ಗುರುವಾರ , ಜನವರಿ 23, 2020
29 °C

ಬ್ಯಾಸ್ಕೆಟ್‌ಬಾಲ್: ಮಂಡ್ಯಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಂಡ್ಯದ ವಿವೇಕಾನಂದ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡ ಇಲ್ಲಿಯ ರೋವರ್ಸ್‌ ಕ್ಲಬ್ ಅಂಕಣದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ 59-45ರಿಂದ ರೋವರ್ಸ್‌ ಕ್ಲಬ್ `ಎ~ ತಂಡವನ್ನು ಪರಾಭವಗೊಳಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿತು.ಅನಿಲಕುಮಾರ್ (2) ಪಾಯಿಂಟ್) ಹಾಗೂ ಅರವಿಂದ್ (15) ತಂಡದ ಗೆಲುವಿನಲ್ಲಿ ಮಿಂಚಿದರು. ಬೆಂಗಳೂರಿನ  ಮೌಂಟ್ಸ್ ಸ್ಪೋರ್ಟ್ಸ್ ಕ್ಲಬ್ ತಂಡ 30-21ರಿಂದ ತನ್ನದೇ ನಗರದ ಜಯನಗರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಪರಾಭವಗೊಳಿಸುವ ಮೂಲಕ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಪಡೆಯಿತು.ಶಾಲಾ ಬಾಲಕರ ವಿಭಾಗದಲ್ಲಿ ಹುಬ್ಬಳ್ಳಿಯ ಸೇಂಟ್ ಮೈಕೆಲ್ಸ್ ಶಾಲಾ ತಂಡ 33-27ರಿಂದ ಧಾರವಾಡದ ಪವನ್ ಇಂಗ್ಲಿಷ್ ಮಾಧ್ಯಮ ಶಾಲೆ ವಿರುದ್ಧ ಜಯ ಸಾಧಿಸುವ ಮೂಲಕ ಪ್ರಶಸ್ತಿ ಮೇಲೆ ಹಿಡಿತ ಸಾಧಿಸಿತು.

ಪ್ರತಿಕ್ರಿಯಿಸಿ (+)