ಲಂಡನ್ (ಪಿಟಿಐ): ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರ ಭೇಟಿ ಅನುಮತಿಗೆ 2.50 ಲಕ್ಷ ಪೌಂಡ್ವರೆಗೆ ದೇಣಿಗೆ ಕೇಳಿರುವುದು `ಕುಟುಕು ಕಾರ್ಯಾಚರಣೆ~ಯಿಂದ ಬಹಿರಂಗವಾದ ಹಿನ್ನೆಲೆಯಲ್ಲಿ, ಕನ್ಸರ್ವೇಟಿವ್ ಪಕ್ಷದ ಸಹ ಖಜಾಂಚಿ ಪೀಟರ್ ಕ್ರಡ್ಡಾಸ್ ರಾಜೀನಾಮೆ ನೀಡಿದ್ದಾರೆ.

ಇದರಿಂದ ಕೆಮರಾನ್ ಅವರ ಪಕ್ಷವು ತೀವ್ರ ಮುಜುಗರ ಅನುಭವಿಸುವಂತಾಗಿದೆ.

`ಪ್ರಧಾನಿ ಭೇಟಿ ಅನುಮತಿ ಪಡೆಯುವುದು ಸುಲಭವಲ್ಲ. ಹೆಚ್ಚು ಹಣ ಕೊಟ್ಟಷ್ಟೂ ಗಣ್ಯ ವ್ಯಕ್ತಿಗಳ ಭೇಟಿಗೆ (ಚಾನ್ಸಲರ್ ಜಾರ್ಜ್ ಆಸ್ಬೋರ್ನ್ ಸೇರಿದಂತೆ) ಹೆಚ್ಚಿನ ಅವಕಾಶ ಸಿಗುತ್ತದೆ. ನೀವು ಅವರಿಗೆ ನಿಮಗಿಷ್ಟ ಬಂದ ಪ್ರಶ್ನೆಗಳನ್ನು ಕೇಳಬಹುದು~ ಎಂದು ಕ್ರಡ್ಡಾಸ್ ಹೇಳಿರುವುದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದೆ.

ಪ್ರಧಾನಿ ಭೇಟಿಗೆ ಅನುಮತಿ ದೊರಕಿಸಿಕೊಡಲು ತಾವು ಹಣ ಕೇಳಿಲ್ಲ ಎಂದು ಕ್ರಡ್ಡಾಸ್, ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. `ರಾಜಕಾರಣಿಗಳನ್ನು ಅಕ್ರಮವಾಗಿ ಭೇಟಿಯಾಗಲು ದಾನಿಗಳಿಗೆ ಸಾಧ್ಯವಿಲ್ಲ. ಅಲ್ಲದೇ ಅವರು ಸರ್ಕಾರದ ನೀತಿಯ ಮೇಲೂ ಪ್ರಭಾವ ಬೀರಲು ಆಗದು~ ಎಂದೂ ಅವರು ಹೇಳಿದ್ದಾರೆ.

ಆದರೆ ಕೆಮರಾನ್ ಅವರು ಕ್ರಡ್ಡಾಸ್ ಸಮರ್ಥನೆಗೆ ಸೊಪ್ಪು ಹಾಕಿಲ್ಲ. `ಪ್ರಧಾನಿ ಭೇಟಿ ಅನುಮತಿಗೆ ಹಣ ಕೇಳಿರುವುದು ಅಕ್ರಮ~ ಎಂದಿದ್ದಾರೆ.

`ಕ್ರಡ್ಡಾಸ್ ರಾಜೀನಾಮೆ ನೀಡಿರುವುದು ಸರಿಯಾಗಿಯೇ ಇದೆ. ಸೂಕ್ತ ತನಿಖೆ ನಡೆಸಿ ಇಂಥ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ~ ಎಂದೂ ಕೆಮರಾನ್ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.