ಬ್ಯಾಸ್ಕೆಟ್‌ಬಾಲ್: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ

ಸೋಮವಾರ, ಮೇ 27, 2019
21 °C

ಬ್ಯಾಸ್ಕೆಟ್‌ಬಾಲ್: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಬಾಲಕಿಯರ ತಂಡದವರು ಲಖನೌನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಸಬ್ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಬಾಲಕಿಯರ ತಂಡ 46-35ಪಾಯಿಂಟ್‌ಗಳಿಂದ ಕೇರಳ ತಂಡವನ್ನು ಮಣಿಸಿತು.ಈ ಪಂದ್ಯದಲ್ಲಿಯು ಮಿಂಚಿನ ಪ್ರದರ್ಶನ ನೀಡಿದ್ದು ಲೋಪಮುದ್ರ. ಈ ಆಟಗಾರ್ತಿ 20 ಪಾಯಿಂಟ್ ಗಳಿಸಿದರು. ವಿರಾಮದ ವೇಳೆಗೆ ವಿಜಯಿ ತಂಡ 12-11ರಲ್ಲಿ ಅಲ್ಪ ಮುನ್ನಡೆಯಲ್ಲಿತ್ತು. ನಂತರ ಅನುಷಾ (8) ಹಾಗೂ ಸಂಧ್ಯಾ (8) ಅವರ ಉತ್ತಮ ಆಟದ ನೆರವಿನಿಂದ ಗೆಲುವಿನ ಅಂತರ ಹೆಚ್ಚಿಸಿಕೊಂಡಿತು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry