ಗುರುವಾರ , ಏಪ್ರಿಲ್ 15, 2021
31 °C

ಬ್ರಹ್ಮಿಣಿ ಸ್ಟೀಲ್ಸ್ ಹೆಸರು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ರೂ. 36,000 ಕೋಟಿ  ಮೌಲ್ಯದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪಿಸುವುದಾಗಿ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಬ್ರಹ್ಮಿಣಿ ಸ್ಟೀಲ್ಸ್ ಕರ್ನಾಟಕ ಲಿಮಿಟೆಡ್ ಕಂಪೆನಿ ‘ಉತ್ತಮ್ ಗಾಲ್ವಾ ಫೆರಸ್ ಲಿಮಿಟೆಡ್’ ಎಂಬುದಾಗಿ ಹೆಸರು ಬದಲಿಸಿಕೊಂಡಿದೆ. ತಮ್ಮ ಕಂಪೆನಿಯ ಹೆಸರನ್ನು ಉತ್ತಮ್ ಗಾಲ್ವಾ ಫೆರಸ್ ಲಿ. ಎಂಬುದಾಗಿ ಬದಲಿಸಿಕೊಂಡಿದ್ದು, ಕಂಪೆನಿಗಳ ರಿಜಿಸ್ಟ್ರಾರರು ಬದಲಾವಣೆಯನ್ನು ಏಪ್ರಿಲ್ 7ರಂದು ಅನುಮೋದಿಸಿದ್ದಾರೆ ಎಂದು ಬ್ರಹ್ಮಿಣಿಯ ಪ್ರತಿನಿಧಿಗಳು ಏ. 11ರಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.ವಿಶ್ವ ಹೂಡಿಕೆದಾರರ ಸಮ್ಮೇಳನದಲ್ಲಿ ಮಾಡಿಕೊಂಡ ಹೂಡಿಕೆ ಒಪ್ಪಂದದ ಹಿನ್ನೆಲೆಯಲ್ಲಿಯೇ ಈ ಪ್ರಮಾಣಪತ್ರ ಸಲ್ಲಿಸಲಾಗಿದೆ. ಆದರೆ ಅವರ ಯೋಜನೆಗಾಗಿ ಬಳ್ಳಾರಿಯ ವಿವಿಧೆಡೆ ಐದು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಚಾಲನೆ ನೀಡಿತ್ತು. ಅದಕ್ಕಾಗಿ ಬ್ರಹ್ಮಿಣಿ ಕಂಪೆನಿ 300 ಕೋಟಿ ರೂಪಾಯಿಯನ್ನೂ ಪಾವತಿಸಿತ್ತು. ಅಷ್ಟರಲ್ಲಿ ರಾಜ್ಯದಲ್ಲಿನ ಹೂಡಿಕೆ ಯೋಜನೆಯಿಂದ ಹಿಂದೆ ಸರಿಯಲು ರೆಡ್ಡಿ ನಿರ್ಧರಿಸಿದ್ದರು. ಆ ಬಳಿಕ ಕಂಪೆನಿಯ ಹೆಸರು ಬದಲಿಸಲಾಗಿದೆ. ಹೆಸರು ಬದಲಿಸಿದ ಬಳಿಕ ಕಂಪೆನಿಯ ಕೆಲ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.