ಮಂಗಳವಾರ, ಜನವರಿ 21, 2020
28 °C

ಬ್ಯಾಡ್ಮಿಂಟನ್ : ಚಿನ್ನ ಗೆದ್ದ ಸಿಂಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕಾವು (ಐಎಎನ್‌ಎಸ್): ಭಾರತದ ಪಿ.ವಿ ಸಿಂಧು ಅವರು ಭಾನುವಾರ ಮುಕ್ತಾಯವಾದ ಮಕಾವು ಓಪನ್ ಗ್ರ್ಯಾನ್‌ ಪ್ರಿ  ಟೂರ್ನಿಯ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 

ಸಿಂಧು ಅವರು ಕೆನಡಾದ ಮಿಚೆಲ್ ಲಿ ಅವರ ವಿರುದ್ಧ ಫೈನಲ್ ಪಂದ್ಯದಲ್ಲಿ ಸೆಣೆಸಿ ಪದಕವನ್ನು ತಮ್ಮದಾಗಿಸಿಕೊಂಡರು. 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರತಿಸ್ಪರ್ಧಿ ವಿರುದ್ಧ 21–15, 21–12ರ ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 11 ನೇ ಸ್ಥಾನದಲ್ಲಿರುವ ಸಿಂಧು ಶನಿವಾರ ನಡೆದ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ 21–13, 18–21, 21–19 ರಲ್ಲಿ ಚೀನಾದ ಕ್ವಿನ್ ಜಿನ್‌ಜಿಂಗ್ ವಿರುದ್ಧ ಗೆಲುವು ಪಡೆದಿದ್ದದರು.

ಈ ಮೊದಲು ಸಿಂಧು, ಮಲೇಷ್ಯಾ ಓಪನ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ಮಕಾವು ಓಪನ್ ಗ್ರ್ಯಾನ್‌ ಪ್ರಿ  ಟೂರ್ನಿಯ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಷಿಪ್ ಸಿಂಗಲ್ಸ್ ನಲ್ಲಿ ಸತತವಾಗಿ ಎರಡು ಚಿನ್ನದ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ 1983ರಲ್ಲಿ ನಡೆದ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪ್ರಕಾಶ್ ಪಡುಕೋಣೆ ಅವರು ಕಂಚಿನ ಪದಕ ಗೆದ್ದಿದ್ದರು. ಇದು ಸಿಂಗಲ್ಸ್ ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕವಾಗಿತ್ತು. 

 

ಪ್ರತಿಕ್ರಿಯಿಸಿ (+)