ಧಾರವಾಡ: ಬಳ್ಳಾರಿಯ ಸಿರಿಗೌಡ, ಇಲ್ಲಿ ಮುಕ್ತಾಯಗೊಂಡ ಮೆಟ್ಕಟ್್ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದ ವಾರಾಂತ್ಯ ಬ್ಯಾಡ್ಮಿಂಟನ್ ಟೂರ್ನಿಯ 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳೆರಡರಲ್ಲೂ ಜಯ ಸಾಧಿಸಿದರು.

ಸಿಂಗಲ್ಸ್ನಲ್ಲಿ ಉಡುಪಿ ಮೆಟ್ಕಟ್ ಸಂಸ್ಥೆಯ ಗ್ಲಾನ್ಸಿಯಾ ಪಿಂಟೋ ವಿರುದ್ಧ (21–18,21–15) ಜಯ ಗಳಿಸಿದ ಸಿರಿ ಡಬಲ್ಸ್ನಲ್ಲಿ ಗ್ಲಾನ್ಸಿಯಾ ಪಿಂಟೋ ಜೊತೆಗೂಡಿ ಬೆಳಗಾವಿಯ ನಮಿತಾ ಯಾಳಗಿ, ರಿಯಾ ಮೊಂತೆರೋ ಜೋಡಿಯನ್ನು (21–14, 17–21,21–10) ಮಣಿಸಿದರು.

ಇದೇ ವಯೋಮಿತಿಯ ಬಾಲಕರ ಸಿಂಗಲ್ಸ್ನಲ್ಲಿ ಬೆಳಗಾವಿ ಭೂಷಣ್ ಕ್ಲಬ್ನ ಅನಿರುದ್ಧ ರಾವ್ 21–18, 12–21, 21–16ರಿಂದ ಬೆಳಗಾವಿ ರಾಜನ್ ಕ್ಲಬ್ನ ತೇಜಸ್ ಕಲ್ಲೋಲ್ಕರ್ ವಿರುದ್ಧ ಜಯ ಸಾಧಿಸಿದರು. ಡಬಲ್ಸ್ನಲ್ಲಿ ತೇಜಸ್ ಕಲ್ಲೋಲ್ಕರ್ ಮತ್ತು ಅಜಿಂಖ್ಯ ಜೋಶಿ ಜೋಡಿ ಭೂಷಣ್ ಕ್ಲಬ್ನ ಅನಿರುದ್ಧ ರಾವ್–ಅಜೀಜ್ ವೈ ಜೋಡಿಯನ್ನು (21–15, 21–17) ಸೋಲಿಸಿದರು.

10 ವರ್ಷದೊಳಗಿನ ಬಾಲಕರ ಸಿಂಗಲ್ಸ್ನಲ್ಲಿ ಬೆಳಗಾವಿ ರಾಜನ್ ಕ್ಲಬ್ನ ಸುಜ್ಞಾನ್ ಕಿಣಿ, ಭೂಷಣ್ ಕ್ಲಬ್ನ ಓಂ ಎಲಿಗಾರ ವಿರುದ್ಧ (21–12, 21–9) ಜಯ ಗಳಿಸಿದರೆ, ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಸ್ಟಾರ್ಲೈನ್ನ ಮನಸ್ವಿ ಗಡ್ಕರಿ 21–10, 18–21, 11–7 (ನಿವೃತ್ತಿ)ರಿಂದ ಧಾರವಾಡ ಮೆಟ್ಕಟ್ನ ಸಾರಾ ಸಯ್ಯದ್ ವಿರುದ್ಧ ಗೆಲುವು ಸಾಧಿಸಿದರು.

ಪುರುಷರ ಡಬಲ್ಸ್ನಲ್ಲಿ ಧಾರವಾಡದ ಋಷಿಕೇಶ ಎಲಿಗಾರ–ಸೂರಜ್ ಸೌಂಶಿ ಜೋಡಿ ಮೆಟ್ಕಟ್ನ ರಾಘವೇಂದ್ರ ಪಾಟೀಲ–ಪ್ರಕಾಶ ಮಡಿವಾಳ ಜೋಡಿಯನ್ನು 21–13, 21–10ರಿಂದ ಸೋಲಿಸಿದರು.

ಸೈಕ್ಲಿಂಗ್ಗೆ ತಂಡ ಪ್ರಕಟ
ಹುಬ್ಬಳ್ಳಿ: ಇದೇ ತಿಂಗಳ 27ರಿಂದ 30ರ ವರೆಗೆ ಕೇರಳದ ತಿರುವನಂತಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ.

ಪುರುಷ ಹಾಗೂ ಬಾಲಕರ ವಿಭಾಗ: ಸಿದ್ದು ಕುರಣಿ, ಪೈಗಂಬರ್ ನದಾಫ್, ಭೀಮಪ್ಪ ವಿಜಯನಗರ, ಮಾಳಪ್ಪ ಮುರ್ತೆನ್ನವರ, ಕೃಷ್ಣಾ ನಾಯ್ಕೋಡಿ, ಸಚಿನ್ ಪವಾರ, ಗೋಪಾಲ ಯರಗುದ್ರಿ, ಯಲ್ಲಪ್ಪ ಶಿರಬೂರ, ಸಂತೋಷ ಕುರಣಿ, ರಾಜು ಬಾಟಿ, ಯೆಂಕಣ್ಣ ಕೆಂಗಲಗುತ್ತಿ ಮತ್ತು ಆನಂದ ದಂಡಿನ (ಕೋಚ್ ಚಂದ್ರಪ್ಪ ಕುರಣಿ, ವ್ಯವಸ್ಥಾಪಕ ಶೇಖರಗೌಡ ಪಾಟೀಲ); ಮಹಿಳೆಯರ ಮತ್ತು ಬಾಲಕಿಯರ ವಿಭಾಗ: ಸೌಮ್ಯಾ ಅರಸ್, ಗೀತಾಂಜಲಿ ಜೋತೆಪ್ಪನವರ, ಶಹೀರಾ ಅತ್ತಾರ, ರೇಣುಕಾ ದಂಡಿನ, ಸಿೀಮಾ ಆಡಗಲ್, ಸುನಂದಾ ಮೇತ್ರಿ, ಯಮನವ್ವ ಫಕ್ಕೀರಪ್ಪಗೋಳ, ಶ್ರೀದೇವಿ ನಿಕ್ಕಮ್, ಗೀತಾ ಮುದೆವ್ವಗೋಳ, ಶೈಲಾ ಮಟ್ಯಾಳ, ಮೇಘಾ ಗೂಗಾಡ ಮತ್ತು ರಾಜೇಶ್ವರಿ ಡುಳ್ಳಿ (ಕೋಚ್- ಕುಮಾರ ಹಳಬರ, ವ್ಯವಸ್ಥಾಪಕ ಮಹಾಂತಯ್ಯ ಹಿರೇಮಠ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.