ಮಂಗಳವಾರ, ಮೇ 24, 2022
30 °C

ಬ್ಯಾಸ್ಕೆಟ್‌ಬಾಲ್: ಭಾರತದ ತಂಡಗಳಿಗೆ ಬಂಗಾರದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಪುರುಷರ ಹಾಗೂ ಮಹಿಳೆಯರ ತಂಡದವರು ಶ್ರೀಲಂಕಾದ ಹಂಬಂಟೊಟಾದಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಬೀಚ್ ಕ್ರೀಡಾಕೂಟದ 3್ಡ3 ಬ್ಯಾಸ್ಕೆಟ್‌ಬಾಲ್‌ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡರು.ಫೈನಲ್ ಪಂದ್ಯದಲ್ಲಿ ಭಾರತದ ಪುರುಷರು 21-16 ಪಾಯಿಂಟುಗಳ ಅಂತರದಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಪರಾಭವಗೊಳಿಸಿದರು. ವಿಜಯಿ ತಂಡದ ಜಗದೀಪ್ ಸಿಂಗ್ ಅವರು ಆಕರ್ಷಕ ಆಟದಿಂದ ಗಮನ ಸೆಳೆದರು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ. ಭಾರತದವರು ಲೀಗ್ ಹಂತದಲ್ಲಿ ಮಾಲ್ಡೀವ್ಸ್, ಭೂತಾನ್ ಹಾಗೂ ಶ್ರೀಲಂಕಾ ವಿರುದ್ಧ ಆಡಿದ್ದ ಮೂರು ಪಂದ್ಯಗಳಲ್ಲಿಯೂ ಗೆಲುವು ಪಡೆದಿದ್ದರು.ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಭಾರತವು 17-7ರಲ್ಲಿ ಮಾಲ್ಡೀವ್ಸ್ ಎದುರು ಜಯ ಸಾಧಿಸಿತು. ಲೀಗ್ ಹಂತದಲ್ಲಿ ನೇಪಾಳ, ಮಾಲ್ಡೀವ್ಸ್ ಹಾಗೂ ಲಂಕಾ ಎದುರು ಭಾರತ ಗೆದ್ದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.