ಸೋಮವಾರ, ಮೇ 25, 2020
27 °C

ಬ್ಯಾಸ್ಕೆಟ್‌ಬಾಲ್: ಎಂಸಿಸಿ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃತಿಕಾ ತಂದಿತ್ತ 18 ಪಾಯಿಂಟ್‌ಗಳ ನೆರವಿನಿಂದ ಎಂಸಿಸಿ ತಂಡದವರು ಇಲ್ಲಿ ಮುಕ್ತಾಯವಾದ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.ಮೌಂಟ್ ಕಾರ್ಮೆಲ್ ಕಾಲೇಜು ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಎಂಸಿಸಿ ಕಾಲೇಜು 57-33ರಲ್ಲಿ ಎಸ್‌ಬಿಎಂಜೆಸಿ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.ವಿರಾಮದ ವೇಳೆಗೆ 28-14ರಲ್ಲಿ ಮುನ್ನಡೆ ಸಾಧಿಸಿದ್ದ ಎಂಸಿಸಿ ತಂಡಕ್ಕೆ ಗೆಲುವು ಸುಲಭವಾಗಿ ಒಲಿಯಿತು. ಕೃತಿಕಾ (18), ಸ್ವಾತಿ (10), ಸ್ನೇಹ (10) ಗಳಿಸಿ ಎಂಸಿಸಿ ತಂಡದ ಗೆಲುವಿಗೆ ಕಾರಣರಾದರು.ಎಸ್‌ಬಿಎಂಜೆಸಿ ತಂಡದ ಪರ ಸಿಮೊನೆಲ್ಲಾ (16), ಅಮೃತಾ (11) ಗಳಿಸಿ ಗಮನ ಸೆಳೆದರು.ಸತ್ಯಭಾಮ ವಿಶ್ವವಿದ್ಯಾಲಯಕ್ಕೆ ಪ್ರಶಸ್ತಿ: ಇದೇ ಟೂರ್ನಿಯ ಪುರುಷರ ವಿಭಾಗದಲ್ಲಿ ಸತ್ಯಭಾಮ ವಿಶ್ವವಿದ್ಯಾಲಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ಈ ತಂಡ ಫೈನಲ್ ಪಂದ್ಯದಲ್ಲಿ 73-58ರಲ್ಲಿ ಕ್ರೈಸ್ತ ಕಾಲೇಜು ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆಯಿತು. ವಿರಾಮದ ವೇಳೆಗೆ ಉಭಯ ತಂಡಗಳು 40-40 ಪಾಯಿಂಟ್‌ಗಳೊಂದಿಗೆ ಸಮಬಲ ಸಾಧಿಸಿದ್ದವು. ಆದರೆ ವಿರಾಮದ ನಂತರ ಸತ್ಯಭಾಮ ಕಾಲೇಜು ತಂಡದವರು ಉತ್ತಮ ಆಟ ಪ್ರದರ್ಶಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಶಿವಬಾಲಾ (20), ಹಕೀಮ್ (17) ಗಳಿಸಿ ಸತ್ಯಭಾಮ ತಂಡದ ಗೆಲುವಿಗೆ ಕಾರಣರಾದರು. ಕ್ರೈಸ್ತ ಕಾಲೇಜಿನ ಮಿನಾಲ್ (23) ಹಾಗೂ ಆದೀಲ್ (15) ಪಾಯಿಂಟ್ ಗಳಿಸಿ ಗಮನ ಸೆಳೆದರು.ಇದಕ್ಕೂ ಮುನ್ನ ನಡೆದ ಪುರುಷರ ಸೆಮಿಫೈನಲ್ ಪಂದ್ಯಗಳಲ್ಲಿ  ಕ್ರೈಸ್ತ ಕಾಲೇಜು 57-49ರಲ್ಲಿ ಎಸ್‌ಜೆಸಿಸಿ ತಂಡದ ಮೇಲೂ, ಸತ್ಯಭಾಮ ವಿಶ್ವವಿದ್ಯಾಲಯ 68-49ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನ ವಿರುದ್ಧವೂ ಗೆಲುವು ಪಡೆದು ಫೈನಲ್‌ಗೆ ಪ್ರವೇಶಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.