ಗುರುವಾರ , ಜೂನ್ 17, 2021
22 °C

ಬ್ರಹ್ಮಾಂಡ ರಹಸ್ಯದ ಸಾಕ್ಷ್ಯ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಬ್ರಹ್ಮಾಂಡ ರಹಸ್ಯಕ್ಕೆ ಸಂಬಂಧಿಸಿದಂತೆ ಖಗೋಳಶಾಸ್ತ್ರಜ್ಞರು ಇದೇ ಮೊದಲ ಬಾರಿಗೆ ಪ್ರತ್ಯಕ್ಷ ಸಾಕ್ಷ್ಯವೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಕುರಿತು ಸಂಶೋಧನೆಯಲ್ಲಿ ನಿರತರಾಗಿರುವ ವಿಜ್ಞಾನಿಗಳು, ಜಗತ್ತು ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ, ಅಂದರೆ, 1400 ಕೋಟಿ ವರ್ಷಗಳ ಹಿಂದೆ ಉತ್ಪತ್ತಿಯಾದ ಗುರುತ್ವಾಕರ್ಷಣ ಅಲೆಗಳ ಚಿತ್ರವೊಂದನ್ನು ಸೆರೆಹಿಡಿದಿದ್ದಾರೆ.

ಬ್ರಹ್ಮಾಂಡ ರಹಸ್ಯ ಸಂಶೋಧನಾ ತಂಡದ, ‘ಬ್ರಹ್ಮಾಂಡ ಹೊರಗ್ಯಾಲಕ್ಸಿ ಧ್ರುವೀಕರಣ ಹಿನ್ನೆಲೆ ಚಿತ್ರ’  (ಬಿಐಸಿಇಪಿ2) ವಿಭಾಗದ  ಸಹಯೋಗದೊಂದಿಗೆ ಸಂಶೋಧಕರು ಈ ಸಾಕ್ಷ್ಯವನ್ನು ಕಲೆ ಹಾಕಿರುವುದಾಗಿ ಘೋಷಿಸಿದ್ದಾರೆ. ಜಗತ್ತು ಹುಟ್ಟಲು ‘ಮಹಾ ಸ್ಪೋಟ‘ (ಅಣು –ಪರಮಾಣುಗಳ ಸಂಫರ್ಷ) ಕಾರಣ­ ಎನ್ನುವುದು ಇಂದಿಗೂ ಸಿದ್ಧಾಂತ­ವಾ­ಗಿಯೇ ಉಳಿದಿತ್ತು. ಆದರೆ ಈಗ ಅದಕ್ಕೆಲ್ಲ ಪೂರಕವಾಗಿ ಈ ಮಾಹಿತಿ­ ದೊರೆತಿದೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.