ಭಾನುವಾರ, ಮೇ 16, 2021
27 °C

ಬ್ಯಾಡ್ಮಿಂಟನ್: ಸೈನಾ ಪರಾಭವ; ಸೆಮಿಗೆ ಶ್ರೀಕಾಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್ (ಪಿಟಿಐ): ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪರಾಭವಗೊಂಡಿದ್ದು, ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಕೆ.ಶ್ರೀಕಾಂತ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.



ಶುಕ್ರವಾರ ನಡೆದ ಕ್ವಾರ್ಟರ್  ಫೈನಲ್ ಪಂದ್ಯದಲ್ಲಿ ಸೈನಾ 21-13, 12-21, 18-21ರಲ್ಲಿ ಸಿಂಗಪುರದ ಜುವಾನ್ ಗು ಎದುರು ಪರಾಭವಗೊಂಡರು.



20 ವರ್ಷದ ಶ್ರೀಕಾಂತ್ ದಕ್ಷಿಣ ಕೊರಿಯಾದ ವಾನ್ ಹೊ ಸೊನ್ ಅವರನ್ನು 21-17,21-18 ರಲ್ಲಿ ಮಣಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್ ಅವರು ಥಾಯ್ಲೆಂಡ್‌ನ ಥಮ್ಮಸಿನ್ ಸಿತ್ತಿಕೊಮ್ ವಿರುದ್ಧ ಸೆಣಸಲಿದ್ದಾರೆ.



ಮೊದಲ ಗೇಮ್‌ನಲ್ಲಿ ಎರಡನೇ ರ‌್ಯಾಂಕ್‌ನ ಆಟಗಾರ್ತಿ ಸೈನಾ ಉತ್ತಮ ಪ್ರದರ್ಶನ ನೀಡಿದರು. ಆದರೆ ಉಳಿದ ಗೇಮ್‌ಗಳಲ್ಲಿ ಅದೇ ಮಟ್ಟದ ಆಟ ಕಾಯ್ದುಕೊಳ್ಳುವಲ್ಲಿ ಅವರು ವಿಫಲರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.