ಮಂಗಳವಾರ, ಏಪ್ರಿಲ್ 20, 2021
24 °C

ಬ್ಯಾಸ್ಕೆಟ್‌ಬಾಲ್: ಸದರ್ನ್ ಬ್ಲೂಸ್‌ಗೆ ರೋಚಕ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಮರ್ಥ್ ತಂದಿತ್ತ 23 ಪಾಯಿಂಟ್‌ಗಳ ನೆರವಿನಿಂದ ಸದರ್ನ್ ಬ್ಲೂಸ್ ತಂಡ ರಾಜ್ಯ `ಬಿ~ ಡಿವಿಷನ್ ಲೀಗ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆಯಿತು. ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬ್ಲೂಸ್ ತಂಡ 59-51 ರಲ್ಲಿ ಕನಕ ಕೋಲಾರ ತಂಡವನ್ನು ಮಣಿಸಿತು.



ಮತ್ತೊಂದು ಪಂದ್ಯದಲ್ಲಿ ಜೆಎಸ್‌ಸಿ 55- 49 ರಲ್ಲಿ ಮಂಗಳೂರಿನ ಕೆ.ಎಸ್. ಹೆಗ್ಡೆ ವಿರುದ್ಧ ಜಯ ಸಾಧಿಸಿತು. ವಿರಾಮದ ವೇಳೆಗೆ ವಿಜಯಿ ತಂಡ 26-22 ರಲ್ಲಿ ಮುನ್ನಡೆ ಪಡೆದಿತ್ತು. ಇತರ ಪಂದ್ಯಗಳಲ್ಲಿ ಬೀಗಲ್ಸ್ 46-28 ರಲ್ಲಿ ಬಿಎಸ್‌ಎನ್‌ಎಲ್ ವಿರುದ್ಧವೂ, ಸ್ಪೋರ್ಟ್ಸ್ ಹಾಸ್ಟೆಲ್ 71-48 ರಲ್ಲಿ ನ್ಯಾಷನಲ್ಸ್ ಮೈಸೂರು ಎದುರೂ ಗೆಲುವು ಪಡೆದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.