ಸೋಮವಾರ, ಜೂನ್ 14, 2021
27 °C

ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಭಾರತದ ಸೈನಾ ನೆಹ್ವಾಲ್ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಗ್ರ್ಯಾಂಡ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ 21-13, 21-8ರಲ್ಲಿ ಜಪಾನ್‌ನ ಸಯಾಕಾ ಸಟೊ ಅವರನ್ನು ಮಣಿಸಿದರು.

ಎರಡೂ ಗೇಮ್‌ಗಳಲ್ಲಿ ಭಾರತದ ಆಟಗಾರ್ತಿಗೆ ಅಷ್ಟೇನು ಸವಾಲು ಎದುರಾಗಲಿಲ್ಲ. ಸೈನಾ ಇತ್ತೀಚೆಗೆ ನಡೆದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮ, ಅಜಯ್ ಜಯರಾಮನ್ ಹಾಗೂ ಪಿ.ಕಷ್ಯಪ್ ಕೂಡ ಎರಡನೇ ಸುತ್ತು ತಲುಪಿದ್ದಾರೆ. ಸೌರಭ್ 22-20, 20-22, 21-19ರಲ್ಲಿ ಹಾಂಕಾಂಗ್‌ನ ವಿಂಗ್ ಕಿ ವಾಂಗ್ ಎದುರೂ, ಜಯರಾಮನ್ 21-9, 21-12ರಲ್ಲಿ ಸ್ಥಳೀಯ ಆಟಗಾರ ಲುಕಾಸ್ ನುಸ್‌ಬಾಮರ್ ಎದುರು ಜಯ ಗಳಿಸಿದರು.

ಕಷ್ಯಪ್ 21-9, 21-10ರಲ್ಲಿ ರಷ್ಯಾದ ಸ್ಟಾನಿಸ್ಲಾವ್ ಪುಖೊವ್ ಎದುರು ಗೆದ್ದರು. ಈ ಜಯಕ್ಕೆ ಅವರು ಕೇವಲ 22 ನಿಮಿಷ ತೆಗೆದುಕೊಂಡರು. ಆದರೆ ಆರ್‌ಎಂವಿ ಗುರುಸಾಯಿದತ್ ಹಾಗೂ ಅರವಿಂದ್ ಭಟ್ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲು ಕಂಡರು.

ಗುರುದತ್ 11-21, 24-26ರಲ್ಲಿ ಚೀನಾದ ಜಿನ್ ಚೆನ್ ಎದುರು ಪರಾಭವಗೊಂಡರು. ಅರವಿಂದ್ 21-10, 16-21, 14-21ರಲ್ಲಿ ಉಕ್ರೇನ್‌ನ ಡಿಮಿಟ್ರೊ ಜವಾಸ್ಕಿ ಎದುರು ಸೋತರು.

ಮಿಶ್ರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ವಿ.ದಿಜು ಕೂಡ ಮೊದಲ ಸುತ್ತಿನಲ್ಲೇ ಸೋಲು ಕಂಡರು. ಅವರು 13-21, 15-21ರಲ್ಲಿ ಜಪಾನ್‌ನ ಶೋಜಿ ಸತೊ ಹಾಗೂ ಶಿಜುಕಾ ಮತ್ಸೊವ್ ಎದುರು ಶರಣಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.