ವಾಲಾ ಗುಟ್ಟಾ ಹಾಗೂ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಜೋಡಿ 21-19, 21-18ರಲ್ಲಿ ಮಲೇಷ್ಯಾದ ವಿವಿಯನ್ ಕಾಹ ಮೂನ್ ಹೂ-ಕೇ ವೊಯಿ ವೂನ್ ಎದುರು ಗೆಲುವು ಪಡೆದು ಶುಭಾರಂಭ ಮಾಡಿತು.  ಮಿಶ್ರ ಡಬಲ್ಸ್‌ನಲ್ಲಿ ಜ್ವಾಲಾ ಹಾಗೂ ವಿ. ದಿಜು ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ 21-18, 21-18ರಲ್ಲಿ ಮಲೇಷ್ಯಾದ ಪೆಂಗ್ ಸೂನ್    ಚಾನ್-ಲೂಯಿ ಯಿಂಗ್ ಗೊಹ್ ಅವರನ್ನು ಮಣಿಸಿತು.

ಪ್ರತಿಕ್ರಿಯಿಸಿ (+)