ಶನಿವಾರ, ಫೆಬ್ರವರಿ 27, 2021
28 °C
ಕ್ರೀಡಾ ನೆನಪಿನ ದೋಣಿ....

ಬ್ರಿಜೇಶ್‌ ಪಟೇಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಜೇಶ್‌ ಪಟೇಲ್‌

ಇದು 45 ವರ್ಷಗಳ ಹಿಂದಿನ ಮಾತು. 1969ರಲ್ಲಿ ನಾನು ಬೆಂಗಳೂರು ವಿಶ್ವವಿದ್ಯಾಲಯ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿದ್ದೆ. ಆಗ ಈಗಿನಂತೆ ಜಿಲ್ಲೆಗೊಂದು ವಿಶ್ವವಿದ್ಯಾಲಯಗಳಿರಲಿಲ್ಲ. ಬೆಂಗಳೂರು, ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯ­ಗಳಿದ್ದವು. ಅಂತಹದ್ದೊಂದು ವಿವಿ ತಂಡದಲ್ಲಿ ಸ್ಥಾನ ಪಡೆಯುವುದೆಂದರೆ ಅಂದು ಅದು ಮಹತ್ತರ ಸಂಗತಿ.

ನಾನು ಅಂತರ ವಿವಿ ಟೂರ್ನಿಯಲ್ಲಿ ತೋರಿದ್ದ ಸಾಮರ್ಥ್ಯ ದಿಂದಾಗಿ ರಾಜ್ಯ ಜೂನಿಯರ್‌ ತಂಡದಲ್ಲಿ ಸ್ಥಾನ ಗಳಿಸಿದ್ದೆ. ಕಿರಿಯರ ಮಟ್ಟದ ಟೂರ್ನಿಗಳಲ್ಲಿ ನನ್ನ ಬ್ಯಾಟಿಂಗ್‌ ಹಿರಿಯ ಆಟಗಾರರೆಲ್ಲರ ಗಮನ ಸೆಳೆದಿತ್ತು. ರಾಷ್ಟ್ರೀಯ ಕಿರಿಯರ ತಂಡಕ್ಕೂ ಆಯ್ಕೆಯಾಗಿದ್ದೆ.ಹೀಗಾಗಿ ಅದೇ ವರ್ಷ ರಾಜ್ಯ ತಂಡಕ್ಕೂ ಆಯ್ಕೆ ಯಾದೆ. ಆಗ ಸುಬ್ರಹ್ಮಣ್ಯ ಅವರು ರಾಜ್ಯ ತಂಡದ ನಾಯಕರಾಗಿದ್ದರು. ಗುಂಟೂರಿನಲ್ಲಿ ಆಂಧ್ರದ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ನಾನು ಆಡಿದ್ದೆ. ಆಗ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ನಮ್ಮ ತಂಡದಲ್ಲಿದ್ದರು. ನನಗೆ ಕೊನೆಗೆ ಅವಕಾಶ ಸಿಕ್ಕಿತು. 11 ರನ್‌ ಗಳಿಸಿ ಔಟಾಗದೇ ಉಳಿದಿದ್ದೆ. ನನ್ನ ಕ್ರಿಕೆಟ್‌ ಬದುಕಿನ ಆ ಆರಂಭದ ದಿನಗಳ ನೆನಪು ಯಾವತ್ತೂ ಮನಸ್ಸಿಗೆ ಮುದ ನೀಡುವಂತದ್ದೇ.

ಸಾಧನೆ

1974ರಿಂದ 79ರವರೆಗೆ ಬ್ರಿಜೇಶ್‌ ಪಟೇಲ್‌ 21 ಟೆಸ್ಟ್‌ಗಳಲ್ಲಿ ಆಡಿದ್ದು 972 ರನ್‌ ಗಳಿಸಿದ್ದರೆ, 10 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ 243 ರನ್‌ ಗಳಿಸಿದ್ದಾರೆ. ಒಟ್ಟು ­203 ಮೊದಲ ದರ್ಜೆ ಪಂದ್ಯಗಳಲ್ಲಿ ಆಡಿರುವ ಇವರು 11,911 ರನ್‌ಗಳನ್ನು ಗಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.